ನಷ್ಟದ ಬೆನ್ನಲ್ಲೇ 50 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌‌ ಮುಚ್ಚಲು ಸಜ್ಜಾದ ‘ಪಿವಿಆರ್ ಐನಾಕ್ಸ್’

Date:

  • ಮೊದಲ ತ್ರೈಮಾಸಿಕದಲ್ಲಿ 300 ಕೋಟಿ ರೂಪಾಯಿಗೂ ಅಧಿಕ ನಷ್ಟ
  • ಐನಾಕ್ಸ್‌ ಜೊತೆಗಿನ ಒಪ್ಪಂದದಿಂದ ಸಂಕಷ್ಟಕ್ಕೆ ಸಿಲುಕಿದ ಪಿವಿಆರ್‌

ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಆಪರೇಟರ್ ಎನ್ನಿಸಿಕೊಂಡಿರುವ ಪಿವಿಆರ್ ಸಂಸ್ಥೆ ಬಹುಕೋಟಿ ನಷ್ಟದಲ್ಲಿದ್ದು, ಭಾರತ ಮತ್ತು ಶ್ರೀಲಂಕಾದಲ್ಲಿರುವ ‘ಪಿವಿಆರ್ ಐನಾಕ್ಸ್’ ಸ್ಕ್ರೀನ್‌‌ಗಳ ಪೈಕಿ 50 ಸ್ಕ್ರೀನ್‌‌ಗಳನ್ನು ಮುಚ್ಚಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಂದರೆ, 2023ರ ಜನವರಿಯಿಂದ ಮಾರ್ಚ್ ಅಂತ್ಯದ ‌ವರೆಗೆ‌‌ ಸಂಸ್ಥೆ ಒಟ್ಟು 333 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಹೀಗಾಗಿ ಮುಂದಿನ ಆರು ತಿಂಗಳ ಅವಧಿಯಲ್ಲಿ ನಷ್ಟದಲ್ಲಿರುವ 50 ಸ್ಕ್ರೀನ್‌‌ಗಳನ್ನು ಗುರುತಿಸಿ ಅಂತಹ ಸ್ಕ್ರೀನ್ ‌ಗಳಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಲಾಗುವುದು ಎಂದು ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ವರೆಗೂ ಬೇರೆಯಾಗಿದ್ದ ಪಿವಿಆರ್ ಮತ್ತು ಐನಾಕ್ಸ್ ಸಂಸ್ಥೆಗಳು ಮಲ್ಟಿಪ್ಲೆಕ್ಸ್ ಆಪರೇಟಿಂಗ್ ಸಂಸ್ಥೆಗಳು ಕಳೆದ ಫೆಬ್ರುವರಿಯಲ್ಲಿ ವಿಲೀನಗೊಂಡಿದ್ದವು. ಈ ಪ್ರಕ್ರಿಯೆಯಿಂದ ‘ಪಿವಿಆರ್ ಐನಾಕ್ಸ್’ ಸಂಸ್ಥೆಯ ವಹಿವಾಟು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿತ್ತು. ವಿಲೀನ ಪ್ರಕ್ರಿಯೆಗೂ ಮುನ್ನ ಅಂದರೆ, ಕಳೆದ ಡಿಸೆಂಬರ್‌‌ನಲ್ಲಿ ಪಿವಿಆರ್ ಸಂಸ್ಥೆ ‌16 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು ಎನ್ನಲಾಗಿದೆ. ಐನಾಕ್ಸ್ ಜೊತೆ ವಿಲೀನವಾದ ಬಳಿಕವೇ ಸಂಸ್ಥೆ ನಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಶಿಳ್ಳೆ, ಚಪ್ಪಾಳೆಗೆ ಸೀಮಿತವಾದ ಸುದೀಪ್‌ ವರ್ಚಸ್ಸು

ಐನಾಕ್ಸ್ ಜೊತೆಗಿನ ಒಪ್ಪಂದ ಪಿವಿಆರ್ ನಷ್ಟಕ್ಕೆ ಒಂದು ಕಾರಣವಾದರೆ, ಕೊರೊನಾ ಸಾಂಕ್ರಾಮಿಕದ ಬಳಿಕ ಜನ ಮಾಲ್ ಮತ್ತು ಮಲ್ಟಿಪ್ಲೆಕ್ಸ್‌‌ಗಳತ್ತ ಬರುವುದು ಕಡಿಮೆಯಾಗುತ್ತಿದೆ. ಜೊತೆಗೆ ಕೊರೊನಾ ಕಾಲಕ್ಕಿಂತ ಮೊದಲು ಹಿಂದಿ ಸಿನಿಮಾಗಳ ಬಗ್ಗೆ‌ ಜನರಲ್ಲಿದ್ದ ಕ್ರೇಜ್ ಇತ್ತೀಚೆಗೆ ಕಾಣಸಿಗುತ್ತಿಲ್ಲ. ಅವತಾರ್ 2 ಮತ್ತು ಪಠಾಣ್ ರೀತಿಯ ಸಿನಿಮಾಗಳನ್ನು ಬಿಟ್ಟರೆ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್‌‌ಗಳತ್ತ ಸೆಳೆಯುವ ಸಿನಿಮಾಗಳು ತೆರೆಗೆ ಬಂದಿಲ್ಲದಿರುವುದು ಈ ಮಲ್ಟಿಪ್ಲೆಕ್ಸ್ ಆಪರೇಟಿಂಗ್ ಸಂಸ್ಥೆಗಳ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.

ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳ 115 ನಗರಗಳಲ್ಲಿ ʼಪಿವಿಆರ್‌ ಐನಾಕ್ಸ್‌ʼ ಸಂಸ್ಥೆಯ 361 ಸಿನಿಮಾ ಹಾಲ್‌ಗಳಿದ್ದು, ಅವುಗಳಲ್ಲಿ ಒಟ್ಟು 1670 ಸ್ಕ್ರೀನ್‌ಗಳಿವೆ. ಆ ಪೈಕಿ ಈಗ ನಷ್ಟ ಅನುಭವಿಸುತ್ತಿರುವ 50 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳ್ಳಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...