
- ಆರೋಗ್ಯ ಮತ್ತು ಫಿಟ್ನೆಸ್ಗಾಗಿ ಆ್ಯಪ್ ಡೌನ್ಲೋಡ್ಗಳ ಸಂಖ್ಯೆ ಶೇ. 80 ಹೆಚ್ಚಳ
- ಭಾರತದಲ್ಲಿ ಫಿಟ್ನೆಸ್ಗಾಗಿ ಆ್ಯಪ್ಗಳ ಮೊರೆಹೋಗುತ್ತಿರುವ ಗ್ರಾಹಕರು
ಕೋವಿಡ್ ನಂತರ ಜನರು ತಮ್ಮ ಆರೋಗ್ಯ ಕಾಳಜಿಯ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಲು ಹೆಚ್ಚಾಗಿ ಆ್ಯಪ್ಗಳ ಮೊರೆಹೋಗುತ್ತಿದ್ದಾರೆ.
ಡಾಟಾ.ಎಐ ಸಂಸ್ಥೆಯ (data.ai) ಮೊಬೈಲ್ ಸ್ಟೇಟ್ ಆಫ್ 2021 ವರದಿಯ ಪ್ರಕಾರ 2020ರಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಫಿಟ್ನೆಸ್ಗೆ ಸಂಬಂಧಿಸಿದ ಆ್ಯಪ್ ಡೌನ್ಲೋಡ್ಗಳ ಸಂಖ್ಯೆ ಶೇ. 80 ರಷ್ಟು ಹೆಚ್ಚಾಗಿದೆ.
ಇಂದಿನ ಸ್ಮಾರ್ಟ್ಫೋನ್ಗಳ ಯುಗದಲ್ಲಿ ಆರೋಗ್ಯ ಫಿಟ್ನೆಸ್ಗೆ ಸಂಬಂಧಿಸಿದಂತೆ ಸಲಹೆಗಳು ಗೂಗಲ್ನಲ್ಲಿ ಸಮುದ್ರದಷ್ಟು ದೊರೆಯುತ್ತಿವೆ. ಗೂಗಲ್ ಪ್ಲೇ ಸ್ಟೋರ್ನಲ್ಲಿಯೂ ಆರೋಗ್ಯ ಮತ್ತು ಫಿಟ್ನೆಸ್ಗೆ ಸಂಬಂಧಿಸಿ ನೂರಾರು ಆ್ಯಪ್ಗಳು ಉಚಿತವಾಗಿ ದೊರೆಯುತ್ತವೆ.
ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಬಳಸಬಹುದಾದ ಆರು ಆರೋಗ್ಯ ಮತ್ತು ಫಿಟ್ನೆಸ್ ಆ್ಯಪ್ಗಳ ಕಿರು ಪರಿಚಯ ಇಲ್ಲಿದೆ. ಈ ಎಲ್ಲಾ ಆ್ಯಪ್ಗಳು ಆ್ಯಂಡ್ರಾಯ್ಡ್ ಮತ್ತು ಐಓಎಸ್ನಲ್ಲಿ ಲಭ್ಯವಿವೆ.
ವ್ಯಕ್ತಿಗನುಗುಣವಾಗಿ ಆಹಾರ ಪಥ್ಯ ಸೇರಿದಂತೆ ದಿನನಿತ್ಯದ ವ್ಯಾಯಾಮ ಹೇಗಿರಬೇಕು ಎಂಬುದನ್ನು ಹೆಲ್ತ್ ಪಾಲ್ ಆ್ಯಪ್ ಟ್ಯ್ರಾಕ್ ಮಾಡುತ್ತದೆ. ಪ್ರತಿನಿತ್ಯದ ವ್ಯಾಯಾಮ ಹೇಗಿರಬೇಕು ಎಂಬುದನ್ನು ವ್ಯಕ್ತಿಯ ಎತ್ತರ, ತೂಕಕ್ಕೆ ಅನುಗುಣವಾಗಿ ಯೋಜನೆ ನೀಡುತ್ತದೆ. ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳು ಇದರಲ್ಲಿ ದೊರೆಯುತ್ತವೆ.
ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಹೆಲ್ತ್ ಪಾಲ್
2. ಬ್ರೀದ್ ಟು ರಿಲ್ಯಾಕ್ಸ್ (Breathe2Relax)
ಒತ್ತಡ ನಿರ್ವಹಿಸಲು ಉಸಿರಾಟದ ತಂತ್ರಗಳನ್ನು ಈ ಆ್ಯಪ್ ಹೇಳಿಕೊಡುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಟೆಲಿಹೆಲ್ತ್ ಅಂಡ್ ಟೆಕ್ನಾಲಜಿ ಕೇಂದ್ರವು ಈ ಆ್ಯಪ್ ಅನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ಉಸಿರಾಟದ ತಂತ್ರಗಳ ಮೂಲಕ ಒತ್ತಡ ನಿಭಾಯಿಸುವುದು ಹೇಗೆ? ಖಿನ್ನತೆಯಿಂದ ಹೊರಬರುವುದು ಹೇಗೆ? ಎಂಬುದನ್ನು ಸರಳವಾಗಿ ವಿವರಿಸಲಾಗಿದೆ.
ಆ್ಯಂಡ್ರಾಯ್ಡ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಬ್ರೀದ್ ಟು ರಿಲ್ಯಾಕ್ಸ್
ಯೋಗ ಕಲಿಯುವ ಆಸಕ್ತಿ ಇರುವವರಿಂದ ಮೊದಲುಗೊಂಡು ಯೋಗಪಟುಗಳವರೆಗೆ ಎಲ್ಲರಿಗೂ ಅನುಕೂಲವಾಗುವಂತಹ ಯೋಗಾಸನಗಳು ಈ ಆ್ಯಪ್ನಲ್ಲಿ ಉಚಿತವಾಗಿ ದೊರೆಯುತ್ತವೆ. ಇದರಲ್ಲಿ ಪ್ರತಿಯೊಂದು ಆಸನಕ್ಕೂ ಸೂಚನೆಗಳು, ಪ್ರತಿ ಚಲನೆಯ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಸರ್ವಾಂಗಾಸನದಂತಹ ಸವಾಲಿನ ಆಸನಗಳನ್ನು ಹೇಗೆ ಸುರಕ್ಷಿತವಾಗಿ ಮಾಡಬಹುದು ಎಂಬುದನ್ನು ಇದರಲ್ಲಿ ಕಲಿಯಬಹುದು.
ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಡೈಲಿ ಯೋಗ
ಆರೋಗ್ಯಕರ ಆಹಾರದ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಫುಡುಕೇಟ್ ಆ್ಯಪ್ ಸಹಾಯ ಮಾಡುತ್ತದೆ. ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ಯಾವೆಲ್ಲಾ ಪೋಷಕಾಂಶಗಳು ಇರಬೇಕು. ಎಷ್ಟು ಕ್ಯಾಲರಿ ಆಹಾರ ಸೇವನೆ ಮಾಡಬೇಕು ಎಂಬುದನ್ನು ಈ ಆ್ಯಪ್ ಸೂಚಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ನಿರ್ದಿಷ್ಟ ಪ್ಲಾನ್ ಅನ್ನು ಆ್ಯಪ್ ನೀಡುತ್ತದೆ. ಪ್ರತಿದಿನ ಎಷ್ಟು ಕ್ಯಾಲರಿ ಕರಗಿಸಬೇಕು? ಅದಕ್ಕಾಗಿ ಯಾವೆಲ್ಲಾ ವ್ಯಾಯಾಮಗಳನ್ನು ಮಾಡಬೇಕು? ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.
ಆ್ಯಂಡ್ರಾಯ್ಡ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಫುಡುಕೇಟ್
ಹೃದಯದ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಗೂಗಲ್ ಫಿಟ್, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು, ನಿದ್ರೆ ಸುಧಾರಿಸಲು ಮತ್ತು ಒಟ್ಟಾರೆ ಮಾನಸಿಕ ಯೋಗಕ್ಷೇಮ ಹೆಚ್ಚಿಸಲು ವಿಶ್ವಸಂಸ್ಥೆ ಶಿಫಾರಸ್ಸು ಮಾಡಿದ ʼದೈಹಿಕ ಚಟುವಟಿಕೆ ದಿನನಿತ್ಯ ಕನಿಷ್ಠ 30 ನಿಮಿಷಗಳ ವೇಗದ ನಡಿಗೆʼಯನ್ನು ಈ ಆ್ಯಪ್ ಟ್ರ್ಯಾಕ್ ಮಾಡುತ್ತದೆ. ಈ ಮೂಲಕ ಬಳಕೆದಾರನ ದಿನನಿತ್ಯದ ದೈಹಿಕ ಆರೋಗ್ಯದ ಬಗ್ಗೆ ಗಮನಹರಿಸುತ್ತದೆ.
ಆ್ಯಪ್ಗಾಗಿ ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಫಿಟ್
6. ಎಲಿವೇಟ್ (Elevate)
ಮೆದುಳಿಗೆ ಹೆಚ್ಚಿನ ಕೆಲಸ ಕೊಡುವ ಮೂಲಕ ನಮ್ಮ ಗಮನ ಕೇಂದ್ರೀಕರಣ, ಸಂವಹನ ಕೌಶಲ್ಯ, ಜ್ಞಾಪನಾಶಕ್ತಿ ಬೆಳವಣಿಗೆ ಹೆಚ್ಚಿಸುವ ಚಟುವಟಿಕೆಗಳಿರುವ ಆ್ಯಪ್ ಇದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಆ್ಯಪ್ ಕೆಲಸ ಮಾಡುತ್ತದೆ.
ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಎಲಿವೇಟ್