ತೈವಾನ್‌ | ಭೂಕಂಪಕ್ಕೆ 9 ಬಲಿ, ಇಬ್ಬರು ಭಾರತೀಯರು ನಾಪತ್ತೆ

Date:

ತೈವಾನ್‌ನಲ್ಲಿ ಬುಧವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈವರೆಗೆ ಸುಮಾರು 9 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಇಬ್ಬರು ಭಾರತೀಯರು ಸೇರಿದಂತೆ 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಇನ್ನು ನಾಪತ್ತೆಯಾದ ಭಾರತೀಯರಲ್ಲಿ ಓರ್ವ ಮಹಿಳೆ ಎಂಬ ಮಾಹಿತಿ ತಿಳಿದು ಬಂದಿದೆ. ಇಬ್ಬರೂ ಭಾರತೀಯರು ಭೂಕಂಪ ನಡೆದ ಸ್ಥಳದ ಸಮೀಪವಿರುವ ತಾರೊಕೊ ಗಾರ್ಜ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ಪೂರ್ವ ತೈವಾನ್‌ನಲ್ಲಿ 25 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಎಪಿ ವರದಿಯ ಪ್ರಕಾರ ಭೂಕಂಪದ ಬಳಿಕ ನಾಪತ್ತೆಯಾಗಿರುವ ಭಾರತೀಯರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ತೈವಾನ್‌ | 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪ; ನಾಲ್ವರು ಸಾವು, ಸುನಾಮಿ ಎಚ್ಚರಿಕೆ

ತೈವಾನ್‌ನಲ್ಲಿ ಸಂಭವಿಸಿದ ಈ ಭೂಕಂಪವು “25 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ ಭೂಕಂಪ” ಎಂದು ತೈಪೆಯ ಭೂಕಂಪನದ ಅಧಿಕಾರಿ ತಿಳಿಸಿದ್ದಾರೆ. ಭೂಕಂಪದ ಬಳಿಕ ತೈವಾನ್, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್‌ನಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಇನ್ನು ಇಂಡಿಯಾ ತೈಪೆ ಅಸೋಸಿಯೇಷನ್ ತೈವಾನ್‌ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ತೈವಾನ್‌ನಲ್ಲಿರುವ ಭಾರತೀಯರು ಸಹಾಯಕ್ಕಾಗಿ 0905247906 ಗೆ ಕರೆ ಮಾಡಬಹುದು ಅಥವಾ [email protected] ಗೆ ಇಮೇಲ್ ಕಳುಹಿಸಬಹುದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೆಸ್ಲಾ ಕಾರಣ; ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್!

ಟೆಸ್ಲಾ ಸಿಇಒ, ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್...

ಇಸ್ರೇಲ್‌ ಜೊತೆ ಗೂಗಲ್ ಒಪ್ಪಂದ ವಿರೋಧಿಸಿ ಪ್ರತಿಭಟನೆ; ಗೂಗಲ್‌ ಉದ್ಯೋಗಿಗಳ ಬಂಧನ

ಇಸ್ರೇಲ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ...

ದುಬೈ ಪ್ರವಾಹ| ಭಾರೀ ಮಳೆ, ಬಿರುಗಾಳಿಯಿಂದ ಸಂಚಾರ ಅಸ್ತವ್ಯಸ್ತ; 28 ಭಾರತದ ವಿಮಾನಗಳು ರದ್ದು

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು...

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...