ಭಾರತದಲ್ಲಿ ಸಿಗುವ ಎರಡು ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು

ಸ್ಮಾರ್ಟ್‌ವಾಚ್‌ಗಳು ಡಿಜಿಟಲ್ ಪರದೆಯನ್ನು ಒಳಗೊಂಡಿರುತ್ತದೆ, ಭಾರತದಲ್ಲಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯು ಆಯ್ಕೆಗಳಿಂದ ತುಂಬಿದೆ ನಾಯ್ಸ್, ಬೋಟ್, ರಿಯಲ್‌ಮೀ, ಬೌಲ್ಟ್, ಫೈರ್ ಬಾಲ್ಟ್ ಮತ್ತು ಇತರ ಹಲವು ಕಂಪನಿಗಳು ಸ್ಮಾರ್ಟ್‌ವಾಚ್‌ಗಳ ಬೆಳೆಯುತ್ತಿರುವ ಪಟ್ಟಿಗೆ ಕೊಡುಗೆ ನೀಡಿವೆ.
Smartwatches Images

ಇಂದಿನ ಕಾಲದಲ್ಲಿ ಜನರು ವಾಚ್ ಹಾಕದೆ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದರೆ ಹಲವು ತಂತ್ರಜ್ಞಾನ ಬಳಸಿ ಕಂಪನಿಗಳು ನೂತನ ವೈಶಿಷ್ಟ್ಯಗಳನ್ನು ಬಳಸಿ ಸ್ಮಾರ್ಟ್‌ವಾಚ್‌ಗಳನ್ನು ತಯಾರಿಸಿದ್ದಾರೆ.

ಭಾರತದಲ್ಲಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯು ಆಯ್ಕೆಗಳಿಂದ ತುಂಬಿದೆ. ನಾಯ್ಸ್, ಬೋಟ್, ರಿಯಲ್‌ಮೀ, ಬೌಲ್ಟ್, ಫೈರ್ ಬಾಲ್ಟ್ ಮತ್ತು ಇತರ ಹಲವು ಕಂಪನಿಗಳು ಸ್ಮಾರ್ಟ್‌ವಾಚ್‌ಗಳ ಬೆಳೆಯುತ್ತಿರುವ ಪಟ್ಟಿಗೆ ಕೊಡುಗೆ ನೀಡಿವೆ.

ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು?

ಸ್ಮಾರ್ಟ್‌ವಾಚ್‌ಗಳು ಡಿಜಿಟಲ್ ಪರದೆಯನ್ನು ಒಳಗೊಂಡಿರುತ್ತದೆ ಮತ್ತು ಇದರಲ್ಲಿ ಬಳಕೆದಾರರ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವುದು, ಪ್ರತಿ ಹೆಜ್ಜೆಯ ಹಂತಗಳು ಮತ್ತು ಸಂಖ್ಯೆಯನ್ನು ಎಣಿಸುವುದು ಹಾಗೂ ಮಣಿಕಟ್ಟಿನಿಂದ ನೇರವಾಗಿ ಮೋಬೈಲ್ ಸಂಖ್ಯೆಗೆ ಡಯಲ್ ಮಾಡಲು ಸಹ ಅವಕಾಶ ನೀಡಲಿದೆ. ಇಲ್ಲಿದೆ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ಸಂಪೂರ್ಣ ವಿವರ.

