ಕಾರಿನಲ್ಲಿ ಪತ್ತೆಯಾದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ನಟ ಲೀ ಸನ್ ಕ್ಯುನ್ ಶವ

Date:

ಖ್ಯಾತ ದಕ್ಷಿಣ ಕೊರಿಯಾದ ನಟ, ಆಸ್ಕರ್ ಪ್ರಶಸ್ತಿ ಚಿತ್ರ ‘ಪ್ಯಾರಸೈಟ್’ನ ಪ್ರಮುಖ ಪಾತ್ರಧಾರಿ ಲೀ ಸನ್ ಕ್ಯುನ್ ಶವ ಅನುಮಾನಸ್ಪದವಾಗಿ ಕಾರಿನಲ್ಲಿ ಪತ್ತೆಯಾಗಿದೆ.

ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲವು ದಿನಗಳ ಹಿಂದೆ ಡ್ರಗ್ ಬಳಕೆ ಆರೋಪದಡಿ ಲೀ ಸನ್ ಕ್ಯುನ್ ವಿರುದ್ಧ ತನಿಖೆ ಕೈಗೊಳ್ಳಲಾಗಿತ್ತು.

ಉತ್ತರ ಸಿಯೋಲ್‌ನ ರಸ್ತೆಯೊಂದರಲ್ಲಿನ ಪಾರ್ಕಿಂಗ್‌ನಲ್ಲಿ ಲೀ ಸನ್ ಕ್ಯುನ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.  ಪೊಲೀಸರು ಹಾಗೂ ತುರ್ತು ಘಟಕದ ಅಧಿಕಾರಿಗಳು ನಂತರದಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಲ ದಿನಗಳ ಹಿಂದೆ 48 ವರ್ಷದ ನಟ ಲೀ ಸನ್ ಕ್ಯುನ್ ನಾಪತ್ತೆಯಾಗಿರುವುದಾಗಿ ಪೊಲೀಸರು ದೂರು ಸ್ವೀಕರಿಸಿ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು. ಆತ್ಮಹತ್ಯೆ ಅಥವಾ ಇತರೆ ಯಾವುದೇ ಕಾರಣದ ಬಗ್ಗೆ ತಿಳಿಸಲು ಪೊಲೀಸರು ನಿರಾಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪೇಗೌಡ ವಿಮಾನನಿಲ್ದಾಣ ಸೀಮೆ- ರೈತರ ಕೊರಳ ಬಿಗಿದಿರುವ ಭೂಮಾಫಿಯಾ, ಕುಣಿಕೆ ಕಳಚಲಿ ಕಾಂಗ್ರೆಸ್ ಸರ್ಕಾರ

ನಟ ಬುಧವಾರ ಮನೆಯಿಂದ ತೆರಳುವ ಮುನ್ನ ಆತ್ಮಹತ್ಯೆ ರೀತಿಯ ಪತ್ರ ಬರೆದಿರುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಲೀ ಸನ್ ಕ್ಯುನ್ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೀ 2020 ರಲ್ಲಿ ಅತ್ಯುತ್ತಮ ಚಿತ್ರ ಮತ್ತು ಇತರ ಮೂರು ವಿಭಾಗಗಳಿಗಾಗಿ ಆಸ್ಕರ್ ಪ್ರಶಸ್ತಿ ಪಡೆದ “ಪ್ಯಾರಾಸೈಟ್” ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. “ಪ್ಯಾರಾಸೈಟ್” ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ದಕ್ಷಿಣ ಕೊರಿಯಾದ ಚಲನಚಿತ್ರವಾಗಿತ್ತು.

“ಪ್ಯಾರಾಸೈಟ್” ಗಿಂತ ಮುಂಚೆಯೇ, ಲೀ ಹಲವು ವರ್ಷಗಳಿಂದ ದಕ್ಷಿಣ ಕೊರಿಯಾದಲ್ಲಿ ಜನಪ್ರಿಯ ನಟರಾಗಿದ್ದರು. “ಕಾಫಿ ಪ್ರಿನ್ಸ್ (2007)” ಎಂಬ ಹಿಟ್ ಟಿವಿ ನಾಟಕ ಸರಣಿಯಲ್ಲಿನ ಪಾತ್ರದಿಂದ ಜನಪ್ರಿಯರಾಗಿದ್ದರು. “ಬಿಹೈಂಡ್ ದಿ ವೈಟ್ ಟವರ್” “ಪಾಸ್ಟಾ (2010)” “ಮೈ ಮಿಸ್ಟರ್” ಅವರು ನಟಿಸಿದ ಪ್ರಮುಖ ಸಿನಿಮಾಗಳು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...