ಐಪಿಎಲ್ 2023 | ರಝಾ, ಶಾರೂಖ್ ಹೋರಾಟಕ್ಕೆ ಒಲಿದ ಜಯ ; ಪಂಜಾಬ್‌ಗೆ ಮಣಿದ ಲಕ್ನೋ

Date:

ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಝಾ ಮತ್ತು ಕೊನೆಯ ಓವರ್‌ಗಳಲ್ಲಿ ಶಾರೂಕ್ ಖಾನ್ ಬ್ಯಾಟಿಂಗ್‌ನಲ್ಲಿ ತೋರಿದ
ಅಮೋಘ ಪ್ರದರ್ಶನದ ಬಲದಿಂದ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್16ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಆತಿಥೇಯ ತಂಡ ಮುಂದಿಟ್ಟಿದ್ದ 160 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್, 19.3 ಓವರ್‌ಗಳಲ್ಲಿ ಚೇಸ್ ಮಾಡಿತು.

ಸಿಕಂದರ್ ರಝಾ 57 ರನ್ [ 41 ಎಸೆತ, 4 ಬೌಂಡರಿ, 3 ಸಿಕ್ಸರ್ ] ಮತ್ತು ಶಾರೂಕ್ ಖಾನ್ 10 ಎಸೆತಗಳಲ್ಲಿ ಅಜೇಯ 23 ರನ್‌ಗಳಿಸುವ ಮೂಲಕ ಪಂಜಾಬ್ ತಂಡಕ್ಕೆ ಟೂರ್ನಿಯಲ್ಲಿ 3ನೇ ಗೆಲುವು ತಂದಿತ್ತರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.


ಇದಕ್ಕೂ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ, ನಾಯಕ ಕೆಎಲ್ ರಾಹುಲ್ ಅರ್ಧಶತಕ [ 74 ರನ್ 56 ಎಸೆತ, 8 ಬೌಂಡರಿ, 1 ಸಿಕ್ಸರ್ ] ಮತ್ತು ಕೈಯ್ಲ್ ಮೇಯರ್ಸ್ 29 ರನ್‌ಗಳಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್ ಗಳು ನೀರಸ ಪ್ರದರ್ಶನ ತೋರಿದ ಕಾರಣ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ ಲಕ್ನೋ 159 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.

ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದರೆ, ಕಗಿಸೊ ರಬಾಡ 2 ವಿಕೆಟ್ ಪಡೆದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ಸಾಲ್ಟ್ ಅಮೋಘ ಆಟ: 4ನೇ ಗೆಲುವು ದಾಖಲಿಸಿದ ಕೆಕೆಆರ್

ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್...

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌...

ಐಪಿಎಲ್ | ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್: ರೋಚಕ ಹಣಾಹಣಿಯಲ್ಲಿ ಪಂಜಾಬ್‌ಗೆ ಸೋಲುಣಿಸಿದ ರಾಜಸ್ಥಾನ

ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು...

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ...