‘ಯುರೋಪಿಯನ್ ಎಸ್ಸೇ ಪ್ರೈಜ್’ ಪ್ರಶಸ್ತಿಗೆ ಭಾಜನರಾದ ಅರುಂಧತಿ ರಾಯ್

Date:

ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ 45ನೇ ‘ಯುರೋಪಿಯನ್ ಎಸ್ಸೇ ಪ್ರೈಜ್’ ನೀಡಲಾಗುತ್ತದೆ ಎಂದು ಚಾಲ್ಸ್ ವೈಲನ್ ಫೌಂಡೇಷನ್ ಪ್ರಕಟಿಸಿದೆ.

‘ಆಜಾದಿ’(2021) ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಕಲನದ ಪ್ರೆಂಚ್‌ ಅನುವಾದಕ್ಕಾಗಿ ಅರುಂಧತಿ ರಾಯ್ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್‌ ತಿಳಿಸಿದೆ.

“ಆಜಾದಿ” ಸಂಕಲನದಲ್ಲಿ ರಾಯ್‌ ಅವರು ‘ಬೆಳೆಯುತ್ತಿರುವ ನಿರಂಕುಶವಾದ’ದ ಜಗತ್ತಿನಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಪ್ರತಿಬಿಂಬಿಸಿದ್ದಾರೆ. ಅಲ್ಲದೆ ಈ ಪ್ರಬಂಧಗಳು ಪ್ರಸ್ತುತ ಕಾಲದಲ್ಲಿ ಕಾಲ್ಪನಿಕ ಮತ್ತು ಪರ್ಯಾಯ ಕಲ್ಪನೆಗಳ ಪಾತ್ರದ ಕುರಿತ ಹಲವು ಚಿಂತನೆಗಳನ್ನು ಒಳಗೊಂಡಿವೆ. ಫ್ಯಾಸಿಸಂ ಮತ್ತು ಅದರ ರಚನೆಯ ವಿಶ್ಲೇಷಣೆ. ಇದು ಹೇಗೆ ನಮ್ಮ ಜೀವನವನ್ನು ಹೆಚ್ಚು ಆಕ್ರಮಿಸುತ್ತಿರುವ ಸಮಸ್ಯೆ ಎಂಬುದು ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಒಳಗೊಂಡಿದೆ” ಎಂದು ಫೌಂಡೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಹಾಲು ಕಳಪೆ ಗುಣಮಟ್ಟದ್ದು ಎಂದು ವಿವಾದ ಸೃಷ್ಟಿಸಿದ ಕೇರಳ ಸಚಿವೆ

ದೇಶದ ಪ್ರಸಿದ್ಧ ಲೇಖಕಿಯಾಗಿರುವ ಅರುಂಧತಿ ರಾಯ್ ಅವರ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್”, “ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್” ಮತ್ತು “ಮೈ ಸೆಡಿಟಿಯಸ್ ಹಾರ್ಟ್” ಸೇರಿದಂತೆ ಹಲವು ಕೃತಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿವೆ.

ಸ್ವಿಟ್ಜರ್ಲೆಂಡ್‌ನ ಲುಸಾನ್ ನಗರದಲ್ಲಿ ಸೆಪ್ಟೆಂಬರ್ 12ರಂದು ನಡೆಯುವ ಸಮಾರಂಭದಲ್ಲಿ ಅಂದಾಜು ₹ 18 ಲಕ್ಷ ಮೊತ್ತದೊಂದಿಗೆ ಪ್ರಶಸ್ತಿಯನ್ನು ರಾಯ್ ಅವರು ಸ್ವೀಕರಿಸಲಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಅನಾರೋಗ್ಯದಡಿ ಜಾಮೀನು ಪಡೆಯಲು ಕೇಜ್ರಿವಾಲ್ ಮಾವು ಸೇವನೆ: ಇ.ಡಿ

ಅಸ್ತಮ ಕಾಯಿಲೆಯಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದ ಆಧಾರದ...