ಸುಪ್ರೀಂ ತೀರ್ಪು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನ: ಮಾಜಿ ಕೇಂದ್ರ ಚುನಾವಣಾ ಆಯುಕ್ತ ಖುರೇಷಿ

Date:

ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನವಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ ವೈ ಖುರೇಷಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಮೇಲೆ ಜನರಿಗಿರುವ ನಂಬಿಕೆಯನ್ನು ಉಳಿಸಿದೆ. ಈ ರೀತಿ ನಡೆದಿರುವುದು ದೊಡ್ಡ ವಿಷಯವಾಗಿದೆ.ಕಳೆದ ಐದರಿಂದ ಏಳು ವರ್ಷಗಳಲ್ಲಿ ನಾವು ಸುಪ್ರೀಂ ಕೋರ್ಟ್‌ನಿಂದ ಪಡೆದ ದೊಡ್ಡ ಐತಿಹಾಸಿಕ ತೀರ್ಪಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನ” ಎಂದು ಹೇಳಿದರು.

“ ಕಳೆದ ಹಲವು ವರ್ಷಗಳಿಂದ ಇದರ ಬಗ್ಗೆ ನಮಗೆ ಸಮಸ್ಯೆಯುಂಟಾಗಿತ್ತು. ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ಇದನ್ನು ವಿರೋಧಿಸಿದ್ದರು. ನಾನು ಈ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದೆ, ಮಾಧ್ಯಮಗಳಲ್ಲಿ ಹಲವು ಬಾರಿ ಮಾತನಾಡಿದ್ದೆ. ನಾವು ಎತ್ತಿದ ಪ್ರತಿಯೊಂದು ಸಮಸ್ಯೆಗಳನ್ನು ತೀರ್ಪಿನ ಮೂಲಕ ನಿಭಾಯಿಸಲಾಗಿದೆ” ಎಂದು ಖುರೇಷಿ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರದ ಮಾಜಿ ಚುನಾವಣಾ ಆಯುಕ್ತರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕೂಡ ಪ್ರಕಟಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ತೀರ್ಪಿನಿಂದ ಸಂತಸವುಂಟಾಗಿದೆ. ಬ್ಯಾಕಿಂಗ್‌ ವ್ಯವಸ್ಥೆಯ ಮೂಲಕ ಕೊಡುಗೆಗಳನ್ನು ಪಡೆಯುವ ಕ್ರಮ ಸರಿಯಿದೆ. ಆದರೆ ನಮ್ಮ ಕಾಳಜಿಯಿರುವುದು ನೀಡಿರುವ ಕೊಡುಗೆಯನ್ನು ರಾಜಕೀಯ ಪಕ್ಷಗಳು ಏಕೆ ಗುಟ್ಟಾಗಿಡುತ್ತವೆ ಎಂಬುದು? ಎಂದು ಎಸ್‌ ವೈ ಖುರೇಷಿ ಪ್ರಶ್ನಿಸಿದ್ದಾರೆ.

“ದಾನ ನೀಡುವವನು ಗುಟ್ಟಾಗಿ ಇಡಬೇಕೆಂದು ಬಯಸಿದರೆ ಸಾರ್ವಜನಿಕರು ಪಾರದರ್ಶಕತೆ ಬಯಸುತ್ತಾರೆ. ಆದ್ದರಿಂದ ದಾನಿ ಏಕೆ ಗುಟ್ಟಾಗಿ ಇಡಬೇಕು? ಏಕೆಂದರೆ ಕೊಡುವ ಮತ್ತು ಕೊಳ್ಳುವುದರಲ್ಲಿ ಏನೋ ಮುಚ್ಚಿಡುತ್ತಿದ್ದಾನೆ. ಪುನಃ ಅನುಕೂಲಗಳನ್ನು ವಾಪಸ್‌ ಪಡೆಯುತ್ತಿದ್ದಾನೆ ಪರವಾನಗಿಗಳು, ಗುತ್ತಿಗೆಗಳು,  ವಿದೇಶಿಗಳಲ್ಲಿ ಭೂಮಿ ಕೊಳ್ಳಲು ಸಾಲಗಳು. ಹಾಗಿದ್ದರೆ ಅವರು ಏಕೆ ಮುಚ್ಚಿಡಲು ಬಯಸುತ್ತಾರೆ? ಎಂದು ಮಾಜಿ ಚುನಾವಣಾ ಆಯುಕ್ತರು ಪ್ರಶ್ನಿಸಿದ್ದಾರೆ.

“ಸರ್ಕಾರ ಕೂಡ ದಾನಿಗಳನ್ನು ಗುಟ್ಟಾಗಿಡಲು ಪ್ರಯತ್ನಿಸುತ್ತಿದೆ. ಇದೇ ದಾನಿಗಳು ಕಳೆದ 70 ವರ್ಷಗಳಿಂದ ದಾನ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಗೌಪ್ಯತೆಯ ಅವಶ್ಯಕತೆ ಏನಿದೆ. ಆದ ಕಾರಣ ಈಗ ಅದನ್ನು ದೂರ ಮಾಡಲಾಗಿದೆ. ನಮ್ಮ ಪ್ರಜಾಪ್ರಭುತ್ವ ಮತ್ತೊಮ್ಮೆ ಆರೋಗ್ಯಕರವಾಗಿದೆ ಎಂದು ನನಗನಿಸುತ್ತಿದೆ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಮೀಕ್ಷೆ | ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ?

18-25 ವರ್ಷದೊಳಗಿನವರು ಶೇ.42.86ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ...

‘ಸಂವಿಧಾನವನ್ನು ಬಲವಂತವಾಗಿ ಹೇರಲಾಗಿದೆ’; ಗೋವಾ ಕಾಂಗ್ರೆಸ್‌ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

1961ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸಿದ ನಂತರ, ರಾಜ್ಯದ ಮೇಲೆ ಭಾರತೀಯ...

ಪ್ರಧಾನಿ ಮೋದಿ ದ್ವೇಷ ಭಾಷಣ: ಒಂದು ಲಕ್ಷಕ್ಕೂ ಅಧಿಕ ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರ ಜನರ ಸಂಪತ್ತನ್ನು "ನುಸುಳುಕೋರರಿಗೆ" ಹಂಚಲಿದೆ...

‘ಈ ದಿನ’ ಸಮೀಕ್ಷೆ | ಗ್ಯಾರಂಟಿ ಯೋಜನೆ ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕ್ತೀರಾ, ಜನರು ಹೇಳೋದೇನು?

ರಾಜ್ಯದಲ್ಲಿ ಪ್ರಸ್ತುತ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೂ...