ಜನಪ್ರತಿನಿಧಿಗಳು ಸಂವಿಧಾನ ಅರ್ಥೈಸಿಕೊಂಡಿದ್ದರೆ ದೇಶ ಕಲ್ಯಾಣ ನಾಡಾಗುತ್ತಿತ್ತು: ಸಾಣೇಹಳ್ಳಿ ಸ್ವಾಮೀಜಿ

Date:

ನಮ್ಮ ಜನಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡಿದ್ದರೆ, ನಮ್ಮ ದೇಶ ಕಲ್ಯಾಣ ನಾಡಾಗುತ್ತಿತ್ತು. ಜನರ ಸಂಕಷ್ಟಗಳನ್ನು ಬಗೆಹರಿಸಬಹುದಾಗಿತ್ತು. ಆದರೆ, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಇನ್ನೂ ನಮ್ಮ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗದೇ ಇರುವುದು ವಿಷಾದದ ಸಂಗತಿ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದವು. 75 ವರ್ಷಗಳ ಸಿಂಹಾವಲೋಕನ ಮಾಡಿ, ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ನಮ್ಮ ರಾಜಕೀಯ ನೇತಾರರು, ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರೆ, ಉತ್ತರ ಹೇಳೋದು ತುಂಬಾ ಕಷ್ಟ. ನಾವು ಆಯ್ಕೆ ಮಾಡಿ ಕಳಿಸುವಂಥ ಬಹುತೇಕ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಇಲ್ಲ. ಇಡೀ ಸಂವಿಧಾನವನ್ನು ಓದಿಕೊಂಡ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟು ಮಾತ್ರ” ಎಂದರು.

“ಜನಪ್ರನಿಧಿಯಾಗಲಿಕ್ಕೆ ಅರ್ಹತೆ ಇರಬೇಕು. ಅದರ ಬದಲಾಗಿ ಈಗ ಪ್ರಧಾನವಾಗಿರುವುದು ಜಾತಿ, ಹಣ, ಅಧಿಕಾರ. ಹಾಗಾಗಿ ಅವಿದ್ಯಾವಂತರು ಕೂಡ ನಮ್ಮ ಜನಪ್ರತಿನಿಧಿಗಳಾಗಿರುವ ನಿದರ್ಶನಗಳು ಬೇಕಾದಷ್ಟಿವೆ. ಅವಿದ್ಯಾವಂತರು ಜನಪ್ರನಿಧಿಗಳಾದಾಗ ಹೇಗೆ ನಮ್ಮ ಸಂವಿಧಾನವನ್ನು ಅಧ್ಯಯನ ಮಾಡಲಿಕ್ಕೆ ಸಾಧ್ಯ. ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಗಳೇನು. ಆಡಳಿತ ನಿರ್ವಹಿಸುವಾಗ ಹೇಗೆ ನಾವು ವರ್ತನೆ ಮಾಡಬೇಕು ಎನ್ನುವ ಅಂಶಗಳು ಪರಿಚಯವಿರದೇ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರೈತರ ಬೇಡಿಕೆಗಳು ಈಡೇರಿಲ್ಲ. ಹರಿಯಾಣ, ಪಂಜಾಬ್ ರಾಜ್ಯದ ಭಾಗದ ರೈತರು ನಮಗೆ ಬೆಲೆಯನ್ನು ನಮ್ಮ ಆಶಯಗಳನ್ನು ಈಡೇರಿಸಿ ಎಂದು ಬಹುದೊಡ್ಡ ಹೋರಾಟಕ್ಕೆ ಸನ್ನದ್ಧರಾಗಿ ಬಂದರೆ ಆ ಹೋರಾಟವನ್ನು ತಡೆಗಟ್ಟಲಿಕ್ಕೆ ಏನು ಬೇಕೋ ಆ ವ್ಯವಸ್ಥೆಯನ್ನು ಸರಕಾರ ಮಾಡಿತು. ಇದು ಪ್ರಜಾಪ್ರಭುತ್ವದ ಸೋಲು. ಹಾಗಾಗಿ ಪ್ರಜೆಗಳು ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಒಳ್ಳೆಯ ಆಡಳಿತವನ್ನು ಕೊಡಲಿಕ್ಕೆ ಸಾಧ್ಯ. ಆದರ್ಶ ಜನಪ್ರತಿನಿಧಿ ಇಲ್ಲದಿದ್ದರೆ ಆದರ್ಶ ರಾಜ್ಯವೂ ಇಲ್ಲ. ಸಂವಿಧಾನದ ಜಾಗೃತ ಅಭಿಯಾನ ಎಲ್ಲ ಅಭಿಯಾನದಂತೆ ಆಗಬಾರದು. ಅಭಿಯಾನದ ಮೂಲಕ ಪಂಚಾಯಿತಿಯವರು, ಗ್ರಾಮ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಲ್ಪಮಟ್ಟಿಗಾದರೂ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡರೆ ಚುನಾವಣೆಗಳಲ್ಲಿ ಇದ್ದವರಲ್ಲಿ ಯೋಗ್ಯರನ್ನು ಆಯ್ಕೆ ಮಾಡಲಿಕ್ಕೆ ಅವಕಾಶವಾಗುವುದು. ಸಂವಿಧಾನದ ಆಶಯಗಳಿಗೆ ಧಕ್ಕೆ ಬಾರದ ಹಾಗೆ ನಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

