ಶೀಘ್ರದಲ್ಲಿ ಭಾರತಕ್ಕೆ 5ಜಿ ಆಗಮನ; ಇಲ್ಲಿದೆ ನೀವು ತಿಳಿಯಬೇಕಾದ ಮುಖ್ಯ ಅಂಶಗಳು 

5G in India
  • 2024ರ ತನಕ ಯವುದೇ ವ್ಯಾಪಕ ವ್ಯಾಪ್ತಿಯಿಲ್ಲ 
  • ರಿಚಾರ್ಜ್ ಯೋಜನೆಯಲ್ಲಿ ಹೆಚ್ಚಳ ಸಾಧ್ಯತೆ 

ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮುಂದಿನ ಕೆಲವು ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಬಾರೀ ನಿರೀಕ್ಷೆ ಮೂಡಿಸಲಿದೆ ಮತ್ತು 5ಜಿ ಮೂಲಕ ವೇಗದ ಇಂಟರ್‌ನೆಟ್ ಸೌಲಭ್ಯ ಪಡೆಯಲು ಸಿದ್ಧವಾಗಿದೆ.

ಸದ್ಯಕ್ಕೆ ಇದೇ ತಿಂಗಳು ಅಂತ್ಯದೊಳಗೆ ಭಾರತಕ್ಕೆ ಏರ್‌ಟೆಲ್ 5ಜಿ ತರಲು ಮುಂದಾಗಿದೆ ಮತ್ತು ಜಿಯೋ ಕೂಡ ಈ ವರ್ಷದ ಸ್ವಾತಂತ್ರ್ಯ ದಿನದಂದು 5ಜಿಗೆ ಚಾಲನೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ. 

2024ರವರೆಗೆ ಯಾವುದೇ ವ್ಯಾಪಕ ವ್ಯಾಪ್ತಿಯಿಲ್ಲ 

ಇದೀಗ ತಾನೇ ಭಾರತ ನೂತನ 5ಜಿ ಪರೀಕ್ಷೆ ನಡೆಸುತ್ತಿರುವ ಕಾರಣ ಸದ್ಯಕ್ಕೆ ಅದರ ವ್ಯಾಪ್ತಿ ಹೆಚ್ಚು ವಿಸ್ತರಿಸುವ ಸಾಧ್ಯತೆಯಿಲ್ಲ. ಪ್ರಸ್ತುತ ಏರ್‌ಟೆಲ್ ಮೆಟ್ರೋ ನಗರದಲ್ಲಿ ಮಾತ್ರ ಸೇವೆ ನೀಡುತ್ತಿದೆ. ದೇಶದಲ್ಲಿ ಹತ್ತು ಸಾವಿರ ನಗರದಲ್ಲಿ ಮಾತ್ರ 5ಜಿಗೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಏರ್‌ಟೆಲ್ ದೇಶದ ಪ್ರತಿ ರಾಜ್ಯದಲ್ಲಿ ಕೂಡ 5ಜಿ ಅಳವಡಿಸಲು ತೀರ್ಮಾನಿಸಿದೆ ಮತ್ತು 500ಕ್ಕೂ ಅಧಿಕ ನಗರದಲ್ಲಿ ಶುರು ಮಾಡಲು ಸಂಸ್ಥೆ ನಿರ್ಧರಿಸಿದೆ. 

5ಜಿಗಿಂತ 6ಜಿ ಮೇಲೆ ಹೆಚ್ಚು ಗಮನ 

5ಜಿ ಅನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಮಿಲಿಮೀಟರ್ ತರಂಗ ಮತ್ತು ಉಪ ಮಿಲಿಮೀಟರ್ ತರಂಗ. ಪ್ರತಿ ತರಂಗದ ವೇಗ ಹೆಚ್ಚಾದಂತೆ ಅದರ ಡೇಟಾ ವೇಗ ಕೂಡ ಜಾಸ್ತಿಯಾಗಲಿದೆ. ಪ್ರಸ್ತುತ ಭಾರತದಲ್ಲಿ ಟೆಲಿಕಾಂ ವಲಯವು 6ಜಿ ಮೇಲೆ ಹೆಚ್ಚು ಕಾರ್ಯಾಚರಣೆ ನಡೆಸಲಿದೆ. ಮುಂದಿನ ದಿನಗಳಲ್ಲಿ 4ಜಿಗಿಂತ 6ಜಿ ಮೇಲೆ ಹೆಚ್ಚು ಗಮನಹರಿಸಲಾಗುವುದು ಎಂದು ಹೇಳಲಾಗಿದೆ. 

ರಿಚಾರ್ಜ್ ಯೋಜನೆಯಲ್ಲಿ ಹೆಚ್ಚಳ ಸಾಧ್ಯತೆ 

4ಜಿಗಿಂತ 5ಜಿ ವೇಗವಾಗಿದೆ, ಅಷ್ಟೆ ದುಬಾರಿಯು ಇರಲಿದೆ. ಇತ್ತೀಚೆಗೆ ಜಿಯೋ ತನ್ನ ಗ್ರಾಹಕರಿಗೆ ರಿಚಾರ್ಜ್ ದರವನ್ನು ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಬಳಕೆದಾರರಿಗೆ 5ಜಿ ಬಾರಿ ಹೊಡೆತ ನೀಡಬಹುದು ಎಂದು ಅಂದಾಜಿಸಲಾಗಿದೆ. 

ಇತ್ತೀಚಿನ ವರದಿಯಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೀಡಿದ ಮಾಹಿತಿ ಪ್ರಕಾರ, "ಸ್ಪೆಕ್ಟ್ರಮ್‌ಗೆ ನ್ಯಾಯಯುತವಾದ ಹಣವನ್ನು ಖರ್ಚು ಮಾಡಲಾಗಿದೆ ಎಂಬ ಅಂಶವನ್ನು ಗಮನಿಸಿದರೆ, 5Gಯನ್ನು 4Gಗೆ ಪ್ರೀಮಿಯಂ ದರದಲ್ಲಿ ನೀಡಬೇಕು."

ನಿಮಗೆ ಏನು ಅನ್ನಿಸ್ತು?
0 ವೋಟ್