ಭಾರತದ ಟೆಲಿಕಾಂ ವಲಯದಲ್ಲಿ ದೊಡ್ಡ ʻಜಿʼಗಿತ!

  • ಜಪಾನ್‌ನಲ್ಲಿ 1970ರ ಅಂತ್ಯದಲ್ಲಿ 1ಜಿ ಪ್ರಾರಂಭವಾಗಿತ್ತು
  • 5ಜಿ ಒಂದು ಮಿಲಿ ಸೆಕೆಂಡ್ ನಷ್ಟು ವೇಗವಾಗಿರುತ್ತದೆ

ಡಿಜಿಟಲ್ ಇಂಡಿಯಾ ಎಂದು ಬೀಗುವ ಭಾರತ ʻ5ಜಿʼ ತಂತ್ರಜ್ಞಾನ ಪ್ರಯೋಗಕ್ಕೆ ಚಾಲನೆ ನೀಡಿದೆ. ಅಂದಿನ ಟೆಲಿಕಾಂ ಜನರೇಶನ್‌ನಿಂದ ಪ್ರಸ್ತುತ ಜನರೇಶನ್‌ವರೆಗೆ ಬಾರಿ ಬದಲಾವಣೆ ಕಂಡಿದೆ. ಪ್ರತಿ ʻಜಿʼನಲ್ಲೂ ಅದರದ್ದೇ ಆದ ಬೆಳವಣಿಗೆ ಜೊತೆಗೆ ಟೆಲಿಕಾಂ ಸೇರಿ ದೊಡ್ಡ ಕಂಪನಿಗಳೂ ವಿಶ್ವದಾದ್ಯಂತ ಅನುಕೂಲ ಪಡೆದಿದೆ. ತಂತ್ರಜ್ಞಾನವೂ ಮಾನವನ ಜೊತೆ ಪರಸ್ಪರ ಸಂವಹನ ನಡೆಸಿ ಮುನ್ನಡೆ ತರಲು ಪ್ರಯತ್ನಿಸುತ್ತಿದೆ ಮತ್ತು ಪ್ರತಿ ʻಜಿʼನೊಂದಿಗೆ ಬದಲಾಗಿದೆ. 

1ಜಿ ಮತ್ತು 2ಜಿ ