ನಿಮಗಿದು ಗೊತ್ತೆ | ಅಮೆರಿಕದ ನೀಲಾಕಾಶ ಹಸಿರಾಗಲು ಕಾರಣವೇನು?

Green Sky Image
  • ಅಮೆರಿಕ ಪ್ರಾಂತ್ಯದಲ್ಲಿ ಹೆಚ್ಚು ಸಂಭವಿಸುವ ಡೆರೆಚೊ
  • ಇದರ ವೇಗ ಒಂದು ಗಂಟೆಗೆ 140 ಕಿಮೀ ಇರುತ್ತದೆ

ಅಮೆರಿಕದ ನೆಬ್ರಸ್ಕಾ, ಮಿನ್ನೇಸೋಟ ಮತ್ತು ಇಲಿನಾಯ್ಸ್‌ ರಾಜ್ಯಗಳಲ್ಲಿ ಮಂಗಳವಾರ ಡೆರೆಚೊ ಚಂಡಮಾರುತದಿಂದ ನೀಲಾಕಾಶ ಹಸಿರಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಚಂಡಮಾರುತವು ಗಂಟೆಗೆ 140 ಕಿಮೀ ವೇಗದಲ್ಲಿ ಬೀಸುತ್ತಿರುವುದರಿಂದ ವಿದ್ಯುತ್‌ ತಂತಿಗಳು ಮತ್ತು ಮರಗಳು ಉರುಳಿವೆ. ಇದರ ಜೋರು ಹೊಡೆತದಿಂದ ನೀಲಿ ಆಕಾಶವು ಹಸಿರು ಬಣ್ಣಕ್ಕೆ ಬದಲಾಗಿದೆ. ಈ ಚಂಡಮಾರುತಕ್ಕೆ `ಡೆರೆಚೊʼ ಎಂದು ಹೆಸರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಡೆರೆಚೊ?

ಅಮೆರಿಕದ ಹವಾಮಾನ ಇಲಾಖೆಯ ಪ್ರಕಾರ ಡೆರೆಚೊ ಸುಂಟರಗಾಳಿ ವ್ಯಾಪಕವಾಗಿ, ದೀರ್ಘಕಾಲ ನೇರ ರೇಖೆಯಲ್ಲಿ ವೇಗವಾಗಿ ಹರಡುತ್ತದೆ. ಇದು ಒಂದೇ ಕಡೆ ನಿಲ್ಲುವ ಬಿರುಗಾಳಿಯಲ್ಲ. ಇದರ ವೇಗ ಗಂಟೆಗೆ 140 ಕಿಮೀ ಇರುತ್ತದೆ. 'ಡೆರೆಚೊ' ಎಂಬ ಹೆಸರು ಸ್ಪ್ಯಾನಿಷ್ ಪದ 'ಲಾ ಡೆರೆಚಾ'ದಿಂದ ಬಂದಿದೆ. ಇದರ ಅರ್ಥ ನೇರ ರೇಖೆಯ ಬಿರುಗಾಳಿಗಳು. ಇವು ತಿರುಗುವುದಿಲ್ಲ. ಈ ಚಂಡಮಾರುತ ಸಾಮಾನ್ಯವಾಗಿ ಮೇ ತಿಂಗಳ ಆರಂಭದಲ್ಲಿ ಶುರುವಾಗುತ್ತದೆ. ಜೂನ್‌ ಮತ್ತು ಜುಲೈನಲ್ಲಿ ಹೆಚ್ಚು ಸಂಭವಿಸುತ್ತದೆ. ಇತರ ಚಂಡಮಾರುತಕ್ಕೆ ಹೋಲಿಸಿದರೆ ಡೆರೆಚೊ ಚಂಡಮಾರುತ ಅಪರೂಪವಾಗಿದೆ.

ಡೆರೆಚೊದಿಂದ ಆಕಾಶ ಹಸಿರು ಬಣ್ಣಕ್ಕೆ ಬದಲಾಗುವುದೇಕೆ?

ತೀವ್ರವಾದ ಗುಡುಗು ಸಹಿತ ಬಿರುಗಾಳಿಗಳು 'ಹಸಿರು ಆಕಾಶ'ಕ್ಕೆ ಕಾರಣವಾಗುತ್ತವೆ. ಆಕಾಶದ ಬೃಹತ್ ಪ್ರಮಾಣದ ನೀರಿನೊಂದಿಗೆ ಬೆಳಕು ಸಂವಹನವಾದಾಗ ದೊಡ್ಡ ಪ್ರಮಾಣದ ಮಳೆಹನಿಗಳು ಮತ್ತು ಆಲಿಕಲ್ಲುಗಳನ್ನು ಚದುರಿಸುತ್ತವೆ. ಇದರಿಂದಾದ ನೀಲಿ ಬಣ್ಣದ ಚಂಡಮಾರುತದ ಮೋಡದ ಜೊತೆಗೆ ನೀಲಿ ಆಕಾಶ ಮತ್ತು ಮಧ್ಯಾಹ್ನದ ಕೆಂಪು- ಹಳದಿ ಅಥವಾ ಸಂಜೆಯ ಸೂರ್ಯನ ಕಿರಣಗಳು ಮಿಶ್ರವಾಗಿ ಹಸಿರು ಬಣ್ಣಕ್ಕೆ ಬದಲಾಗುತ್ತದೆ.

ಡೆರೆಚೊ ಸಾಮಾನ್ಯವಾಗಿ ಎಲ್ಲಿ ಸಂಭವಿಸುತ್ತದೆ?

ಡೆರೆಚೊ ಸಾಮಾನ್ಯವಾಗಿ ಅಮೆರಿಕ ಪ್ರಾಂತ್ಯದಲ್ಲಿ ಕಾಣಿಸುತ್ತದೆ. ಮೇ 8, 2009ರಲ್ಲಿ “ಸೂಪರ್‌ ಡೆರೆಚೊ” ಎಂಬ ಚಂಡಮಾರುತ ವ್ಯಾಪಕವಾಗಿ ಸಂಭವಿಸಿತ್ತು. ಈ ಬಿರುಗಾಳಿ ಗಂಟೆಗೆ 170 ವೇಗದಲ್ಲಿ ಚಲಿಸಿ ದಾಖಲೆ ಸೃಷ್ಟಿಸಿದೆ. 2010ರಲ್ಲಿ, ರಷ್ಯಾ ತನ್ನ ಮೊದಲ ದಾಖಲಿತ ಡೆರೆಚೊಗೆ ಸಾಕ್ಷಿಯಾಯಿತು. ಈ ಚಂಡಮಾರುತ ಜರ್ಮನಿ, ಫಿನ್‌ಲ್ಯಾಂಡ್‌ಗಳ ಮೂಲಕ ಬಲ್ಗೇರಿಯಾ ಮತ್ತು ಪೋಲೆಂಡ್‌ನಲ್ಲಿಯೂ ಕಾಣಿಸಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
7 ವೋಟ್