ನಾಯ್ಸ್ ಕಲರ್‌ಫಿಟ್‌ ಪಲ್ಸ್ ಗ್ರ್ಯಾಂಡ್

Image
Noise ColorFit Pulse Grand Image
ನಾಯ್ಸ್ ಕಲರ್‌ಫಿಟ್‌ ಪಲ್ಸ್ ಗ್ರ್ಯಾಂಡ್

ನಾಯ್ಸ್ ಕಂಪನಿಯ ಉತ್ಪನ್ನ ಇದಾಗಿದೆ. ಈ ಸ್ಮಾರ್ಟ್‌ವಾಚ್‌ ಬಳಕೆದಾರರ ಸ್ನೇಹಿಯಾಗಿ ಕಾರ್ಯಚರಣೆ ನಡೆಸಲಿದೆ. ಇದರ ಮೊತ್ತ ₹1799 ನಿಗದಿಯಾಗಿ ಬಿಡುಗಡೆ ಮಾಡಲಾಗಿದ್ದು, ನಾಯ್ಸ್ ಕಲರ್‌ಫಿಟ್‌ ಪಲ್ಸ್ ಗ್ರ್ಯಾಂಡ್ ಸರಣಿಗೆ ಕಂಪನಿಯ ಇತ್ತೀಚಿನ ಬಿಡುಗಡೆಯಾಗಿದೆ. ಈ ವಾಚ್‌ 1.69 ಇಂಚಿನ ಪರದೆಯನ್ನು ಹೊಂದಿದೆ ಮತ್ತು ಹೃದಯ ಬಡಿತ ಸಂವೇದಕ ಹಾಗೂ ಇನ್ನೂ ಹೆಚ್ಚು ವೈಶಿಷ್ಟ್ಯವನ್ನು ಒಳಗೊಂಡಂತೆ ಸಂವೇದಕಗಳೊಂದಿಗೆ ಬರುತ್ತದೆ.

ಬೌಲ್ಟ್ ಕಾಸ್ಮಿಕ್

Image
Boult Cosmic Image
ಬೌಲ್ಟ್ ಕಾಸ್ಮಿಕ್

ಇದರ ಬೆಲೆ ₹1999, ಬೌಲ್ಟ್ ಕಂಪನಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, 1.69-ಇಂಚಿನ ಪರದೆಯ ಜೊತೆಗೆ 240x280 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 218 ಪಿಕ್ಸೆಲ್ ಸಾಂದ್ರತೆ ಇರಲಿದೆ, ಇದು ರಕ್ತದೊತ್ತಡ ಮಾನಿಟರ್, ಬ್ಲಡ್ ಸ್ಯಾಚುರೇಶನ್ ಟ್ರ್ಯಾಕರ್ ಅನ್ನು ಸಹ ಹೊಂದಿದೆ. ಹೃದಯ ಬಡಿತ ಮಾನಿಟರ್, ಋತುಚಕ್ರದ ಮಾನಿಟರ್, ನೀರಿನ ಪ್ರತಿರೋಧ ಮತ್ತು ಬಹು ಕ್ರೀಡಾ ವಿಧಾನಗಳನ್ನು ಒಳಗೊಂದಿದೆ. ಇದು ನಿಖರವಾದ ಮತ್ತು ಪರಿಣಾಮಕಾರಿಯಾದ ಹೃದಯ ಬಡಿತದ ಮಾನಿಟರಿಂಗ್, ಕ್ಯಾಲೋರಿ ಎಣಿಕೆ ಮತ್ತು ಹೆಜ್ಜೆಯ ಹಂತದ ಎಣಿಕೆಗಾಗಿ ಸುಧಾರಿತ ಸಂವೇದಕಗಳನ್ನು ಹೊಂದಿದೆ. ಇದು ನಿಮಗೆ ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

ಬೋಟ್ ವೇವ್ ಲೈಟ್

Image
BoAt Wave Lite
ಬೋಟ್ ವೇವ್ ಲೈಟ್

ಬೋಟ್ ವೇವ್ ಲೈಟ್ 1.69-ಇಂಚಿನ ಪರದೆಯೊಂದಿಗೆ 500 ನಿಟ್‌ಗಳ ಗರಿಷ್ಠ ಹೊಳಪು ಮತ್ತು ಆರ್‌ಜಿಬಿ (ಕೆಂಪು, ಹಸಿರು, ನೀಲಿ) ಬಣ್ಣದ ಬೆಳಕು ಶೇ.70ರಷ್ಟು ಬರಲಿದೆ ಸ್ಮಾರ್ಟ್‌ವಾಚ್‌ ಬಳಕೆದಾರರ ಹೃದಯ ಬಡಿತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಮಲಗುವ ಮಾದರಿಗಳನ್ನು ಸಹ ಟ್ರ್ಯಾಕ್ ಮಾಡಲಿದೆ. ಈ ವಾಚ್‌ನಲ್ಲಿ 10 ಕ್ರೀಡಾ ವಿಧಾನಗಳನ್ನು ಪಡೆಯಬಹುದು. ಅವುಗಳಲ್ಲಿ ಫುಟ್‌ಬಾಲ್‌, ಯೋಗ, ಸೈಕ್ಲಿಂಗ್, ವಾಕಿಂಗ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್‌, ಸ್ಕಿಪ್ಪಿಂಗ್, ಕ್ಲೈಂಬಿಂಗ್ ಮತ್ತು ಈಜಿನಂತಹ ಹಲವು ಆಟಗಳು ಸೇರಿವೆ.