“ಸಂವಿಧಾನದ ಆಶಯಗಳನ್ನು 12ನೆಯ ಶತಮಾನದಲ್ಲೇ ಜಾರಿಗೆ ತಂದಿದ್ದರು. ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಅಂತ ಒಂದು ನಿರ್ಣಯ ಮಾಡಿದೆ. ಸಾಂಸ್ಕೃತಿಕ ನಾಯಕನ ಭಾವಚಿತ್ರವನ್ನು ಎಲ್ಲ ಶಾಲಾ, ಕಾಲೇಜು, ಸರಕಾರಿ ಆಡಳಿತ ಕಛೇರಿ, ಮಠ ಮಂದಿರಗಳಲಿ ಹಾಕಬೇಕು ಎನ್ನುವ ನಿರ್ಣಯವನ್ನು ಸರಕಾರಿ ಮಾಡಿರುವಂಥದ್ದು ಅಭಿನಂದನಾರ್ಹ. ಬಸವಣ್ಣ ಅಂದಾಕ್ಷಣ ಕಿರೀಟ ಬಸವಣ್ಣ ಅಂತ ಹೇಳ್ತಾರೆ. ಆದರೆ ಬಸವಣ್ಣನವರಿಗೆ ಕಿರೀಟದ ಬಗ್ಗೆ ವ್ಯಾಮೋಹ ಇರಲಿಲ್ಲ. ಸರಕಾರ ತುಂಬಾ ಯೋಚನೆ ಮಾಡಿ ತಾಳೆಗರಿಯಲ್ಲಿ ಬರೆಯುವಂಥ ಬಸವಣ್ಣನ ಭಾವಚಿತ್ರ ಹಾಕಬೇಕೆಂದು ಜಾರಿಯಲ್ಲಿ ತಂದಿದೆ. ಹಾಗಾಗಿ 17 ತಾರೀಖು ಅದೊಂದು ಸಂಭ್ರಮದ ದಿನಾಚರಣೆ ಆಗಬೇಕು. ಅವತ್ತು ಬಸವಣ್ಣನವರ ವಚನ ಓದುವುದು. ಚರ್ಚೆ ಮಾಡುವುದು, ಬಸವತತ್ವವನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು. ಸಾಣೇಹಳ್ಳಿಯ ಮಠದಲ್ಲೂ ದಿನಾಂಕ 17 ರಂದು ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕನ ಭಾವಚಿತ್ರವಿಟ್ಟು ಅದಕ್ಕೆ ಪುಷ್ಪವನ್ನು ಅರ್ಪಿಸಿ ವಚನಗಳನ್ನು ಓದಿ ಕಾರ್ಯಕ್ರಮ ನಡೆಸಲಾಗುವುದು” ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಧರ, ಉಪನ್ಯಾಸಕ ಕಾಂತರಾಜ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಗಂಗಾಧರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಬಸವರಾಜ್, ಪಿಡಿಓ ಸ್ವಾಮಿ, ನಿವೃತ್ತ ಶಿಕ್ಷಕ ವೀರಭದ್ರಪ್ಪ . ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಿಜೆಪಿಯಿಂದ ಸಂವಿಧಾನ ಆಶಯಗಳು ಬುಡಮೇಲು : ಡಿ.ಜಿ.ಸಾಗರ್

ದೇಶದಲ್ಲಿ ಪ್ರತಿ ಆರು ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ...

ಯಾದಗಿರಿ | ಈಜಲು ಹೋಗಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಸಾವು

ಕೆರೆಯಲ್ಲಿ ಈಜಾಡಲು ತೆರಳಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ...