ದೇಶದ್ರೋಹ ಕಾನೂನು ಹೋಯ್ತು; ಸರ್ಕಾರ ದ್ರೋಹ ಕಾನೂನು ಬಂತು

Date:

ಬ್ರಿಟಿಷರು ಜಾರಿಗೆ ತಂದಿದ್ದ, ಸ್ವಾತಂತ್ರ್ಯಾ ನಂತರವು ಮುಂದುವರೆದಿದ್ದ ಕಾನೂನುಗಳಲ್ಲಿ ಒಂದಾಗಿದ್ದ ‘ದೇಶದ್ರೋಹ’ ಕಾನೂನನ್ನು ತೆಗೆದು ಹಾಕುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ, ಆ ಕಾನೂನಿನ ಹೆಸರನ್ನು ಬದಲಿಸಿ, ಮತ್ತಷ್ಟು ಕಠಿಣವಾಗಿ ಮತ್ತೊಂದೆಡೆ ಅದೇ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಅದಕ್ಕಾಗಿ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ (ಐಪಿಸಿ) 124ಎ ಅಡಿಯಲ್ಲಿ ಕೆಲವು ಚಟುವಟಿಕೆಗಳನ್ನು ದೇಶದ್ರೋಹವೆಂದು ಗುರುತಿಸಲಾಗಿತ್ತು. ಅಂತೆಯೇ ಕಲವು ಚಟುವಟಿಕೆಗಳನ್ನು ಅಪರಾಧವಲ್ಲ ಎಂದು ಪರಿಗಣಿಸಲಾಗಿತ್ತು. ಆದರೆ, ಆ ಸೆಕ್ಷನ್‌ ಅನ್ನು ತೆಗೆದು ಭಾರತೀಯ ನ್ಯಾಯ ಸಂಹಿತೆಯ 150ನೇ ಸೆಕ್ಷನ್‌ಗೆ ಸೇರಿಸಲಾಗಿದೆ. ದೇಶದ್ರೋಹ ಎಂಬ ಪದವನ್ನು ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ ಎಂದು ಬದಲಿಸಲಾಗಿದೆ.

ಐಪಿಸಿ ಸೆಕ್ಷನ್‌ 124ಎ ಅಡಿಯಲ್ಲಿ ವಿವರಿಸುವ ಕೃತ್ಯಗಳನ್ನು ‘ದೇಶದ್ರೋಹ’ದ ಕೃತ್ಯಗಳು ಎಂದು ಕರೆಯಲಾಗುತ್ತಿದೆ. ಈ ಸೆಕ್ಷನ್‌ನಲ್ಲಿ, ಲಿಖಿತ, ಮೌಖಿಕ, ಸಂಜ್ಞೆ ಅಥವಾ ಪ್ರದರ್ಶನದ ಮೂಲಕ ಭಾರತ ಸರ್ಕಾರದ ವಿರುದ್ಧ ದ್ವೇಷ ಬಿತ್ತುವ, ಪ್ರಚೋದಿಸುವ ಯತ್ನಗಳಷ್ಟೇ ಶಿಕ್ಷಾರ್ಹ ಅಪರಾಧವಾಗಿದ್ದವು. ಸರ್ಕಾರವನ್ನು ಟೀಕಿಸುವುದು, ಸರ್ಕಾರದ ವಿರುದ್ಧ ಪ್ರತಿಭಟಿಸುವುದು, ಸರ್ಕಾರ ಕ್ರಮಗಳನ್ನು ವಿಮರ್ಶೆ ಮಾಡುವುದು ಅಪರಾಧಗಳಲ್ಲ ಎಂದು ಹೇಳಿತ್ತು. ಶಿಕ್ಷಾರ್ಹ ಅಪರಾಧವೆಂದು ಗುರುತಿಸಲಾದ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ಅಥವಾ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಲು ಅವಕಾಶವಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಐಪಿಸಿ ಸೆಕ್ಷನ್‌ 124ಎ ಅನ್ನು ಕಿತ್ತುಹಾಕಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ 150ನೇ ಸೆಕ್ಷನ್‌ಗೆ ಸೇರಿಸಲು ಮುಂದಾಗಿದೆ. 150ನೇ ಸೆಕ್ಷನ್‌ಗೆ ಸೇರಿಸಲು ಉದ್ದೇಶಿಸಿರುವ ಪ್ರಸ್ತಾವಿತ ಮಸೂದೆಯು ಸರ್ಕಾರದ ಕ್ರಮಗಳ ವಿರುದ್ಧದ ಟೀಕೆ ಮತ್ತು ಒತ್ತಾಯಗಳನ್ನೂ ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ (ಹಿಂದಿನ ಹೆಸರಿನಂತೆ ದೇಶದ್ರೋಹ) ಎಂದು ವಿವರಿಸಲಾಗಿದೆ.

ಪ್ರತ್ಯೇಕತಾವಾದಗಳನ್ನು ಪ್ರೋತ್ಸಾಹಿಸುವುದು, ಸಶಸ್ತ್ರ ಬಂಡಾಯಗಳು ಹಾಗೂ ಭಾರತದ ಏಕತೆಗೆ ಧಕ್ಕೆ ತರುವ ಚಟುವಟಿಕೆಗಳು ಮಾತ್ರವಲ್ಲದೆ, ಸರ್ಕಾರಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳು ಅಪರಾಧ ಕೃತ್ಯಗಳು ಎಂದು ಸೆಕ್ಷನ್ 150 ಅಡಿಯಲ್ಲಿ ಹೇಳಲಾಗಿದೆ. ಈ ಚಟುವಟಿಕೆಗಳು ಲಿಖಿತ, ಮೌಖಿಕ, ಸಂಜ್ಞೆ, ಪ್ರದರ್ಶನ, ವಿದ್ಯುನ್ಮಾನ ಸಂವಹನ ಅಥವಾ ಆರ್ಥಿಕ ರೂಪದಲ್ಲಿ ಇರಬಹುದು. ಇಂತಹ ಕೃತ್ಯಗಳಿಗೆ ಜೀವಿತಾವಧಿ ಶಿಕ್ಷೆ ಅಥವಾ ಗರಿಷ್ಠ ಏಳು ವರ್ಷಗಳ ಸೆರೆವಾಸ, ಜೊತೆಗೆ, ದಂಡ ವಿಧಿಸಲು ಅವಕಾಶ ನೀಡುತ್ತದೆ.

“ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು, ಸರ್ಕಾರದ ವಿರುದ್ಧ ಪ್ರತಿಭಟಿಸುವುದೂ ಕೂಡ ‘ಸರ್ಕಾರಕ್ಕೆ ಧಕ್ಕೆ’ ಎಂದೇ ಭಾವಿಸುತ್ತಿದೆ. ದೆಹಲಿಯಲ್ಲಿ ನಡೆದ ರೈತ ಹೋರಾಟವನ್ನೂ ಮತ್ತು ಹೋರಾಟಗಾರರನ್ನು ಪ್ರತ್ಯೇಕತಾವಾದಿಗಳು ಎಂದು ಈ ಸರ್ಕಾರ ಕರೆದಿತ್ತು. ತನ್ನ ವಿರುದ್ಧ ಪ್ರತಿಭಟಿಸುವುದನ್ನೇ ದೇಶದ್ರೋಹ ಅಥವಾ ಸರ್ಕಾರಕ್ಕೆ ಧಕ್ಕೆ ಎಂದು ಈ ಸರ್ಕಾರ ಹೇಳುತ್ತಿದೆ. ಅದಕ್ಕಾಗಿ, ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರರನ್ನೇ ಈಗಾಗಲೇ ಬಂಧಿಸಿ, ಜೈಲಿನಲ್ಲಿಡುತ್ತಿದೆ. ಹೀಗೆ, ಕೇಂದ್ರ ಸರ್ಕಾರವು ಇಷ್ಟು ದಿನ ತನ್ನ ವಿರುದ್ಧದ ಪ್ರತಿಭಟನೆಗಳು ಮತ್ತು ಟೀಕೆಗಳನ್ನು ಅಪ್ರಜಾತಾಂತ್ರಿಕ ಮತ್ತು ಸರ್ವಾಧಿಕಾರಿಯಾಗಿ ಹತ್ತಿಕ್ಕುತ್ತಿದ್ದ ತನ್ನ ಧೋರಣೆಯನ್ನು ಕಾನೂನುಬದ್ದಗೊಳಿಸುವುದರ ಸ್ಪಷ್ಟ ನಿದರ್ಶನವಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...

ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ...

‘ಈಸ್ಟರ್ ಭಾನುವಾರ’ ಕೆಲಸದ ದಿನವೆಂದು ಘೋಷಣೆ; ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಕ್ರೈಸ್ತರ ಪ್ರಮುಖ ಹಬ್ಬವಾದ 'ಈಸ್ಟರ್ ಭಾನುವಾರ'ವನ್ನು (ಮಾರ್ಚ್‌ 31) ಕೆಲಸದ ದಿನವಾಗಿ...