ಹದಿನೈದು ಸಾವಿರದೊಳಗೆ ಅತ್ಯುತ್ತಮ ಸ್ಮಾರ್ಟ್‌ಪೋನ್‌ ಆರಿಸಬಹುದು

Smartphones Images
  • ಕಂಪನಿಗಳು ಅತಿಕಡಿಮೆ ದರದಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿವೆ
  • ಬ್ಯಾಂಕಿನ ನೆರವಿಲ್ಲದೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳು

ಭಾರತದಲ್ಲಿ ಸ್ಮಾರ್ಟ್‌ಪೋನ್‌ಗಳು ಎಲ್ಲರಿಗೂ ಬೇಕು, ಆದರೆ ಜನರು ಹೆಚ್ಚು ಹಣ ಕೊಡಲು ಸಿದ್ಧವಿರುವುದಿಲ್ಲ. ಅಂತಹವರಿಗೆಂದು ಕೆಲವು ಕಂಪನಿಗಳು ಅತಿಕಡಿಮೆ ದರದಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿವೆ.

ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸ್ಮಾರ್ಟ್‌ಪೋನ್‌ಗಳು ಲಭ್ಯ. ಆದರೇ ಎಲ್ಲವೂ ಸುರಕ್ಷಿತವಾಗಿರುವುದಿಲ್ಲ. ಕೆಲವೂ ತುಂಬಾ ದುಬಾರಿ ಕೂಡ, ಆದರೆ ನಾವು ನೀಡುತ್ತಿರುವ ಪಟ್ಟಿಯಲ್ಲಿ ಬ್ಯಾಂಕಿನ ಮೊರೆ ಹೋಗದೆ ಖರೀದಿ ಮಾಡುವ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳು ಕೆಲವು ಇಲ್ಲಿವೆ.

Image
Realme Narzo 30A

ರಿಯಲ್‌ಮೀ ನಾರ್ಜೋ 30ಎ

ರಿಯಲ್‌ಮೀ ಪರಿಚಯಿಸಿದ ನಾರ್ಜೋ ಸಿರೀಸ್‌ನಲ್ಲೇ ಈ ಸ್ಮಾರ್ಟ್‌ಪೋನ್‌ ಅತ್ಯುತ್ತಮ, ಈ ಮೊಬೈಲ್ ನಿಮಗೆ ಹತ್ತು ಸಾವಿರದೊಳಗೆ ಲಭ್ಯ. 4 ಜಿಬಿ ರಾಮ್ ಮತ್ತು 64 ಜಿಬಿ ಸಂಗ್ರಹಣೆಯೊಂದಿಗೆ ಮೀಡಿಯಾ ಟೆಕ್ ವೈಶಿಷ್ಟ್ಯ ಮತ್ತು ಚಿಪ್‌ಸೆಟ್‌ ಆಕ್ಟಾ-ಕೋರ್ ಸಿಪಿಯು ಹೊಂದಿದೆ. ʻಕಾಲ್ ಆಫ್ ಡ್ಯೂಟಿʼಯಂತಹ ಆಟಗಳನ್ನು ಆಡುವ ಸಾಮರ್ಥ್ಯ ಈ ಸ್ಮಾರ್ಟ್‌ಪೋನ್‌ ಒಳಗೊಂಡಿದೆ. 13 MP ಪ್ರೈಮರಿ ಕ್ಯಾಮರಾದ ಲೆನ್ಸ್ ಜೊತೆಗೆ ಉತ್ತಮ ಬೆಳಕಿನ ಸೌಲಭ್ಯ ಕೂಡ ಇದರಲ್ಲಿ ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ದೃಶ್ಯಗಳನ್ನು ತೆಗೆಯುವ ಸಾಮರ್ಥ್ಯದ ಜೊತೆಗೆ 6,000 ಎಂಎಎಚ್ ಬ್ಯಾಟರಿ ಮತ್ತು 6.5 ಇಂಚಿನ ಪರದೆಯಿದೆ.

