ರಾಯಚೂರು | ವಕ್ಫ್ ಮಂಡಳಿ ಜಾಗ ಒತ್ತುವರಿ ತಡೆಗೆ ಎಸ್‌ಡಿಪಿಐ ಆಗ್ರಹ

Date:

ರಾಯಚೂರು ನಗರದ ಹಜರತ್ ಸೈಯದ್ ಶಾ ಕರೀಮುಲ್ಲಾ ಖಾದ್ರಿ ಶಹೀದ್ ದರ್ಗಾದ ಭೂಮಿ ಒತ್ತುವರಿ ನಡೆಯುತ್ತಿದ್ದು, ಕೂಡಲೇ ತಡೆ ಹಿಡಿಯಬೇಕು ಎಂದು ಎಸ್‌ಡಿಪಿಐ ಪಕ್ಷ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.

ಮಸೀದಿಯ ಜಾಗ ಒತ್ತುವರಿ ಕುರಿತು 2019 ರಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಎಲ್ಲಾ ಸಂಬಂಧಪಟ್ಟ ಇಲಾಖೆಗೆಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುತ್ತಲೇ ಬಂದಿದ್ದೇವೆ, ಆದರೂ ಯಾವುದೇ ಪ್ರಯೋಜನೆವಾಗಲಿಲ್ಲ. ಭೂ ಕಬಳಿಕೆದಾರರು ನಿಯಮಬಾಹಿರವಾಗಿ ಮಸೀದಿಯ ಭೂಮಿ ಒತ್ತುವರಿ ಮಾಡಲು ಎನ್.ಎ. ಮಾಡಿಸಿದ್ದಾರೆ. ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೀಲಿ ನಕಾಶೆ ಮತ್ತು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ” ಎಂದು ದೂರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಮಂಜೂರು ಮಾಡಬಾರದು, ಈ ಭೂಮಿಯನ್ನು ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿದ್ದು, ವಕ್ಫ್ ಆಸ್ತಿಯಾಗಿದೆ, ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಮಸೀದಿ ಜಾಗ ಕಬಳಿಕೆಗೆ ಮಂಜೂರಾತಿ ನೀಡಬಾರದು, ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಬಹಿರಂಗವಾಗಿ ವಿಜಯೇಂದ್ರನ ಕಾಲಿಗೆ ಬಿದ್ದು ಖೂಬಾಗೆ ಟಿಕೆಟ್ ಕೊಡಬೇಡಿ ಎಂದ ಹಾಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್!

ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷ ಜಿಲಾನಿ ಪಾಷಾ, ಉಪಾಧ್ಯಕ್ಷ ಮಾಟೀನ್ ಅನ್ವರ್, ಪ್ರಧಾನ ಕಾರ್ಯದರ್ಶಿ ಎಂಡಿ ಗೌಸ್, ಸೈಯದ್ ಮುರ್ಷಾದ್ ಜಾನಿ, ಮಹಮದ್ ಸಾಹೇಬ್, ಶಫಿ, ತೌಶೀಫ್ ಅಹಮದ್, ಅನ್ಸಾರಿ ಪಾಷಾ, ಆಲಮ್ ಬಾಷಾ ಸೇರಿದಂತೆ ಇತರರಿದ್ದರು.

ವರದಿ : ಹಫೀಜುಲ್ಲ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗುಡುಗು ಸಹಿತ ಮಳೆ; ಸಿಡಿಲು ಬಡಿದು ವ್ಯಕ್ತಿ ಸಾವು

ಬೀದರ್‌ ಜಿಲ್ಲೆಯಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಹೊಲದಲ್ಲಿ ಕೃಷಿ...

ವಿಜಯಪುರ | ಬಿಜೆಪಿ ಸೋಲಿಸಿ ಜಾತ್ಯಾತೀತ ಅಭ್ಯರ್ಥಿ ಗೆಲ್ಲಿಸಿ: ಡಿವೈಎಫ್‌ಐ ಕರೆ

ಬಿಜೆಪಿಯನ್ನು ಸೋಲಿಸಿ ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಲು ಡಿವೈಎಫ್‌ಐ ಕರೆ ನೀಡಿದ್ದಾರೆ. ಈ...

ಚಿತ್ರದುರ್ಗ | ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮಾಜಿ ಸಚಿವ ಎಚ್. ಆಂಜನೇಯ

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು...