‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ ನವೆಂಬರ್‌ನಿಂದಲೇ ಜಾರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Date:

ಹೃದಯಾಘಾತವಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನ ಉಳಿಸುವ ನಿಟ್ಟಿನಲ್ಲಿ ‘ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಯೋಜನೆಯನ್ನ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಅದನ್ನು ನವೆಂಬರ್ ತಿಂಗಳಲ್ಲೇ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ‌‌ ಘೋಷಣೆ ಮಾಡಿದ್ದರು. ಅದರಂತೆ ನವೆಂಬರ್ ತಿಂಗಳಿನಲ್ಲಿ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಯೋಜನೆಯ ಭಾಗವಾಗಿ ಹಬ್(Hub) ಮತ್ತು spoke(ಸ್ಪೋಕ್) ಎಂಬ ಎರಡು ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ(AED) ಸಾಧನಗಳನ್ನು ಅಳವಡಿಸಲಾಗುವುದು ಎಂದು ಗುಂಡೂರಾವ್ ತಿಳಿಸಿದ್ದಾರೆ.

ಇತ್ತೀಚೆಗೆ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗ್ತಿರುವುದನ್ನು ಗಮನಿಸಿದ್ದೇವೆ. ಶೇ 35ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಕಾರಿ ಸಂಗತಿ. ಗೋಲ್ಡನ್ ಹವರ್ ಒಳಗೆ, ಸಕಾಲಕ್ಕೆ ಅವರಿಗೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಹೀಗಾಗಿ ಜನಸಾಮಾನ್ಯರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

Dinesh-Gundu-Rao

ಈ ಯೋಜನೆಯ ಇನ್ನೊಂದು ಭಾಗವಾಗಿ 2 ಕೋಟಿ ವೆಚ್ಚದಲ್ಲಿ AED(Automated External Defibrillator) ಸಾಧನಗಳನ್ನ ಅಳವಡಿಸಲು ನಿರ್ಧರಿಸಿದ್ದೇವೆ. ಬಸ್ ಸ್ಟಾಂಡ್, ರೈಲ್ಬೇ ಸ್ಟೇಷನ್ಸ್, ಏರ್ಪೋರ್ಟ್ಸ್, ವಿಧಾನ ಸೌಧ, ಕೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಡಿಫಿಬ್ರಿಲೇಟರ್ ಗಳನ್ನ ಅಳವಡಿಸಲಿದ್ದೇವೆ. ಬೆಂಗಳೂರು ಹೊರತಾಗಿಯೂ ರಾಜ್ಯದ ಪ್ರಮುಖ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನಸಂದಣಿ ಇರುವಂತಹ ಜಾಗಗಳಲ್ಲಿ ಎಇಡಿ ಸಾಧನಗಳನ್ನ ಇಡುತ್ತೇವೆ. 50 ಎಇಡಿ ಡಿಫಿಬ್ರಿಲೇಟರ್ ಗಳನ್ನ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಯೋಜಿಸಲಾಗಿದೆ. ಒಂದು ಎಇಡಿ ಸಾಧನ ಖರೀದಿಗೆ 1 ಲಕ್ಷದ 10 ಸಾವಿರದ ವರೆಗೆ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಈ ಸಾಧನಗಳ ಖರೀದಿ ಪ್ರಗತಿಯಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಹಬ್ ಆಂಡ್ ಸ್ಫೋಕ್ ಮಾದರಿಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸಲಾಗುವುದು. 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳನ್ನು ಸ್ಫೋಕ್ ಕೇಂದ್ರಗಳಾಗಿ ಮತ್ತು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 10 ಹಬ್‌ಗಳನ್ನು ರಚಿಸಲಾಗುವುದು ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.

ಕಾರ್ಯ ನಿರ್ವಹಿಸುವ ಬಗೆ ಹೇಗೆ?
ಯಾರಿಗೇ ಎದೆನೋವು ಕಾಣಿಸಿಕೊಂಡರು, ಅವರು ನಮ್ಮ SPOKE ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ECG ಮಾಡಲಾಗುತ್ತದೆ. ಜೊತೆಗೆ AI ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಗಂಭೀರ ಇದೆಯಾ, ಇಲ್ಲವೇ ಅನ್ನೋದನ್ನ ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತದೆ. Tricog ಸಂಸ್ಥೆಯವರ AI ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನ ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾರು ಕ್ರಿಟಿಕಲ್ ಹಂತದಲ್ಲಿದ್ದಾರೆ, ಅವರಿಗೆ SPOKE ಕೇಂದ್ರಗಳಲ್ಲೇ ಅಂದರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ Tenecteplase ಇಂಜೆಕ್ಷನ್‌ ನೀಡಲಾಗುತ್ತದೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ‘ಕ್ರಿಟಿಕಲ್’ ಹಂತದಲ್ಲಿ ಇರುವವರಿಗೆ ತಕ್ಷಣಕ್ಕೆ ‘ಹಾರ್ಟ್ ಅಟ್ಯಾಕ್’ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ.

ಒಂದು Tenecteplase ಚುಚ್ಚುಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ವೆಚ್ಚ ತಗಲುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ತಾಲೂಕು ಅಥವಾ ಜಿಲ್ಲಾಸ್ಪತ್ರೆಯ Spoke ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಬ್ ಕೇಂದ್ರಗಳಿಗೆ ಆ್ಯಂಬುಲೆನ್ಸ್ ಸಹಾಯದೊಂದಿಗೆ ಕಳುಹಿಸಲಾಗುತ್ತದೆ. ಅಲ್ಲಿ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನ ಕಲ್ಪಿಸಲಾಗುತ್ತದೆ. ಆ್ಯಂಜಿಯೋಗ್ರಾಮ್ ಅಥವಾ ಆ್ಯಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನ ಈ ಹಬ್ ಕೇಂದ್ರಗಳಲ್ಲಿ ಪಡೆಯಬಹುದು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಹಬ್‌ಗಳಲ್ಲೂ ಕೂಡಾ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕಾರ್ಡುದಾರರು ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.

ಜಯದೇವಾ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೂರು ಹಬ್ ಗಳ ವ್ಯಾಪ್ತಿಗೆ 45 ಸ್ಪೋಕ್ ಕೇಂದ್ರಗಳನ್ನು ಸಂಪರ್ಕಿಸಲಾಗಿದೆ. ಇವುಗಳಲ್ಲಿ 35 ತಾಲೂಕು ಆಸ್ಪತ್ರೆಗಳು ಮತ್ತು 10 ಜಿಲ್ಲಾಸ್ಪತ್ರೆಗಳು ಸೇರಿವೆ.

ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರದಲ್ಲಿ 13 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಒಳಗೊಂಡ ಏಳು ಹಬ್‌ಗಳನ್ನು ರಚಿಸಲಾಗಿದೆ. ಇವುಗಳ ವ್ಯಾಪ್ತಿಗೆ 40 spoke ಕೇಂದ್ರಗಳನ್ನು ಲಿಂಕ್ ಮಾಡಲಾಗಿದೆ. ಇದರಲ್ಲಿ 34 ತಾಲೂಕು ಮತ್ತು 6 ಜಿಲ್ಲಾಸ್ಪತ್ರೆಗಳು ಸೇರಿವೆ.

ಈ ಕೇಂದ್ರಗಳ ಸಂಪೂರ್ಣ ವಿವರ ಹೀಗಿದೆ:
ದಕ್ಷಿಣ ಕನ್ನಡ ಹಬ್:
ಯೇನೆಪೋಯ ಆಸ್ಪತ್ರೆ, ಕೆಎಂಸಿ ಮಣಿಪಾಲ್, ಫಾದರ್ ಮುಲ್ಲರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.
ಇದರ Spoke ಕೇಂದ್ರಗಳು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಸ್ಪತ್ರೆ, ಸುಳ್ಯ, ಬೆಳ್ತಂಗಡಿ, ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆ.

ಶಿವಮೊಗ್ಗ ಹಬ್ :
ಸಹ್ಯಾದ್ರಿ ನಾರಾಯಣ ಆಸ್ಪತ್ರೆ
Spoke ಕೇಂದ್ರಗಳು : ಸಾಗರ, ತೀರ್ಥಹಳ್ಳಿ, ಸೊರಬ, ಕಡೂರು, ಕೊಪ್ಪ, ತರಿಕೆರೆ ತಾಲೂಕು ಆಸ್ಪತ್ರೆಗಳು

ದಾವಣಗೆರೆ ಹಬ್:
ಎನ್ ಎಚ್ ಶಾಮನೂರು ಶಿವಶಂಕರಪ್ಪ ಸಂಸ್ಥೆ, ಬಸವೇಶ್ವರ ವೈದ್ಯಕೀಯ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.
Spoke ಕೇಂದ್ರಗಳು : ಹರಿಹರ, ಜಗಳೂರು, ಹಾವೇರಿ, ಶಿಗ್ಗಾವ್, ಚಳ್ಳಕೆರೆ ತಾಲೂಕು ಆಸ್ಪತ್ರೆಗಳು ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆ.

