ಟೊಮೆಟೊ ಬಂಪರ್ | 45 ದಿನಗಳಲ್ಲಿ ₹4 ಕೋಟಿ ಲಾಭ ಪಡೆದ ರೈತ

Date:

ಅಡುಗೆ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಕಳೆದ ಎರಡು ತಿಂಗಳಿನಿಂದ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೆ.ಜಿ ಟೊಮೆಟೊ 120ರಿಂದ 140 ರೂ.ಗೆ ಮಾರಾಟವಾಗುತ್ತಿದೆ. ದುಬಾರಿ ಬೆಲೆಯ ಸಂದರ್ಭದಲ್ಲಿ ಟೊಮೆಟೊ ಬೆಳೆದಿದ್ದ ಆಂಧ್ರಪ್ರದೇಶದ ರೈತರೊಬ್ಬರು ಒಂದೂವರೆ ತಿಂಗಳಿನಲ್ಲಿ (45 ದಿನ) ಬರೋಬ್ಬರಿಗೆ 4 ಕೋಟಿ ರೂ. ಲಾಭ ಪಡೆದಿದ್ದಾರೆ.

ಆಂಧ್ರದ ಚಿತ್ತೂರು ಜಿಲ್ಲೆಯ ರೈತ ಮುರುಳಿ ಅವರು ತಮ್ಮ 22 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, 130 ಕಿ.ಮೀ. ದೂರದಲ್ಲಿರುವ ಕೋಲಾರ ಎಪಿಎಂಸಿಯಲ್ಲಿ ಉತ್ತಮ ಬೆಲೆ ಸಿಗುತ್ತದೆಯೆಂದು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ. 45 ದಿನಗಳಿಂದ ಆಗಾಗ್ಗೆ ಟೊಮೆಟೊ ಕಠಾವು ಮಾಡಿ, ಮಾರಾಟ ಮಾಡಿರುವ ಅವರು ಬರೋಬ್ಬರಿ 4 ಕೋಟಿ ರೂ. ಲಾಭ ಪಡೆದಿದ್ದಾರೆ.

“ಕಳೆದ ಎಂಟು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದೇನೆ. ಆದರೆ, ಎಂದೂ ಅಂತಹ ಲಾಭ ಪಡೆದಿರಲಿಲ್ಲ. ಈಗ ಉತ್ತಮ ಲಾಭ ಬಂದಿದೆ” ಎಂದು ರೈತ ಮುರುಳಿ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಳೆದ ವರ್ಷ ಜುಲೈನಲ್ಲಿ ಬೆಲೆ ಕುಸಿತದಿಂದಾಗಿ ಭಾರಿ ನಷ್ಟವನ್ನು ಅನುಭವಿಸಿದ್ದೆವು. ಬೀಜ, ರಸಗೊಬ್ಬರ, ಕೂಲಿ, ಸಾಗಾಣಿಕೆ ಮತ್ತಿತರ ವೆಚ್ಚಗಳಿಂದಾಗಿ 1.5 ಕೋಟಿ ರೂ. ಸಾಲಕ್ಕೆ ಸಿಲುಕಿದ್ದೆವು. ಅಲ್ಲದೆ, ತಮ್ಮ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಪೂರೈಕೆ ಇಲ್ಲದ ಕಾರಣ, ಇಳುವರಿಯೂ ಕುಸಿದಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ.

“ಈ ಬಾರಿ ಅಧಿಕಾರದ ಪರಿಸ್ಥಿತಿ ಬದಲಾಗಿದೆ. ಉತ್ತಮ ಬೆಳೆ ಬಂದಿದೆ. ಇದುವರೆಗೆ 35 ಬಾರಿ ಟೊಮೆಟೊ ಕಟಾವು ಮಾಡಿದ್ದೇವೆ. ಇನ್ನೂ ಸುಮಾರು 15 ಬಾರಿ ಕಟಾವು ಮಾಡುವ ಸಾಧ್ಯತೆ ಇದೆ. 45 ದಿನಗಳಲ್ಲಿ ಇದ್ದ ಸಾಲವನ್ನೆಲ್ಲ ತೀರಿಸಿ, 2 ಕೋಟಿ ರೂ. ಉಳಿತಾಯ ಲಾಭ ಪಡೆದಿದ್ದೇವೆ” ಎಂದು ಅವರು ಹೇಳಿದ್ದಾರೆ.

ಲಾಭದ ಹಣದಲ್ಲಿ ಮತ್ತಷ್ಟು ಭೂಮಿ ಖರೀದಿಸಲು ಯೋಜಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಕೃಷಿ ಮಾಡುವ ಚಿಂತನೆಯಲ್ಲಿದ್ದಾರೆ. ಕೃಷಿಯನ್ನು ನಂಬುವ ಮತ್ತು ಗೌರವಿಸುವವನು ಎಂದಿಗೂ ಎದೆಗುಂದ ಬಾರದು, ಒಂದೊಮ್ಮೆ ಕೃಷಿ ನಮ್ಮ ಕೈಹಿಡಿಯುತ್ತದೆ ಎಂದು ಅವರು ಹೇಳುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ವಿಪರೀತ ಸುಡುವ ಬಿಸಿಲು; ಸಾಂಕ್ರಾಮಿಕ ರೋಗಗಳ ಬಗ್ಗೆ ವೈದ್ಯರ ಎಚ್ಚರಿಕೆ

ವಿಪರೀತ ಸುಡುವ ಬಿಸಿಲಿನ ಹಿನ್ನಲೆಯಲ್ಲಿ ಸುಮಾರು 13 ಮಂದಿಗೆ ವಾಂತಿ ಬೇಧಿ...

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಹುಬ್ಬಳ್ಳಿ | ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ

ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕ್ಯಾಂಪಸ್‌ನೊಳಗೆ ನುಗ್ಗಿ ವಿದ್ಯಾರ್ಥಿನಿಯೋರ್ವಳಿಗೆ ಯುವಕನೋರ್ವ ಮನಬಂದಂತೆ ಚಾಕುವಿನಿಂದ...