
- ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಓಟಿಪಿ ಹಗರಣ ಬೆಳಕಿಗೆ ಬಂದಿದೆ
- ಓಟಿಪಿ ಕೊಡುವುದರಿಂದ ಮೊಬೈಲ್ ಹೈಜಾಕ್ ಆಗುವ ಸಾಧ್ಯತೆ ಇರುತ್ತದೆ
ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ವಾಟ್ಸಪ್ ಕೂಡ ಒಂದು ಮತ್ತು ಜನರು ಹೆಚ್ಚು ಬಳಸುವ ಅಪ್ಲಿಕೇಶನ್ ಆಗಿದೆ. ಭದ್ರತೆ ಬಗ್ಗೆಯೂ ವಾಟ್ಸಪ್ ಸಂಸ್ಥೆ ಒತ್ತು ನೀಡಿದೆ. ಆದರೂ ಕೆಲವು ನ್ಯೂನತೆಯನ್ನು ಗಮನಿಸಿ ಹ್ಯಾಕರ್ಗಳು ಬಳಕೆದಾರರ ಖಾಸಗಿ ಮಾಹಿತಿ ಕದಿಯಲು ಯತ್ನಿಸುತ್ತಿದ್ದಾರೆ.
ಹ್ಯಾಕರ್ಗಳಿಂದ ವಾಟ್ಸಪ್ ರಕ್ಷಿಸಲು ಇಲ್ಲಿದೆ ಉತ್ತಮ ಸಲಹೆ
ಡಬಲ್ ಫ್ಯಾಕ್ಟರ್ ಅಥೆಂಟಿಕೇಶನ್
ವಾಟ್ಸಪ್ ಬಳಕೆದಾರರು ತಮ್ಮ ಖಾತೆಯನ್ನು ಡಬಲ್ ಫ್ಯಾಕ್ಟರ್ ಅಥೆಂಟಿಕೇಶನ್ ಮೂಲಕ ಸುರಕ್ಷಿತವಾಗಿಸಬಹುದು. ಹೇಗೆಂದರೆ ಮೊದಲಿಗೆ ವಾಟ್ಸಪ್ ತೆರೆದು ಅಲ್ಲಿ ಕಾಣುವ ಮೂರು ರೇಖೆಗಳ ಮೇಲೆ ಕ್ಲಿಕ್ ಮಾಡಿ ನಂತರ ಸೆಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ಪ್ರವೇಶಿಸಿ. ಅದರಲ್ಲಿ, ಕಾಣುವ ಡಬಲ್ ಫ್ಯಾಕ್ಟರ್ ಅಥೆಂಟಿಕೇಶನ್ ಕ್ಲಿಕ್ ಮಾಡಿದ ತಕ್ಷಣ ಕೇಳುವ ಆರು ಡಿಜಿಟಲ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಇಮೇಲ್ಗೆ ಲಿಂಕ್ ಮಾಡಿ.
ಸಂದೇಶ ಕಳುಹಿಸಿದ ಬಳಿಕ ಅಳಿಸಿಬಿಡಿ
ವಾಟ್ಸಪ್ನಲ್ಲಿ ಒಂದಾದ ಫೀಚರ್ ʻಅಳಿಸಿಬಿಡುವ ಸಂದೇಶಗಳʼನ್ನು ಈಗಾಗಲೇ ಎರಡು ಕೋಟಿ ಜನರು ಬಳಸುತ್ತಿದ್ದಾರೆ. ಪ್ರತಿ ಚಾಟ್ಬಾಕ್ಸ್ನಲ್ಲಿ ಈ ಫೀಚರ್ ಕಾಣಬಹುದು. ದಿನದ ಅಂತ್ಯದಲ್ಲಿ ಎಲ್ಲ ಸಂದೇಶಗಳನ್ನು ಅಳಿಸಿಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಮಾಹಿತಿ ಯಾರ ಕೈಗೂ ಸಿಗುವುದಿಲ್ಲ ಮತ್ತು ಈ ಹಿಂದೆ ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಇನ್ಸ್ಟಾಗ್ರಾಂನಲ್ಲಿ ಡಿಜಿಟಲ್ ಎನ್ಎಫ್ಟಿ ಪ್ರಾರಂಭಿಸಲಿದ್ದೇವೆ: ಮಾರ್ಕ್ ಜುಕರ್ಬರ್ಗ್
ರಿಪೊರ್ಟ್ ಸ್ಪ್ಯಾಮ್
ವಾಟ್ಸಪ್ನಲ್ಲಿ ʻರಿಪೊರ್ಟ್ ಸ್ಪ್ಯಾಮ್ʼ ಫೀಚರ್ ಈಗಾಗಲೇ ಅಳವಡಿಸಲಾಗಿದೆ. ಇದರಿಂದ ನಿಮಗೆ ಗೊತ್ತಿಲ್ಲದ ಅಪರಿಚಿತರು ವಾಟ್ಸಪ್ ಕಾಲ್ ಮಾಡಿ ಅಥವಾ ಸಂದೇಶ ಕಳುಹಿಸಿ ಮೋಸ ಮಾಡಲು ಸಾಧ್ಯವಿಲ್ಲ. ನೀವೂ ಅಂತಹ ನಂಬರ್ನಿಂದ ಸಂದೇಶಗಳು ಬಂದಲ್ಲಿ ವರದಿ ಮಾಡಿ.
ಅನಿರೀಕ್ಷಿತ ಓಟಿಪಿ
ಇತ್ತೀಚಿನ ದಿನಗಳಲ್ಲಿ ಭಾರೀ ಓಟಿಪಿ ಹಗರಣವೊಂದು ಬೆಳಕಿಗೆ ಬಂದಿದೆ. ನಿಮಗೆ ತಿಳಿಯದ ನಂಬರ್ನಿಂದ ಕರೆ ಮಾಡಿ ಓಟಿಪಿ ಕೇಳುತ್ತಾರೆ. ಹೀಗೆ ಅವರು ಕೇಳುವ ಓಟಿಪಿ ಕೊಡುವುದರಿಂದ ನಿಮ್ಮ ವಾಟ್ಸಪ್ ಸೇರಿದಂತೆ ಮೊಬೈಲ್ ಕೂಡ ಹೈಜಾಕ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.
— Rahul Sasi (@fb1h2s) May 23, 2022
ಹ್ಯಾಕರ್ಗಳು ನಿಮಗೆ ಕರೆ ಮಾಡಿ ʻʻ**67*<10 ನಂಬರ್ ಅಥವಾ *405*<10” ನಂತಹ ನಂಬರ್ಗಳನ್ನು ಡಯಲ್ ಮಾಡಲು ಹೇಳುತ್ತಾರೆ ಹಾಗೇನಾದರು ಅವರ ಮಾತು ಕೇಳಿ ಈ ನಂಬರ್ಗಳಿಗೆ ಕರೆ ಮಾಡಿದರೆ ನಿಮ್ಮ ವಾಟ್ಸಪ್ ಲಾಗೌಟ್ ಮಾಡಿ ನಿಮ್ಮ ವಾಟ್ಸಪಿನ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯುತ್ತಾರೆ. ಆದ್ದರಿಂದ ಎಚ್ಚರವಹಿಸಿ ಎಂದು ಕ್ಲೌಡ್ ಡೆಸ್ಕ್ ಡಾಟ್ ಕಾಮ್ ಸಂಸ್ಥಾಪಕ ರಾಹುಲ್ ಸಸಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪರಿಶೀಲಿಸದ ವಾಟ್ಸಪನ್ನು ಬಳಸುವುದು ನಿಲ್ಲಿಸಿ
ಈಗಾಗಲೇ ಮಾರುಕಟ್ಟೆಯಲ್ಲಿ ಒಂದೇ ರೀತಿ ಹೊಲುವ ನಕಲಿ ಅಪ್ಲಿಕೇಶನ್ಗಳು ಹರಿದಾಡುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಅಂತಹ ಅಪ್ಲಿಕೇಶನ್ಗಳನ್ನು ಡೌನ್ಲೌಡ್ ಮಾಡಬೇಡಿ. ಹಾಗೇನಾದರು ಮಾಡಿದಲ್ಲಿ ನಿಮ್ಮ ವಾಟ್ಸಪ್ ಖಾತೆ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ವಾಟ್ಸಪ್ ಸುರಕ್ಷಿತವಾಗಿರಬೇಕೆ? ಹಾಗಿದ್ದರೆ ಈ ಮೇಲಿನ ಸಲಹೆಗಳನ್ನು ಈ ಕೂಡಲೆ ಪ್ರಯೋಗಿಸಿ.