ಬಳ್ಳಾರಿ ಹಬ್
ವಿಮ್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
Spoke ಕೇಂದ್ರಗಳು : ಸಿರಗುಪ್ಪ, ಕೂಡ್ಲಿಗಿ, ಹೊಸಪೇಟೆ, ಹೆಚ್.ಬಿ ಹಳ್ಳಿ ತಾಲೂಕು ಆಸ್ಪತ್ರೆಗಳು.

ಧಾರವಾಡ ಹಬ್
ಎಸ್‌ಡಿಎಂ ನಾರಾಯಣ ಹೃದಯ ಕೇಂದ್ರ, ಕಿಮ್ಸ್ ಹುಬ್ಬಳ್ಳಿ
Spoke ಕೇಂದ್ರಗಳು : ಧಾರವಾಡ ಜಿಲ್ಲಾಸ್ಪತ್ರೆ, ಕುಂದಗೋಳ, ಯಲ್ಲಾಪುರ, ಹಳಿಯಾಳ, ನರಗುಂದ, ಶಿರಹಟ್ಟಿ ತಾಲೂಕು ಆಸ್ಪತ್ರೆಗಳು.

ಬಾಗಲಕೋಟೆ ಹಬ್
ಎಸ್ ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಸ್ಪತ್ರೆ
Spoke ಕೇಂದ್ರಗಳು : ಬಾಗಲಕೋಟೆ ಜಿಲ್ಲಾಸ್ಪತ್ರೆ, ಮೂದೋಳ್, ಹುನುಗುಂದ, ಯಲಬುರ್ಗಾ, ಕುಷ್ಟಗಿ ತಾಲೂಕು ಆಸ್ಪತ್ರೆಗಳು.

ಬೆಳಗಾವಿ ಹಬ್
ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆ
Spoke ಕೇಂದ್ರಗಳು : ಬೈಲಹೊಂಗಲ, ಸವದತ್ತಿ, ರಾಮದುರ್ಗಾ, ಗೋಕಾಕ್, ನಿಪ್ಪಾಣಿ, ಹುಕ್ಕೇರಿ, ಖಾನಾಪುರ ತಾಲೂಕು ಆಸ್ಪತ್ರೆಗಳು.

ಬೆಂಗಳೂರು ಹಬ್
ಜಯದೇವಾ ಹೃದ್ರೋಗ ಸಂಸ್ಥೆ ಬೆಂಗಳೂರು.
Spoke ಕೇಂದ್ರಗಳು : ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲಾಸ್ಪತ್ರೆಗಳು.
ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ಮಾಗಡಿ, ತಾಲೂಕು ಆಸ್ಪತ್ರೆಗಳು.
ಚಿಂತಾಮಣಿ, ಕೊರಟಗೆರೆ, ಶಿರಾ, ಮಧುಗಿರಿ, ಮಾಲೂರು, ಶ್ರೀನಿವಾಸಪುರ ಸರ್ಕಾರ ಆಸ್ಪತ್ರೆಗಳು.

ಮೈಸೂರು ಹಬ್
ಜಯದೇವಾ ಆಸ್ಪತ್ರೆ, ಮೈಸೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
Spoke ಕೇಂದ್ರಗಳು : ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ ಜಿಲ್ಲಾಸ್ಪತ್ರೆಗಳು
ಕೆ.ಆರ್ ನಗರ, ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ ಕೋಟೆ, ನಂಜನಗೂಡು, ಟಿ. ನರಸೀಪುರ, ತಾಲೂಕು ಆಸ್ಪತ್ರೆಗಳು. ಚನ್ನರಾಯಪಟ್ಟಣ, ಎಸ್.ಆರ್ ಪಟ್ಟಣ, ಕೆ.ಆರ್ ಪೇಟೆ, ಪಾಂಡವಪುರ, ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗಳು.

ಕಲಬುರಗಿ ಹಬ್
ಜಯದೇವಾ ಆಸ್ಪತ್ರೆ, ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
Spoke ಕೇಂದ್ರಗಳು : ಬೀದರ್, ಯಾದಗಿರಿ ಜಿಲ್ಲಾಸ್ಪತ್ರೆಗಳು.
ಆಳಂದ, ಅಫ್ಜಲ್ ಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಸಿಂದಗಿ, ಹುಮನಾಬಾದ್, ಬಾಲ್ಕಿ, ಬಸವಕಲ್ಯಾಣ, ಶೋಲಾಪುರ್, ಶಹಾಪುರ, ದೇವದುರ್ಗಾ ತಾಲೂಕು ಆಸ್ಪತ್ರೆಗಳು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...

ಲೋಕಸಭಾ ಚುನಾವಣೆ | ಬೆಂಗಳೂರಲ್ಲಿ ಏ.24 ರಿಂದ 26 ರವರೆಗೆ ಸೆಕ್ಷನ್ 144 ಜಾರಿ

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರವರ...

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...