ಬಳಕೆದಾರರನ್ನು ಸ್ಪೈವೇರ್‌ನಿಂದ ರಕ್ಷಿಸಲು ʻಲಾಕ್‌ಡೌನ್‌ ಮೋಡ್ʼ ಫೀಚರ್ ಪರಿಚಯಿಸಲಿದ ಆ್ಯಪಲ್

Apple Image
  • ಈ ಫೀಚರ್ ವೆಬ್‌ಬ್ರೌಸಿಂಗ್‌ನ್ನು ಸ್ಪೈವೇರ್‌ನಿಂದ ನಿರ್ಬಂಧಿಸುತ್ತದೆ
  • ಈ ಯೋಜನೆಗೆ ಒಂದು ಕೋಟಿ ಡಾಲರ್‌ರಷ್ಟು ಹೂಡಿಕೆ ಮಾಡಿದೆ

ಐಪೋನ್, ಐಪ್ಯಾಡ್ ಮತ್ತು ಮ್ಯಾಕ್ ಉಪಕರಣಗಳನ್ನು ಹರ್ಮಿತ್, ಪೆಗಾಸಸ್‌ನಂತಹ ಸ್ಪೈವೇರ್‌ನಿಂದ ರಕ್ಷಿಸಲು ಆ್ಯಪಲ್ ಸಂಸ್ಥೆ 'ಲಾಕ್‌ಡೌನ್‌ ಮೋಡ್' ಎಂಬ ನೂತನ ವೈಶಿಷ್ಟ್ಯವನ್ನು ಪರಿಚಯಿಸಲಿದೆ. 

ಮೊಬೈಲ್‌ನಲ್ಲಿ ಯಾವುದೇ ಸ್ಪೈವೇರ್‌ಗಳು ಕಂಡುಬಂದಲ್ಲಿ ಅವುಗಳನ್ನು ಅಳಿಸಿ ಸ್ಮಾರ್ಟ್‌ಪೋನ್‌, ಕಂಪ್ಯೂಟರ್‌ಗಳನ್ನು ರಕ್ಷಿಸುವ ಕೆಲಸವನ್ನು 'ಲಾಕ್‌ಡೌನ್‌ ಮೋಡ್‌' ಮಾಡಲಿದೆ. ಈ ವೈಶಿಷ್ಟ್ಯವು ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಐಒಎಸ್ 16, ಐಪ್ಯಾಡ್ ಮತ್ತು ಮ್ಯಾಕ್‌ನಲ್ಲಿ ಬಳಕೆಯಲ್ಲಿರುತ್ತದೆ. 

"ಈ ಬದಲಾವಣೆಯು ಐಪೋನ್ ಬಳಕೆದಾರರಿಗೆ ಹೆಚ್ಚು ಸಹಾಯ ಮಾಡುತ್ತದೆ ಮತ್ತು ಡಿಜಿಟಲ್ ಬೆದರಿಕೆಗಳನ್ನು ಗಂಭೀರವಾಗಿ ನಿಯಂತ್ರಿಸಲಿದೆ. ಅದಾಗ್ಯೂ ಆ್ಯಪಲ್ ಸಂಸ್ಥೆ ಬಳಕೆದಾರರ ಗೌಪ್ಯತೆ ಕಾಪಾಡಲು ಹೆಚ್ಚು ನಿಗಾವಹಿಸಲಿದೆ. ಯೋಜನೆಗೆ ಸುಮಾರು ಒಂದು ಕೋಟಿ ಡಾಲರ್‌ರಷ್ಟು ಹೂಡಿಕೆ ಮಾಡಲಾಗಿದೆ" ಎಂದು ಆ್ಯಪಲ್ ಸಂಸ್ಥೆ ಹೇಳಿದೆ.

ಇಸ್ರೇಲ್ ಮೂಲದ ಕಂಪನಿಯಾದ ನೆಟ್‌ವರ್ಕ್‌ ಭದ್ರತಾ ಕಚೇರಿಯಲ್ಲಿ (ಎನ್ಎಸ್ಒ) ಪೆಗಾಸಸ್‌ನಂತಹ ಸ್ಪೈವೇರ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇಂತಹ ಸ್ಪೈವೇರ್‌ನ್ನು ಸರ್ಕಾರ ಗೌಪ್ಯತೆ ಕಾಪಾಡುವ ಉಪಕರಣಗಳಾಗಿ ಬಳಸುತ್ತಿದೆ. 

“ಲಾಕ್‌ಡೌನ್‌ ಮೋಡ್ ಆಯ್ಕೆಯು ಗಂಭೀರವಾಗಿ ಕಾರ್ಯಾನಿರ್ವಹಿಸಲಿದೆ ಮತ್ತು ಯಾವುದೇ ಅನಾಮಿಕ ಅಪ್ಲಿಕೇಶನ್‌ಗಳನ್ನು ಡೌನ್‌ಲೌಡ್‌ ಮಾಡಲು ಅನುಮತಿಸುವುದಿಲ್ಲ. ಜೊತೆಗೆ ಈ ಬದಲಾವಣೆ ಎಲ್ಲ ಆ್ಯಪಲ್ ಉಪಕರಣಗಳಿಗೆ ಭದ್ರತೆ ನೀಡಲಿದೆ. ಮುಖ್ಯವಾಗಿ ಸಂದೇಶಗಳು, ಕಾಲಿಂಗ್, ವೆಬ್‌ಬ್ರೌಸಿಂಗ್‌ನ್ನು ಸ್ಪೈವೇರ್‌ನಿಂದ ನಿರ್ಬಂಧಿಸುತ್ತದೆ" ಎಂದು ಆ್ಯಪಲ್ ಸಂಸ್ಥೆ ತಮ್ಮ ಆಧಿಕೃತ ಬ್ಲಾಗ್‌ನಲ್ಲಿ ಉಲ್ಲೇಖಿಸಿದೆ. 

ಈ ಹಿಂದೆ ಹಲವು ದೊಡ್ಡ ಟೆಕ್ ಕಂಪನಿಗಳು ಸೈಬರ್ ಸುರಕ್ಷತೆ ಕುರಿತು ಸಂಶೋಧನೆ ನಡೆಸಿದೆ. ಗೂಗಲ್ 2017ರಲ್ಲಿ ಸೈಬರ್ ಸುರಕ್ಷತಾ ಫೀಚರ್‌ನ್ನು ಅಭಿವೃದ್ಧಿಪಡಿಸಿತ್ತು. ಇದರಿಂದ ಬಳಕೆದಾರರ ಮೊಬೈಲ್‌ನಲ್ಲಿ ಆಗುವ ವಂಚನೆ, ಆಕಸ್ಮಿಕ ಕರೆಗಳನ್ನು ತಡೆಗಟ್ಟಲು ಸಹಾಯವಾಗಿತ್ತು. ಅದೇ ರೀತಿ ಮೈಕ್ರೋಸಾಫ್ಟ್ ಕೂಡ ವೆಬ್ ಬ್ರೌಸರ್‌ನ ಗೌಪ್ಯತೆ ಕಾಪಾಡಲು ಹಲವು ಫೀಚರ್‌ಗಳನ್ನು ಪರಿಚಯಿಸಿದೆ. 

ಈ ಸುದ್ದಿ ಓದಿದ್ದೀರಾ? ಸ್ಮಾರ್ಟ್‌ಪೋನ್‌ಗಳನ್ನು ಗುರಿಯಾಗಿಸುತ್ತಿವೆಯೇ ಹರ್ಮಿಟ್ ಸ್ಪೈವೇರ್; ಭದ್ರತೆ ಹೇಗೆ? 

ಅದರೇ, ಆ್ಯಪಲ್ ಪರಿಚಯಿಸಿದ ಈ ಹೊಸ ವೈಶಿಷ್ಟ್ಯವು ಐಪೋನ್ ಬಳಕೆದಾರರಿಗೆ ಹೆಚ್ಚು ಸಹಾಯ ಮಾಡಲಿದೆ ಮತ್ತು ಉಳಿದ ಎಲ್ಲ ಫೀಚರ್‌ಗಳಿಗಿಂತ ಇನ್ನೂ ಹೆಚ್ಚು ಪರಿಣಾಮಕಾರಿತ್ವವನ್ನು ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್