ಯಾವುದೇ ವೆಬ್‌ಸೈಟ್‌ಗೆ ಪ್ರವೇಶಿಸುವ ಮುನ್ನ ಇರಲಿ ಎಚ್ಚರ!

  • ವೆಬ್‌ಸೈಟ್‌ಗೆ ನೀಡುವ ವೈಯಕ್ತಿಕ ಡೇಟಾ ʼಎನ್‌ಕ್ರಿಪ್ಟ್ʼವಾಗಿರಬೇಕು
  • ವೆಬ್‌ಸೈಟ್‌ನಿಂದ ಸುರಕ್ಷಿತವಾಗಿರಲು ʼಎಚ್‌.ಟಿ.ಟಿ.ಪಿ.ಎಸ್ʼ ಪರಿಶೀಲಿಸಿ 

ನಿಮಗೆ ಯಾವುದೇ ಒಂದು ವಿಷಯದ ಬಗ್ಗೆ ಮಾಹಿತಿ ಅಗತ್ಯವಿದ್ದು, ಸರ್ಚ್‌ ಇಂಜಿನ್‌ನಲ್ಲಿ ಹುಡುಕಿದಾಗ ನಿಮ್ಮ ಮುಂದೆ ಲಕ್ಷಾಂತರ ವೆಬ್‌ಸೈಟ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ, ಯಾವುದು ಸುರಕ್ಷಿತ ಎಂದು ತಿಳಿಯುತ್ತಿಲ್ಲವೇ?

ಕೆಲವೊಮ್ಮೆ ನೀವು ಬ್ರೌಸರ್‌ನಲ್ಲಿ ಸರ್ಚ್ ಮಾಡಿದ ಮಾಹಿತಿಗಳು ನಿಖರತೆ ಇಲ್ಲದೇ ಇರಬಹುದು. ಕೆಲವು ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಿದಾಗ ನಿಮಗೆ ʼಸ್ಪಾಮ್‌ ಮೇಲ್ಸ್‌ಗಳುʼ ಬರಬಹುದು ಹಾಗೂ ಮೊಬೈಲ್‌ಗೆ ವೈರಸ್‌ ಸೇರಬಹುದು. ಹೀಗಿರುವಾಗ ಯಾವುದೇ ವೆಬ್‌ಸೈಟ್‌ ತೆರೆದು ನೋಡುವ ಮೊದಲು ಹೇಗೆ ಎಚ್ಚರ ವಹಿಸಬೇಕು? ಇಲ್ಲಿದೆ ಮಾಹಿತಿ.

ವೆಬ್‌ಸೈಟ್‌ನಿಂದ ಸುರಕ್ಷಿತವಾಗಿರಲು ಇಲ್ಲಿದೆ ಉತ್ತಮ ಸಲಹೆ 

ʼಎಚ್‌.ಟಿ.ಟಿ.ಪಿ.ಎಸ್ʼ ಮತ್ತು ʼಎಸ್‌ಎಸ್‌ಎಲ್‌ʼ ಅನ್ನು ಪರಿಶೀಲಿಸಿ: ʼಎಚ್‌.ಟಿ.ಟಿ.ಪಿ.ಎಸ್ʼ ಎಂದರೆ ʼಹೈಪರ್ ಟೆಕ್ಟ್ಸ್ ಟ್ರಾನ್ಸ್ಫರ್ ಪ್ರೋಟೋಕಾಲ್ʼ ಇದನ್ನು ವೆಬ್‌ಸೈಟಿನ ʼಯು.ಆರ್‌.ಎಲ್ʼ (Uniform Resource Locator) ಲಿಂಕಿನ ಮೇಲ್ಭಾಗದಲ್ಲಿ ಕಾಣಬಹುದು. ಇದು ವೆಬ್ ಸರ್ವರ್‌ಗಳ ನಡುವೆ ಮಾಹಿತಿ ವಿನಿಮಯ ಮಾಡುವ ಕೆಲಸದಲ್ಲಿ ಸಹಾಯಕವಾಗಿರುತ್ತದೆ.

ಯಾವುದೇ ಯುಆರ್‌ಎಲ್‌ನಲ್ಲಿ ʼಎಚ್‌ಟಿಟಿಪಿಎಸ್ʼ ಜೊತೆಗೆ ಬೀಗದ ಚಿತ್ರ ಹೊಂದಿದ್ದರೆ ಅಂತಹ ವೆಬ್‌ಸೈಟ್‌ಗಳು ʼಎಸ್.ಎಸ್.ಎಲ್’ ಪ್ರಮಾಣಪತ್ರ ಹೊಂದಿವೆ ಎಂದರ್ಥ. ಈ ʼಎಚ್.ಟಿ.ಟಿ.ಪಿ.ಎಸ್ʼನಲ್ಲಿರುವ ʼಎಸ್ʼ ಪದದ ಅರ್ಥ ಸುರಕ್ಷಿತವಾಗಿದೆ ಎಂದು ಸೂಚಿಸುತ್ತದೆ. ಅಂದರೆ ʼಎಸ್.ಎಸ್.ಎಲ್’ ಪ್ರಮಾಣಪತ್ರವೂ ನಮ್ಮ ಬ್ರೌಸರ್‌ನಿಂದ ವೆಬ್‌ಸೈಟ್‌ಗೆ ರವಾನೆಯಾಗುವ ಎಲ್ಲ ಮಾಹಿತಿಗಳು ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸುತ್ತದೆ.

ನಾವು ವೆಬ್‌ಸೈಟ್‌ಗೆ ನೀಡುವ ವೈಯಕ್ತಿಕ ಡೇಟಾಗಳಾದ ಲಾಗ್ ಇನ್ ಇ-ಮೇಲ್, ಪಾಸ್ವರ್ಡ್, ಫೋನ್‌ ನಂಬರ್‌ ಮತ್ತು ಪೇಮೆಂಟ್‌ ಮಾಹಿತಿಗಳನ್ನು ಸುರಕ್ಷಿತವಾಗಿಡುವ ಕೆಲಸವನ್ನು ಮಾಡುತ್ತವೆ. ಜೊತೆಗೆ ಎಲ್ಲ ಮಾಹಿತಿ ʼಎನ್ ಕ್ರಿಪ್ಟ್ʼವಾಗಿರುತ್ತವೆ. ಹಾಗೇನಾದರೂ ಅದರ ಪ್ರಮಾಣ ಪತ್ರವನ್ನು ಪರೀಕ್ಷಿಸಬೇಕೆಂದರೆ ವೆಬ್‌ಸೈಟ್‌ನಲ್ಲಿ ಕಾಣುವ ಬೀಗದ ಮೇಲೆ ಕ್ಲಿಕ್ ಮಾಡಿದರೆ ಅದರ ಪೂರ್ಣ ವಿವರ ಗಮನಿಸಬಹುದು.

ಹಾಗಾದರೆ ವೆಬ್‌ಸೈಟ್‌ ನಕಲಿ ಎಂದು ಹೇಗೆ ತಿಳಿಯುವುದು?

ಯಾವುದೇ ವೆಬ್‌ಸೈಟ್‌ ʼಎಚ್.ಟಿ.ಟಿ.ಪಿ.ಎಸ್ʼನಿಂದ ಶುರುವಾಗಿ ಅದಕ್ಕೆ ಬೀಗದ ಚಿತ್ರವಿಲ್ಲವೆಂದರೆ ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವುದು ಸರಿಯಲ್ಲ. ಏಕೆಂದರೆ ಅಂತಾ ವೆಬ್‌ ಸೈಟ್‌ಗಳು ನೈಜತೆಯಿಂದ ಕೂಡಿರುವುದಿಲ್ಲ. ಹಾಗಾಗಿ ಮೋಸ ಮಾಡಬಹುದು. ಅಲ್ಲದೇ, ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಮಾಡುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.

ಈ ಸುದ್ದಿ ಓದಿದ್ದೀರಾ? ವಾಟ್ಸಪ್ ಗ್ರೂಪ್‌ನಿಂದ ಈಗ ಯಾರಿಗೂ ತಿಳಿಯದೆ ನಿರ್ಗಮಿಸಬಹುದು

ಗೌಪ್ಯತಾ ನೀತಿಗಳನ್ನು ಪರಿಶೀಲಿಸಿ

ಪ್ರತಿ ವೆಬ್‌ಸೈಟ್‌ ತನ್ನದೇ ಆದ ಗೌಪ್ಯತಾ ನೀತಿಯನ್ನು ಹೊಂದಿರುತ್ತದೆ. ಅಂತಹ ವೆಬ್‌ಸೈಟ್‌ಗಳಲ್ಲಿ ಏಕೆ ಮಾಹಿತಿಯನ್ನು ಕೇಳಲಾಗುವುದು ಮತ್ತು ಹೇಗೆ ಬಳಸುತ್ತದೆ ಎಂಬುದರ ಪೂರ್ಣ ವಿವರವನ್ನು ನೋಡಬಹುದು.

Image

ಈ ಮೇಲಿನ ಫೋಟೋಗಳು ವೆಬ್‌ಸೈಟ್‌ನ ಕೊನೆಯಲ್ಲಿ ಕಾಣಬಹುದು. ವೆಬ್‌ಸೈಟ್‌ಗೆ ಹೋಗಿ ಆ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ಸಂಸ್ಥೆಯ ವಿವರಗಳನ್ನು ಪರಿಶೀಲಿಸಬಹುದು. ಪ್ರತಿ ಬಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ಈ ಮೇಲಿನ ಅಂಶಗಳನ್ನು ಗಮನಿಸಿದರೆ ಉತ್ತಮ.

ನಿಮಗೆ ಏನು ಅನ್ನಿಸ್ತು?
4 ವೋಟ್