ರಾಜ್ಯದಲ್ಲಿ ಮಳೆ: ಏರಿಕೆಯಾಗದ ಜಲಾಶಯಗಳ ಮಟ್ಟ

Date:

ಕರ್ನಾಟಕದಲ್ಲಿ ಸತತ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ನೆರೆಯ ಕೇರಳದಲ್ಲೂ ಮಳೆಯಾಗಿದೆ. ಆದರೂ ರಾಜ್ಯದ ಜಲಾಶಯಗಳ ಮಟ್ಟದಲ್ಲಿ ಏರಿಕೆ ಕಂಡುಬಂದಿಲ್ಲ.

ಮೈಸೂರು ಜಿಲ್ಲೆಯ ಕಬಿನಿ ಹಾಗೂ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳಹರಿವು ಕೊಂಚ ಹೆಚ್ಚಿದ್ದು, ತಮಿಳುನಾಡಿಗೆ ನೀರು ಹರಿಸದೇ ಇರುವುದರಿಂದ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಉತ್ತರ ಕರ್ನಾಟಕದ ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳ ಒಳಹರಿವಿನ ಪ್ರಮಾಣ ಶೂನ್ಯವಾಗಿದ್ದು, ಆಲಮಟ್ಟಿ ಜಲಾಶಯದ ಸ್ಥಿತಿ ಉತ್ತಮವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಿದ್ದು,  ಜಲಾಶಯದಲ್ಲಿ ಬುಧವಾರ ಬೆಳಿಗ್ಗೆ ನೀರಿನ ಮಟ್ಟ 99.66 ಅಡಿಯಷ್ಟಿತ್ತು. ಜಲಾಶಯಕ್ಕೆ ಸದ್ಯ 3411 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಕೊಡಗಿನಲ್ಲಿ ನಾಲ್ಕೈದು ದಿನಗಳಿಂದ ಮಳೆಯಾದ ಕಾರಣ ಶೂನ್ಯ ಇದ್ದ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಇದೇ ಹೆಚ್ಚಿನ ಒಳಹರಿವು. ಹೊರ ಹರಿವಿನ ಪ್ರಮಾಣ ನದಿ ಹಾಗೂ ನಾಲೆಗಳು ಸೇರಿದಂತೆ ಒಟ್ಟು 968 ಕ್ಯೂಸೆಕ್‌ನಷ್ಟಿದೆ.

ಜಲಾಶಯದಲ್ಲಿ 49.452 ಕ್ಯೂಸೆಕ್‌ ನೀರು ಸಂಗ್ರಹಕ್ಕೆ ಅವಕಾಶವಿದೆ. ಆದರೆ ಈವರೆಗೂ ಜಲಾಶಯದಲ್ಲಿ ಕೇವಲ 22.546 ಟಿಎಂಸಿ ಮಾತ್ರ ಸಂಗ್ರಹವಿದೆ. ಅದರಲ್ಲೂ 14.167 ಟಿಎಂಸಿಯಷ್ಟು ನೀರು ಬಳಕೆಗೆ ಯೋಗ್ಯವಾಗಿದೆ.

“ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಸದ್ಯ ಕುಡಿಯುವ ನೀರಿಗೆ ಬಿಟ್ಟು ಯಾವುದಕ್ಕೂ ನೀರು ಬಳಸುತ್ತಿಲ್ಲ. ತಮಿಳುನಾಡಿಗೂ ನೀರು ಹರಿಸಿಲ್ಲ. ಈಗ ಆಗಿರುವ ಮಳೆಯಿಂದ ಭಾರೀ ಪ್ರಮಾಣದ ನೀರು ಬಂದಿಲ್ಲ. ನಿರ್ವಹಣೆಗೆ ಒತ್ತು ನೀಡುತ್ತಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬಿನಿ: ಕೇರಳದಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ. ಅದರಲ್ಲೂ ವಯನಾಡು ಭಾಗದಲ್ಲಿ ಸಾಧಾರಣಾ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ನೀರು ಕೊಂಚ ಹರಿದು ಬರುತ್ತಿದೆ.