ವೈಶಿಷ್ಟ್ಯಗಳು 

ಪರದೆ- 6.5 ಇಂಚು, 270 ಪಿಪಿಐ
ಹಿಂಬದಿಯ ಕ್ಯಾಮೆರಾ- 13 + 2 ಎಂ.ಪಿ ಕ್ಯಾಡ್
ಮುಂಭಾಗದ ಕ್ಯಾಮೆರಾ- 8 ಎಂ.ಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಪ್ರೊಸೆಸರ್- ಮೆಡಿಟೆಕ್ ಜಿ85 ಆಕ್ಟಾ-ಕೋರ್ 
ಮೆಮೊರಿ- 3 ಜಿಬಿ ರಾಮ್, 32 ಜಿಬಿ ಸಂಗ್ರಹಣೆ
ಬ್ಯಾಟರಿ- 6000 ಎಂಎಎಚ್ 
ಬೆಲೆ- ₹9,990

Image
Moto G31

ಮೋಟೋ ಜಿ 31

ಈ ಮೊಬೈಲ್‌ನಲ್ಲಿ 6.4 ಇಂಚಿನ ಪರದೆಯಿದೆ. ಜೊತೆಗೆ ಪಂಚ್ ಹೋಲ್ ಕ್ಯಾಮೆರಾ ಹಾಗೂ ಮೀಡಿಯಾ ಟೆಕ್ ಜಿ 85 ಪ್ರೊಸೆಸರ್ ಚಾಲ್ತಿಯಲ್ಲಿದೆ. ಕ್ಯಾಮೆರಾ ವಿಭಾಗಕ್ಕೆ ಬರುವುದಾದರೆ, ಜಿ 31 ಮೆಗಾಪಿಕ್ಸೆಲ್ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್ ಹಿಂಭಾಗದಲ್ಲಿ ಗೂಗಲ್ ಅಸಿಸ್ಟೆಂಟ್ ಬಟನ್ ಜೊತೆಗೆ ಜ್ಯಾಕ್ ಹೆಡ್‌ಪೋನ್‌ ಅಳವಡಿಸಲಾಗಿದೆ. ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಮತ್ತು ಮುಂಭಾಗದಲ್ಲಿ 13 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ ಹಾಗೂ ಬ್ಯಾಟರಿ 5000 ಎಂಎಎಚ್ ಹೊಂದಿದೆ.

ವೈಶಿಷ್ಟ್ಯಗಳು

ಪ್ರೊಸೆಸರ್ - ಮೆಡಿಟೆಕ್  ಜಿ85 ಆಕ್ಟಾ-ಕೋರ್ 
ಮೆಮೊರಿ - 4 ಜಿಬಿ ರಾಮ್, 64 ಜಿಬಿ ಸಂಗ್ರಹಣೆ
ಬ್ಯಾಟರಿ - 5000 ಎಂಎಎಚ್ 
ಪರದೆ - 6.4 ಇಂಚು, 409ಪಿಪಿಐ
ಹಿಂಬದಿಯ ಕ್ಯಾಮೆರಾ - 50 + 8 + 2 ಎಂ.ಪಿ ಟ್ರಿಪಲ್ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 13 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹12999

Image
INFINIX HOT 10S

ಇನ್ಫಿನಿಕ್ಸ್ ಹಾಟ್ 10 ಎಸ್

ಇನ್ಫಿನಿಕ್ಸ್ ಸ್ಮಾರ್ಟ್‌ಪೋನ್‌ 6.82 ಎಚ್‌ಡಿ ಅಲ್ಟ್ರಾ ಸ್ಮೂತ್ ಪರದೆ, ಸಿಪಿಯು, ಜಿಪಿಯು ಮತ್ತು ಮೆಮೊರಿಯ ಡೈನಾಮಿಕ್ ನಿರ್ವಹಣೆಗಾಗಿ ಹೈಪರ್ ಮೀಡಿಯಾಟೆಕ್ ಎಂಜಿನ್ ತಂತ್ರಜ್ಞಾನವನ್ನೂ ಬೆಂಬಲಿಸುತ್ತಿದೆ. ಇದು ಅಲ್ಟ್ರಾ ಶಕ್ತಿ ಹೊಂದಿರುವ ಜಿ 85 ಹೆಲಿಯೋ ಆಕ್ಟಾ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. 6,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಕಂಪನಿಯ ಪ್ರಕಾರ, ಇದರ ಬ್ಯಾಟರಿ ಅವಧಿಯನ್ನು 25 ಪ್ರತಿಶತದಷ್ಟು ವಿಸ್ತರಿಸುವ ಪವರ್ ತಂತ್ರಜ್ಞಾನದಿಂದ ಬೆಂಬಲಿತವಾಗಿದೆ ಎಂದು ತಿಳಿಸಿದೆ.

ವೈಶಿಷ್ಟ್ಯಗಳು

ಪ್ರೊಸೆಸರ್ - ಮೆಡಿಟೆಕ್  ಜಿ85 ಆಕ್ಟಾ ಕೋರ್ 
ಪರದೆ - 6.82 ಇಂಚು, 263 ಪಿಪಿಐ
ಮೆಮೊರಿ - 4 ಜಿಬಿ ರಾಮ್, 64 ಜಿಬಿ ಸಂಗ್ರಹಣೆ
ಬ್ಯಾಟರಿ - 6000 ಎಂಎಎಚ್ ಮತ್ತು ಯುಎಸ್‌ಬಿ ಪೋರ್ಟ್ 
ಹಿಂಬದಿಯ ಕ್ಯಾಮೆರಾ - 48 + 2 ಎಂಪಿ ಟ್ರಿಪಲ್ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 8 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹9999

Image
REDMI NOTE 10

ರೆಡ್‌ಮೀ ನೋಟ್ 10

ಆಕಸ್ಮಿಕ ಗೀರುಗಳು ಮತ್ತು ಹಾನಿಗಳನ್ನು ತಡೆಯಲು ಗೊರಿಲ್ಲಾ ಗ್ಲಾಸ್  ರಕ್ಷಣೆಯೊಂದಿಗೆ ಬರುತ್ತಿರುವ ಈ ಸ್ಮಾರ್ಟ್‌ಪೋನ್‌ 6.43 ಇಂಚಿನ ಪೂರ್ಣ ಎಚ್‌ಡಿ ಪರದೆಯ ಜೊತೆಗೆ 1800X2400 ಪಿಕ್ಸೆಲ್‌ಗಳನ್ನು ನೀಡಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 678 ಆಕ್ಟಾ ಕೋರ್ ಮತ್ತು ಜಿಪಿಯು 612 ಹಾಗೂ 6 ಜಿಬಿ ರಾಮ್ ಹೊಂದಿದೆ. ಈ ಸ್ಮಾರ್ಟ್‌ಪೋನ್‌ ಆಂಡ್ರಾಯ್ಡ್ 11ರಲ್ಲಿ ಕಾರ್ಯನಿರ್ವಹಿಸುತ್ತದೆ. 

ವೈಶಿಷ್ಟ್ಯಗಳು

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 678 ಆಕ್ಟಾ ಕೋರ್
ಪರದೆ - 6.43 ಇಂಚಿನ ಪೂರ್ಣ ಎಚ್‌ಡಿ, 398 ಪಿಪಿಐ
ಮೆಮೊರಿ - 4 ಜಿಬಿ ರಾಮ್, 64 ಜಿಬಿ ಸಂಗ್ರಹಣೆ
ಬ್ಯಾಟರಿ - 5000 ಎಂಎಎಚ್ ಮತ್ತು ಯುಎಸ್‌ಬಿ ಪೋರ್ಟ್
ಹಿಂಬದಿಯ ಕ್ಯಾಮೆರಾ - 48 + 8 + 2 + 2 ಎಂಪಿ ಟ್ರಿಪಲ್ ಕ್ಯಾಮೆರಾ 
ಮುಂಭಾಗದ ಕ್ಯಾಮೆರಾ - 13 ಎಂಪಿ ಜೊತೆಗೆ ವಿಡಿಯೋ ರೆಕಾರ್ಡಿಂಗ್
ಬೆಲೆ – ₹13999

ನಿಮಗೆ ಏನು ಅನ್ನಿಸ್ತು?
2 ವೋಟ್