ಮೂರನೇ ಟೆಸ್ಟ್ | ಜೈಸ್ವಾಲ್ ದಾಖಲೆಯ ದ್ವಿಶತಕ ;556 ರನ್ ಮುನ್ನಡೆ ಪಡೆದ ಭಾರತ

Date:

ಇಂಗ್ಲೆಂಡ್ ವಿರುದ್ಧದ ರಾಜಕೋಟ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್‍ನಲ್ಲಿ ನಲ್ಲಿ ನಲ್ಲಿ ಭಾರತ 556 ಮುನ್ನಡೆ

ಪಡೆದು ಡಿಕ್ಲೇರ್ ಮಾಡಿಕೊಂಡಿದೆ.  ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್‍  ದ್ವಿಶತಕ ಬಾರಿಸಿ ಮತ್ತೆ ದಾಖಲೆ ಬರೆದರು.

ಯಶಸ್ವಿ ಜೈಸ್ವಾಲ್‍   ಒಂದೇ ಸರಣಿಯಲ್ಲಿ  ಎರಡು ದ್ವಿಶತಕ ಬಾರಿಸಿದ ಭಾರತದ ಮೂರನೇ ಆಟಗಾರರಾದರು. ಈ ಮೊದಲು ವಿನು ಮಕಂಡ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸತತ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ  214 ರನ್ ಬಾರಿಸಿದರು. 236 ಎಸೆತಗಳ ಅವರ ಆಟದಲ್ಲಿ 14 ಬೌಂಡರಿ ಹಾಗೂ 12 ಸ್ಫೋಟಕ  ಸಿಕ್ಸರ್‍ ಗಳಿದ್ದವು. ಭೋಜನ ವಿರಾಮದ ಅಂತ್ಯಕ್ಕೆ 98 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 430 ರನ್ ಗಳಿಸಿ 556 ರನ್‍ ಮುನ್ನಡೆ ಪಡೆದಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

91 ರನ್ ಗಳಿಸಿದ್ದ(9 ಬೌಂಡರಿ, 2 ಸಿಕ್ಸರ್) ಶುಬ್ಮನ್ ಗಿಲ್ ರನೌಟ್‍ ಆಗಿ ಶತಕ ತಪ್ಪಿಸಿಕೊಂಡರು. 27 ರನ್‍ ಗಳಿಸಿ ಕುಲ್‍ದೀಪ್ ಯಾದವ್‍ ಔಟಾದರೆ, ಸರ್ಫರಾಜ್‍ ಖಾನ್ ಅಜೇಯ 61 ರನ್‍ ಗಳಿಸಿ ಜೈಸ್ವಾಲ್‍ ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ172 ರನ್ ಗಳಿಸಿದರು.

ವೈಯಕ್ತಿಕ ಕಾರಣಗಳಿಂದ ಬಿಡುವು ಪಡೆದಿದ್ದ ರವಿಚಂದ್ರನ್ ಅಶ್ವಿನ್ ಅವರು ನಾಲ್ಕನೇ ದಿನದಾಟದಲ್ಲಿ ಮತ್ತೆ ತಂಡ ಸೇರಿಕೊಂಡಿದ್ದಾರೆ. ಕೌಟುಂಬಿಕ ತುರ್ತು ಕಾರಣಗಳಿಂದ ಅಶ್ವಿನ್ ಅವರು ಮೂರನೇ ದಿನದಾಟ ಆಡಿರಲಿಲ್ಲ. ಅವರು ರಾಜಕೋಟ್ ನಿಂದ ಚೆನ್ನೈಗೆ ತೆರಳಿದ್ದರು. ಅಶ್ವಿನ್ ಅವರ ತಾಯಿಗೆ ಅನಾರೋಗ್ಯವಾದ ಕಾರಣ ತವರಿಗೆ ಮರಳಿದ್ದರು.

ಇದೀಗ ನಾಲ್ಕನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಅವರು ನಾಲ್ಕನೇ ದಿನಕ್ಕೆ ತಂಡ ಸೇರಿಕೊಂಡಿದ್ದಾರೆ.

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರೀತಿಕಾ ಹೂಡಾ, ಅಂಶು ಮಲಿಕ್

ಕಝಕಿಸ್ತಾನದ ಬಿಸ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್‌ನ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ...