ಬೆಂಗಳೂರು| ಜೂನ್ 2ರಿಂದ 'ಜಾಗತಿಕ ಸ್ಟಾರ್ಟ್ಅಪ್ ಸಮ್ಮೇಳನ'

Banglore Start up Image
  • 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಜ್ಞರು ಭಾಗಿ
  • ಬಂಡವಾಳಗಾರರಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳ ಜಾಗತಿಕ ಸ್ಟಾರ್ಟ್ಅಪ್ ಸಮ್ಮೇಳನವು ಜೂನ್ 2ರ ಗುರುವಾರದಿಂದ ಆರಂಭವಾಗಲಿದೆ. ಇದರಲ್ಲಿ 22 ಅಧಿವೇಶನಗಳು ಹೊಂದಿದ್ದು, ವಿವಿಧ ಕ್ಷೇತ್ರಗಳಿಂದ 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತಜ್ಞರು ಭಾಗವಹಿಸಲಿದ್ದಾರೆ.

ಜಾಗತಿಕ ಸಮ್ಮೇಳನದ ಜೊತೆಗೆ ಭಾರತೀಯ ಜಾಗತಿಕ ನೂತನ ತಂತ್ರಜ್ಙಾನದ ಸಭೆ ಕೂಡ ಜರುಗಲಿದ್ದು ಜೂನ್ 2ರಿಂದ ಈ ಸಮ್ಮೇಳನ ಶುರುವಾಗಲಿದೆ. ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ ಮತ್ತು ಕ್ಯಾಟಮರನ್ ವೆಂಚರ್ಸ್ ಸಹಕಾರ ಹಾಗೂ ಟಾಟಾ ಡಿಜಿಟಲ್ ಬೆಂಬಲದೊಂದಿಗೆ ಕಾರ್ಯತಂತ್ರದ ಸಲಹಾ ಸಂಸ್ಥೆಯಾದ ಸ್ಮಾಡ್ಜಾ ಮತ್ತು ಸ್ಮಾಡ್ಜಾ ಸಂಸ್ಥೆಯು ಉದ್ಘಾಟನಾ ಸಮ್ಮೇಳನವನ್ನು ಆಯೋಜಿಸಿದ್ದಾರೆ.

ಈ ಎರಡು ದಿನಗಳ ಸಮ್ಮೇಳನದಲ್ಲಿ ಚೀನಾ, ಜಪಾನ್, ಕೊರಿಯಾ, ಜರ್ಮನಿ, ಇಸ್ರೇಲ್, ಯು.ಎನ್, ಸ್ವಿಝರ್‌ಲ್ಯಾಂಡ್, ಸಿಂಗಾಪುರ ಮತ್ತು ಭಾರತ ಸೇರಿದಂತೆ 80ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ತಜ್ಞರು, ಉದ್ಯಮಿಗಳು, ನೂತನ ತಂತ್ರಜ್ಞಾನರು ಮತ್ತು ಉನ್ನತ ಸಾಹಸೋದ್ಯಮ ಬಂಡವಾಳಗಾರರಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸಮ್ಮೇಳನದ ಆಯೋಜಕರು ತಿಳಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆಯಿದೆ. ಐಟಿಬಿಟಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣ್ ಮೂರ್ತಿ ಮತ್ತು ಸ್ಟ್ಯಾಪೋರ್ಡ್ ವಿಶ್ವವಿದ್ಯಾಲಯದ  ಪ್ರೊಫೆಸರ್ ಪೌಲ್ ಸಪೊ ಸೇರಿದಂತೆ ಹಲವು ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಸ್ಟಾರ್ಟ್‌ಅಪ್ ವಿಚಾರದಲ್ಲಿ 2016ರ ವೇಳೆಗೆ 66ನೇ ಸ್ಥಾನದಲ್ಲಿ ಭಾರತವು ಈಗಿನ ಜಾಗತಿಕ ಅವಿಷ್ಕಾರದ ಸೂಚ್ಯಂಕದಲ್ಲಿ 46ನೇ ಸ್ಥಾನದಲಿದೆ. ಇದರಿಂದಾಗಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಅಪ್ ವ್ಯವಸ್ಥೆಯನ್ನು ಭಾರತ ಹೊಂದಿದೆ.  ಇದರ ಪರಿಣಾಮವಾಗಿ ಭಾರತವು ಸ್ಟಾರ್ಟ್‌ಅಪ್ ಮತ್ತು ಹೊಸ ಆವಿಷ್ಕಾರವು ಹೇಗೆ ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬಹುದು" ಎಂದು ಸ್ಮಾಡ್ಜಾ ಮತ್ತು ಸ್ಮಾಡ್ಜಾ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಶ್ವ ಆರ್ಥಿಕ ವೇದಿಕೆಯ ಮಾಜಿ ವ್ಯವಸ್ಥಾಪಕ ನಿರ್ದೆಶಕ ಕ್ಲೌಡ್ ಸ್ಮಾಡ್ಜಾ ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
4 ವೋಟ್