ಕಬಿನಿ ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 4451 ಕ್ಯೂಸೆಕ್‌ ನೀರು ಬರುತ್ತಿದ್ದು, ಹೊರ ಹರಿವಿನ ಪ್ರಮಾಣ 300 ಕ್ಯೂಸೆಕ್‌ಗೆ ಸೀಮಿತಗೊಳಿಸಲಾಗಿದೆ. ಅದೂ ಕುಡಿಯುವ ನೀರಿಗಾಗಿ ಹರಿಯುತ್ತಿರುವ ನೀರು ಮಾತ್ರ.

ಜಲಾಶಯದ ಗರಿಷ್ಠ ಮಟ್ಟ 2284 ಅಡಿಯಿದ್ದು, ಈಗಿನ ನೀರಿನ ಮಟ್ಟ 2274.02 ಅಡಿಯಷ್ಟಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಒಟ್ಟು 13.74 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಅದರಲ್ಲಿ 3.93 ಟಿಎಂಸಿ ನೀರು ಬಳಸಲು ಅವಕಾಶವಿದೆ.

“ಕೇರಳದಲ್ಲಿ ಆಗಿರುವ ಮಳೆಯಿಂದ ಈ ಬಾರಿಯೂ ಕೊಂಚ ನೀರು ಜಲಾಶಯಕ್ಕೆ ಹರಿದುಬಂದಿದೆ. ತಮಿಳುನಾಡಿಗೆ ಹದಿನೈದು ದಿನದ ಹಿಂದೆಯೇ ನೀರು ಸ್ಥಗಿತಗೊಳಿಸಲಾಗಿದೆ. ಕೇರಳದಲ್ಲಿ ಇನ್ನಷ್ಟು ಮಳೆಯಾದರೆ ಜಲಾಶಯದ ಪ್ರಮಾಣದಲ್ಲಿ ಏರಿಕೆಯಾಗಬಹುದು” ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಆಲಮಟ್ಟಿ: ಉತ್ತರ ಕರ್ನಾಟಕದ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಈ ಬಾರಿ ತುಂಬಿದ್ದರಿಂದ ನೀರಿನ ಮಟ್ಟವೂ ಉತ್ತಮವಾಗಿದೆ. ವಿಜಯಪುರ-ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ಮಟ್ಟ 519.60 ಮೀಟರ್‌ಗಳಷ್ಟಿದ್ದು, ಈ ಸದ್ಯ 516 ಮೀಟರ್‌ ನೀರಿನ ಸಂಗ್ರಹವಿದೆ. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸುವ ಅವಕಾಶವಿದೆ. ಸದ್ಯ 82.020 ಟಿಎಂಸಿ ನೀರಿದೆ. ಇದರಲ್ಲಿ 64.40 ಟಿಎಂಸಿ ನೀರು ಬಳಸಲು ಲಭ್ಯವಿದೆ.

ಜಲಾಶಯಕ್ಕೆ ಬುಧವಾರ ಬೆಳಿಗ್ಗೆ ಒಳ ಹರಿವಿನ ಪ್ರಮಾಣ ಶೂನ್ಯವಾಗಿದ್ದು, ಹೊರ ಹರಿವಿನ ಪ್ರಮಾಣ 11,307 ಕ್ಯೂಸೆಕ್‌ ಇದೆ. ಇದರಲ್ಲಿ 8,200 ಕ್ಯೂಸೆಕ್‌ ಕೆಪಿಸಿಎಲ್‌ ಜಲ ವಿದ್ಯುತ್‌ ಘಟಕಕ್ಕೆ ಹರಿಸಿದರೆ, ಉಳಿಕೆ ನೀರು ಕುಡಿಯಲು ಹಾಗೂ ನೀರಾವರಿಗೆಂದು ನಾಲೆಗಳಿಗೆ ಹೋಗುತ್ತಿದೆ.

ತುಂಗಭದ್ರಾ: ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲೂ ನೀರಿನ ಮಟ್ಟದ ಕುಸಿದಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾದರೂ ಕೂಡ ದೂರದ ಹೊಸಪೇಟೆಗೆ ತಲುಪಿಲ್ಲ. ಏಕೆಂದರೆ ಜಲಾಶಯದ ಒಳ ಹರಿವಿನ ಪ್ರಮಾಣ ಈಗಲೂ ಶೂನ್ಯವಾಗಿದೆ.

ಜಲಾಶಯದ ಗರಿಷ್ಠ ಮಟ್ಟ 1633 ಅಡಿಯಿದ್ದು, ಬುಧವಾರ ಬೆಳಿಗ್ಗೆಗೆ ಜಲಾಶಯದ ನೀರಿನ ಮಟ್ಟ 1603.49 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಸದ್ಯ 26.37 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಜಲಾಶಯದ ಗರಿಷ್ಟ ಪ್ರಮಾಣದ ಸಂಗ್ರಹ 105.78 ಟಿಎಂಸಿ. ಅಂದರೆ ಶೇ. 25ರಷ್ಟು ಮಾತ್ರ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ಈಗ 9982 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

“ಮಲೆನಾಡು ಭಾಗದಲ್ಲಿ ಮಳೆಯಾಗಿ ತುಂಗಾ ಹಾಗೂ ಭದ್ರಾ ನದಿ ಮೂಲಕ ತುಂಗಭದ್ರಾ ಜಲಾಶಯಕ್ಕೆ ನೀರು ಬರುವ ನಿರೀಕ್ಷೆಯಿತ್ತು. ಆದರೆ ಭಾರೀ ಮಳೆಯಾಗದೆ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗದಗ | ಕಬ್ಬು ಇಳುವರಿ ವಾಸ್ತವ ಪರಿಶೀಲನೆಗೆ ತಂಡ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್

“ಕಳೆದ ವರ್ಷ ರಾಜ್ಯದಲ್ಲಿ ಅತ್ಯುತ್ತಮ ಮಳೆ ಆಗಿತ್ತು. ಆದರೆ, ನೀರನ್ನು ಬೇಕಾಬಿಟ್ಟಿಯಾಗಿ ಬಳಸಿದ ಕಾರಣ ಜೂನ್ ತಿಂಗಳಿಗೇ ಸಮಸ್ಯೆ ಉಂಟಾಗಿತ್ತು. ಇದು ನಿಜಕ್ಕೂ ಸ್ವೇಚ್ಛಾಚಾರದ ನಡವಳಿಕೆ” ಎಂದು ಕೊಪ್ಪಳದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದರು.

“ಈ ವರ್ಷ ಉತ್ತಮ ಮಳೆಯಾಗಿಲ್ಲ. ಏಪ್ರಿಲ್-ಮೇ ತಿಂಗಳಿಗೆ ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ.‌ ಇದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ಕಾಂಗ್ರೆಸ್‌ ಸೇರಿದ ಆಶ್ರಯ ಲಿಂಗತ್ವ ಅಲ್ಪಸಂಖ್ಯಾತರ ತಂಡ

ಮಂಗಳೂರಿನಲ್ಲಿ ಮಂಗಳಮುಖಿಯರ ಸಮುದಾಯದ ಸದಸ್ಯರು ಸೋಮವಾರ (ಏ.22) ಕಾಂಗ್ರೆಸ್ ಸೇರ್ಪಡೆಯಾದರು. ಮಂಗಳೂರಿನ...

ಬೀದರ್‌ ಲೋಕಸಭಾ ಕ್ಷೇತ್ರ | ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು

ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ 18 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ...

ಕೊಡಗು | ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ ಬಿಜೆಪಿ ಭದ್ರಕೋಟೆಯ ಮತದಾರರು

ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಿಲುವುಗಳು ಬದಲಾಗುತ್ತಿವೆ....