ಚೀನಾದಲ್ಲಿ ಹೆಚ್ಚು ನೌಕರರನ್ನು ನೇಮಿಸಿಕೊಳ್ಳಲು ಸಜ್ಜಾಗುತ್ತಿರುವ ಆ್ಯಪಲ್; ಹೊಸ ಉತ್ಪನ್ನ ಬಿಡುಗಡೆಗೆ ಸಜ್ಜು

Apple Image
  • ಅತಿದೊಡ್ಡ ಐಫೋನ್ ಕಾರ್ಖಾನೆ ಫಾಕ್ಸ್‌ಕಾನ್ ಕಂಪನಿ
  • ಕಾರ್ಮಿಕರ ನೇಮಕಾತಿ ಪ್ರಾರಂಭಿಸಿದ ಫಾಕ್ಸ್‌ಕಾನ್

ಚೀನಾದ ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್ ಕಂಪನಿಯು ಅತಿದೊಡ್ಡ ಐಫೋನ್ ಕಾರ್ಖಾನೆಯಾಗಿದ್ದು, ನೇಮಕಾತಿ ಆರಂಭಿಸಿದೆ. ಶೀಘ್ರದಲ್ಲೇ ಆ್ಯಪಲ್ ಐಪೋನ್ 14 ಬಿಡುಗಡೆಗೆ ಸಜ್ಜಾಗುತ್ತಿರುವ ಕಾರಣದಿಂದ ಹೊಸ ಕಾರ್ಮಿಕರು ಅವಶ್ಯಕ ಎಂದು ಚೀನಾ ಸಂಸ್ಥೆ ತಿಳಿಸಿದೆ. 

ಕಳೆದ ವರ್ಷದಿಂದ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಫಾಕ್ಸ್‌ಕಾನ್ ಹೊಸ ನೇಮಕಾತಿಗಳನ್ನು ನಿಲ್ಲಿಸಿತ್ತು. ಈಗ ಫಾಕ್ಸ್‌ಕಾನ್ ನೂತನ ಕೆಲಸಗಾರರನ್ನು ಮತ್ತು ತರಬೇತಿದಾರರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದ್ದು, 9,000 ಯುವಾನ್ (ರೂ 1 ಲಕ್ಷ) ವರೆಗಿನ ಬೋನಸ್‌ಗಳನ್ನೂ ನೀಡಲಿದೆ. ಬೋನಸ್‌ಗೆ ಅರ್ಹರಾಗಲು ಕಾರ್ಮಿಕರು ಕನಿಷ್ಠ ನಾಲ್ಕು ತಿಂಗಳ ಕಾಲ ತಮ್ಮ ಕೆಲಸದಲ್ಲಿ ಇರಬೇಕಾಗುತ್ತದೆ ವರದಿಯಲ್ಲಿ ತಿಳಿಸಲಾಗಿದೆ.

ಐಫೋನ್ 14 ಉತ್ಪಾದನೆಯ ಜವಾಬ್ದಾರಿಯನ್ನು ಹೊಂದಿರುವ ಫಾಕ್ಸ್‌ಕಾನ್‌ನ ಡಿಜಿಟಲ್ ಪ್ರಾಡಕ್ಟ್ ಬ್ಯುಸಿನೆಸ್ ಗ್ರೂಪ್‌ನಿಂದ ನೇಮಕಾತಿ ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಇಂಟರ್ನೆಟ್ ಬಳಸದೆ ಜಿ-ಮೇಲ್ ಸಂದೇಶ ಓದಬಹುದು ಮತ್ತು ಪ್ರತಿಕ್ರಿಯಿಸಬಹುದು

ಫಾಕ್ಸ್‌ಕಾನ್‌ನ ಇತ್ತೀಚಿನ ನೇಮಕಾತಿಯಲ್ಲಿ ಮುಂದಿನ ತಿಂಗಳು ಹೆಚ್ಚಿನ ಕಾರ್ಮಿಕರನ್ನು ಆಕರ್ಷಿಸಲು ನಗದು ಬಹುಮಾನಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಗುತ್ತಿಗೆ ತಯಾರಕರು ಸ್ಥಿರ ಮಟ್ಟದ ಉತ್ಪಾದನೆಯನ್ನು ಒದಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹಾಂಗ್ ಕಾಂಗ್‌ನ ಕಾರ್ಮಿಕ ವಿಶ್ಲೇಷಕ ಇವಾನ್ ಲ್ಯಾಮ್ ಹೇಳಿದ್ದಾರೆ. 

"ವಿಶ್ವಾದ್ಯಂತ ಶೇ. 80ರಷ್ಟು ಐಫೋನ್‌ಗಳನ್ನು ಫಾಕ್ಸ್‌ಕಾನ್ ಸ್ಥಾವರವು ಉತ್ಪಾದಿಸುತ್ತದೆ. ಬೇಸಿಗೆಯ ನೇಮಕದಲ್ಲಿ ಆ್ಯಪಲ್ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ. ನೂತನ ಐಫೋನ್‌ಗಳಿಗಾಗಿ ಕೆಲವು ಆರ್ಡರ್‌ಗಳನ್ನು ಮರುಹಂಚಿಕೆ ಮಾಡಲು ಆ್ಯಪಲ್ ಪರಿಗಣಿಸಬಹುದು ಮತ್ತು ವಿವಿಧ ಕಾರಣಗಳಿಂದಾಗಿ ಫಾಕ್ಸ್‌ಕಾನ್‌ನ ಉತ್ಪಾದನೆಗೆ ಅಡ್ಡಿಯಾದಲ್ಲಿ ಚೀನಾದಲ್ಲಿನ ಗ್ರಾಹಕರಿಗೆ ಬಾರಿ ನಷ್ಟವಾಗಲಿದೆ" ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್