ಫೈರ್ ಬೋಲ್ಟ್ ನಿಂಜಾ 3 ಸ್ಮಾರ್ಟ್‌ವಾಚ್‌

Image
Fire-Boltt Ninja 3 Smartwatch Image
ಫೈರ್ ಬೋಲ್ಟ್ ನಿಂಜಾ 3 ಸ್ಮಾರ್ಟ್‌ವಾಚ್‌

ಫೈರ್ ಬೋಲ್ಟ್ ನಿಂಜಾ 3 ಸ್ಮಾರ್ಟ್‌ವಾಚ್‌ ಪ್ರಸ್ತುತ ಅಮೆಜಾನ್‌ನಲ್ಲಿ ₹1599ಕ್ಕೆ ಲಭ್ಯವಿದೆ. ಈ ಸ್ಮಾರ್ಟ್‌ವಾಚ್‌ 1.69 ಇಂಚಿನ ದೊಡ್ಡ ಪರದೆಯನ್ನು ಸಹ ಹೊಂದಿದೆ. ನೈಜ್ ಸಮಯವನ್ನು 24 ಗಂಟೆಗಳ ಕಾಲ ನೀಡುವ ಜೊತೆಗೆ ಬ್ಲಡ್ ಆಕ್ಸಿಜನ್ ಟ್ರ್ಯಾಕಿಂಗ್, ಡೈನಾಮಿಕ್ ಹಾರ್ಟ್ ರೇಟ್ ಮಾನಿಟರಿಂಗ್, ಸ್ಪೋರ್ಟ್ಸ್ ವಿಧಾನಗಳು, ಬ್ಲಡ್ ಸ್ಯಾಚುರೇಶನ್ ಟ್ರ್ಯಾಕರ್ ಮತ್ತು ಇತರ ಹಲವು ಆರೋಗ್ಯದ ವೈಶಿಷ್ಟ್ಯಗಳೊಂದಿಗೆ ಬರಲಿದೆ.

ಈ ಸುದ್ದಿ ಓದಿದ್ದೀರಾ? ಹದಿನೈದು ಸಾವಿರದೊಳಗೆ ಅತ್ಯುತ್ತಮ ಸ್ಮಾರ್ಟ್‌ಪೋನ್‌ ಆರಿಸಬಹುದು

ಬೌಲ್ಟ್ ಡ್ರಿಫ್ಟ್

Image
Boult Drift Image
ಬೌಲ್ಟ್ ಡ್ರಿಫ್ಟ್

ಬೌಲ್ಟ್ ಡ್ರಿಫ್ಟ್ ಭಾರತದಲ್ಲಿ ₹1499ಕ್ಕೆ ಬಿಡುಗಡೆ ಮಾಡಲಾಗಿದೆ. ಇದು 240x280 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.69 ಇಂಚಿನ ಪರದೆಯನ್ನು ಹೊಂದಿದೆ, ಗಡಿಯಾರವು 218 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ನೀಡುವ ಜೊತೆಗೆ 500 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಗಡಿಯಾರವು 60 ಪೂರ್ವನಿಗದಿ ಕ್ರೀಡಾ ವಿಧಾನಗಳು ಮತ್ತು ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಹಾಗೂ 24 ಗಂಟೆಯ ಹೃದಯ ಬಡಿತ ಮಾನಿಟರಿಂಗ್ ಅನ್ನು ಸಹ ಒಳಗೊಂಡಿದೆ. ಇದು ಬಳಕೆದಾರರ ಹೃದಯ ಬಡಿತವನ್ನು ಯಾವಾಗ ಬೇಕಾದರೂ ಪರಿಶೀಲಿಸಲು ಅನುಮತಿಸುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್