ಸಾಗರ ಸಂಪನ್ಮೂಲ ರಕ್ಷಣೆಗೆ ಐತಿಹಾಸಿಕ ಒಪ್ಪಂದ ಮಾಡಿಕೊಂಡ ವಿಶ್ವಸಂಸ್ಥೆ

Date:

ಹವಾಮಾನ ಬದಲಾವಣೆಯ ಪ್ರಸ್ತುತ ಸಂದರ್ಭದಲ್ಲಿ ಭೂಗ್ರಹದ ಅರ್ಧದಷ್ಟು ಭಾಗ ಆವರಿಸುವ ಸಮುದ್ರದ ರಕ್ಷಣೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿವೆ.

ಬಹುವರ್ಷಗಳ ಮಾತುಕತೆಗಳ ನಂತರ ಕೊನೆಗೂ, ಆಳಸಮುದ್ರದ ಪರಿಸರ ರಕ್ಷಿಸಲು, ಸಂಕಷ್ಟದಲ್ಲಿರುವ ಸಾಗರ ಸಂಪನ್ಮೂಲದ ರಕ್ಷಣೆಗೆ ಮೊದಲ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ. ಭಾರತೀಯ ಕಾಲಮಾನ ಭಾನುವಾರ ಮಧ್ಯರಾತ್ರಿ ನ್ಯೂಯಾರ್ಕ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಘೋಷಿಸಿದ ವಿಶ್ವಸಂಸ್ಥೆಯ ಆಯೋಗದ ಅಧ್ಯಕ್ಷರಾಗಿರುವ ರೇನಾ ಲೀ, “ಕೊನೆಗೂ ಹಡಗು ದಡ ಸೇರಿದೆ” ಎಂದು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಅನೇಕ ವರ್ಷಗಳ ಚರ್ಚೆ, ಮಾತುಕತೆಯ ನಂತರ ನೂರು ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲು ಮುಂದೆ ಬಂದಿವೆ. ಸುಸ್ಥಿರ ಅಭಿವೃದ್ಧಿಗಾಗಿ ಸಾಗರ ಜೀವವೈವಿಧ್ಯ ರಕ್ಷಣೆಯಲ್ಲಿ ಈ ಹೆಜ್ಜೆ ಅತೀ ಮುಖ್ಯ ಎಂದು ಪರಿಸರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಗರ ಸಂಪನ್ಮೂಲದ ರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ರಚನೆಯಾಗುವುದರಿಂದ ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯೊಂದನ್ನು ಇಟ್ಟಂತಾಗಿದೆ. ಈ ಹಂತಕ್ಕೆ ಬರಲು ಪರಿಸರವಾದಿಗಳು ಮತ್ತು ವಿಶ್ವಸಂಸ್ಥೆಯ ಸಿಬ್ಬಂದಿ ಕಳೆದ 15 ವರ್ಷಗಳಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಜಗತ್ತಿನ ಶೇ. 30ರಷ್ಟು ಭೂಮಿ ಮತ್ತು ಸಾಗರ ವಲಯ ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಲ್ಲಿ ’30 ಬೈ 30’ ಎನ್ನುವ ಒಪ್ಪಂದಕ್ಕೆ ಕಳೆದ ಡಿಸೆಂಬರ್‌ನಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಸಹಿ ಹಾಕಲಾಗಿತ್ತು. ಆ ’30 ಬೈ 30’ ಯೋಜನೆಯ ಅನುಷ್ಠಾನದಲ್ಲಿ ಈಗಿನ ಸಾಗರ ಒಪ್ಪಂದ ಪ್ರಮುಖ ಪಾತ್ರವಹಿಸಲಿದೆ. ಈ ಒಪ್ಪಂದದ ನಂತರ ರಾಷ್ಟ್ರಗಳು ಆಳ ಸಮುದ್ರದಲ್ಲಿ ಪ್ರಸ್ತಾಪಿತ ಚಟುವಟಿಕೆಗಳಿಂದ ಆಗುವ ಪರಿಸರ ಪರಿಣಾಮಗಳ ಅಧ್ಯಯನ ನಡೆಸುವ ಅಗತ್ಯ ಬೀಳುತ್ತದೆ.

ರಾಷ್ಟ್ರಗಳ ಆರ್ಥಿಕ ಹಿತಾಸಕ್ತಿಗಳಿಂದಾಗಿ ಈ ಒಪ್ಪಂದಕ್ಕೆ ಸಹಿ ಬೀಳಲು 15 ವರ್ಷಗಳೇ ಹಿಡಿದಿವೆ. ತಂತ್ರಜ್ಞಾನ ಹಂಚಿಕೆ, ಸಾಗರ ಅರ್ಥವ್ಯವಸ್ಥೆಯ ಸಮಪಾಲು ಮೊದಲಾಗಿ ಸುಸ್ಥಿರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಈಗಿನ ಕೊನೆಯ ಸುತ್ತಿನ ಮಾತುಕತೆ ಫೆಬ್ರವರಿ 20ರಂದು ಆರಂಭವಾಗಿ ಭಾನುವಾರ ಅಂತಿಮ ರೂಪ ಪಡೆದುಕೊಂಡಿದೆ. ಸಾಗರ ಉತ್ಪನ್ನಗಳನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸಿಕೊಳ್ಳುವ ಬಗ್ಗೆಯೂ ಒಪ್ಪಂದದಲ್ಲಿ ಉಲ್ಲೇಖವಿದೆ. ಇಂತಹ ಕೆಲವು ವಿಷಯಗಳೇ ಒಪ್ಪಂದ ಮಾತುಕತೆಗೆ ತೆರೆ ಬೀಳುವುದನ್ನು ತಡ ಮಾಡಿವೆ.

ಆಳ ಸಮುದ್ರವೆಂದರೆ ಯಾವುದು?

ಕರಾವಳಿಯಿಂದ 370 ಕಿಮೀಗಳವರೆಗೂ ಇರುವ ರಾಷ್ಟ್ರಗಳ ವಿಶೇಷ ಆರ್ಥಿಕ ವಲಯದ ನಂತರದ ಸಾಗರ ಪ್ರದೇಶವನ್ನು ಆಳ ಸಮುದ್ರವೆಂದು ಪರಿಗಣಿಸಲಾಗಿದೆ. ಜಗತ್ತಿನ ಸಾಗರದ ಶೇ. 60ಕ್ಕೂ ಹೆಚ್ಚು ವಲಯವನ್ನು ಆಳ ಸಮುದ್ರವೆಂದೇ ಪರಿಗಣಿಸಲಾಗುತ್ತಿದೆಯಾದರೂ, ಇವುಗಳ ಸಂರಕ್ಷಣೆಯ ಪ್ರಯತ್ನ ಕಡಿಮೆಯೇ ಇತ್ತು. ಕರಾವಳಿ ವಲಯ ಅಥವಾ ಕೆಲವು ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗಷ್ಟೆ ಸೀಮಿತವಾಗಿದ್ದ ಸುಸ್ಥಿರ ಅಭಿವೃದ್ಧಿಯ ಉದ್ದೇಶದ ವ್ಯಾಪ್ತಿ ಈಗ ವಿಶಾಲವಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ?: ಬೆಂಗಳೂರು | ಕೆರೆಗಳಲ್ಲಿ ಮೀನುಗಾರಿಕೆ ನಿಷೇಧಿಸಿ, ಪರಿಸರ ರಕ್ಷಿಸಿ ; ಪರಿಸರವಾದಿಗಳ ಆಗ್ರಹ

ಸಾಗರದ ಪರಿಸರ ವ್ಯವಸ್ಥೆ ಜನರು ಉಸಿರಾಡುವ ಅರ್ಧದಷ್ಟು ಆಮ್ಲಜನಕ ಸೃಷ್ಟಿಸುತ್ತವೆ. ಬಹುತೇಕ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಜಾಗತಿಕ ತಾಪಮಾನ ವೈಪರೀತ್ಯ ನಿಯಂತ್ರಿಸುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಅತಿಯಾದ ಮೀನುಗಾರಿಕೆಯಿಂದ ಈ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಿತ್ತು. ಆದರೆ, ಕೇವಲ ಶೇ. 1ರಷ್ಟು ಆಳ ಸಮುದ್ರ ಮಾತ್ರ ಕಾನೂನಿನ ರಕ್ಷಣೆಯಲ್ಲಿತ್ತು.

ಪ್ರಸ್ತುತ ಒಪ್ಪಂದದಿಂದ ಸಂಪೂರ್ಣ ಆಳ ಸಮುದ್ರ ಕಾನೂನು ರಕ್ಷಣೆಯ ವ್ಯಾಪ್ತಿಗೆ ಬರಲಿದೆ. ಆರ್ಥಿಕ ಚಟುವಟಿಕೆಗಳನ್ನು ಜವಾಬ್ದಾರಿಯುತವಾಗಿ ನಡೆಸುವ ಅನಿವಾರ್ಯತೆ ರಾಷ್ಟ್ರಗಳ ಮೇಲಿರುತ್ತದೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಬೈ ಪ್ರವಾಹ| ಭಾರೀ ಮಳೆ, ಬಿರುಗಾಳಿಯಿಂದ ಸಂಚಾರ ಅಸ್ತವ್ಯಸ್ತ; 28 ಭಾರತದ ವಿಮಾನಗಳು ರದ್ದು

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು...

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...

ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ಸಿಬ್ಬಂದಿಗಳ ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅನುಮತಿ

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು...

ಪಾಕಿಸ್ತಾನ | ಸರಬ್ಜಿತ್ ಸಿಂಗ್ ಕೊಲೆಯ ಆರೋಪಿ ಅಮೀರ್ ಸರ್ಫರಾಜ್ ಗುಂಡಿಕ್ಕಿ ಹತ್ಯೆ

ಭಾರತದ ಸರಬ್ಜಿತ್ ಸಿಂಗ್‌ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್‌...