ಇದು ಬಡವರು, ಸಂವಿಧಾನದ ಉಳಿವಿಗಾಗಿನ ಹೋರಾಟದ ಚುನಾವಣೆ: ಸಂತೋಷ್ ಲಾಡ್

Date:

ಇದು ಬಡವರ ಹಾಗೂ ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಜಿ. ಲಾಡ್ ಹೇಳಿದರು.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿಠ್ಠಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ನಾವು ಬಿಜೆಪಿ ಹಿಂದು ಅಲ್ಲ, ನಾವು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರ ಹಿಂದುಗಳು. ಅವರಿಗೆ ಮುಸ್ಲಿಂ ವಿರೋಧಿ ಭಾಷಣಕ್ಕಾಗಿ ಶಿವಾಜಿ ಬೇಕು. ಮರಾಠರು ನಿಜವಾದ ಶೂರರು. ಬಿಜೆಪಿಗರ ಕೈಗೊಂಬೆಗಳಲ್ಲ. ಬರೀ ಮತ ಬ್ಯಾಂಕ್ ಆಗಿ ನಮ್ಮನ್ನು ಬಳಸಿಕೊಳ್ಳಲಾಗಿದೆ. ನಮಗೆ ಯಾವ ಪ್ರಾತಿನಿಧ್ಯವನ್ನು ಅವರು ನೀಡಲಿಲ್ಲ. ಕಳೆದ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೂವತ್ತಾರು ಜನ ಮರಾಠಿಗರಿಗೆ ಟಿಕೆಟ್ ನೀಡಿದೆ. ಇವರು ನಮಗೆ ಏನು ಮಾಡಿದ್ದಾರೆ” ಎಂದು ಪ್ರಶ್ನಿಸಿದರು.

“ಶಿವಾಜಿ ಮಹಾರಾಜರು ವಿಶ್ವ ನಾಯಕ. ಅದನ್ನು ಬಿಟ್ಟು ಬಿಜೆಪಿಯವರು ಬರೀ ಅವರನ್ನು ಮುಸ್ಲಿಂ ವಿರೋಧಿ ಎಂದು ಸಂಕುಚಿತವಾಗಿ ಬಿಂಬಿಸಿದ್ದಾರೆ. ಶಿವಾಜಿಯವರು ಮುಸ್ಲಿಂ ರಾಜರ ವಿರುದ್ಧ ಹೋರಾಡಿದರೇ ಹೊರತು ಮುಸ್ಲಿಂರ ವಿರೋಧಿಯಲ್ಲ. ಶಿವಾಜಿಯವರ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರಿದ್ದರು. ಇದೆಲ್ಲ ಮರೆಮಾಡಿ ಬೇರೆಯದೇ ಚಿತ್ರವನ್ನು ಆರ್‌ಎಸ್‌ಎಸ್‌ನವರು ದೇಶದ ಜನರಲ್ಲಿ ಬಿತ್ತಿದ್ದಾರೆ. ನಾವೆಲ್ಲ ಈಗ ಜಾಗೃತರಾಗಬೇಕಾಗಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮರಾಠಾ ಸಮುದಾಯದ ಏಳ್ಗೆಗಾಗಿ ತಾವು ಶ್ರಮವಹಿಸುವುದಾಗಿ ಹೇಳಿದ ಲಾಡ್, ನೀವು ಯೋಚನೆ ಮಾಡಿ ಮತ ನೀಡಿ. ಮರಾಠರನ್ನು ಬಿಜೆಪಿಯವರು ಗುತ್ತಿಗೆ ಪಡೆದಂತೆ ಆಡುತ್ತಾರೆ. ಮೋದಿಯವರ ವೈಫಲ್ಯಗಳನ್ನು ನಾವು ಲೆಕ್ಕ ಹಾಕಿ ಮತ ನೀಡಬೇಕು” ಎಂದರು.

“ಇಂದಿರಾಗಾಂಧಿಯಿಂದ ಇಲ್ಲಿಯತನಕ ಕಾಂಗ್ರೆಸ್ ಪಕ್ಷ ಜನತೆಯ ಪರವಿದೆ. ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಎಂಟು ಸಾವಿರ ರೂ.ನಷ್ಟು ಹಣ ಬರುತ್ತಿದೆ. ರೈತರ ಸಲುವಾಗಿ ನಾವು ಯಾವತ್ತೂ ಮಿಡಿದಿದ್ದೇವೆ. ಕಪ್ಪುಹಣವಿದೆ ಎಂದು ನೋಟ್ ಬ್ಯಾನ್ ಮಾಡಿ ಉಳ್ಳವರಿಗೆ ಅನುಕೂಲ ಮಾಡಿದರು. ಹಣ ಸಿಗದೇ ಬಡವರು ಸತ್ತರು” ಎಂದರು.

“ಮರಾಠ ಮಹಾರಾಜರು ಅದರಲ್ಲೂ ಶಾಹು ಮಹಾರಾಜರಿಂದ ಕ್ರಾಂತಿಯೇ ಆಗಿದೆ. ಡಾ.ಅಂಬೇಡ್ಕರ್ ಅವರನ್ನು ವಿದೇಶಕ್ಕೆ ಕಳಿಸಿದರು ಅವರು. ಇದು ಮರಾಠರ ಹೆಗ್ಗಳಿಕೆ. ದಶಕಗಳಿಂದ ನಮ್ಮನ್ನು ಬಳಸಿಕೊಂಡು ಬರೀ ‘ಶಿವಾಜಿ ಮಹಾರಾಜ್ ಕೀ ಜೈ..’ ಅನ್ನಿಸಿಕೊಂಡು ನಮ್ಮ ಓಟು ಪಡೆದರು. ಹಿಂದೂ ಹಿಂದೂ ಎಂದು ನಾವು ಜೈಲಿಗೆ ಬೀಳುತ್ತೇವೆ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, “ಇದು ನಿರ್ಣಾಯಕ ಚುನಾವಣೆ. ಈ ಸಲ ಬದಲಾವಣೆ ಆಗಬೇಕು. ಸತತ ಮೂರು ಬಾರಿ ಆರಿಸಿ ಬಂದು ಯಾವೊಂದು ಮುತುವರ್ಜಿ ವಹಿಸದ ಜಿಗಜಿಣಗಿಯವರನ್ನು ನೀವೆಲ್ಲ ತಿರಸ್ಕರಿಸಿ” ಎಂದು ಕೋರಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...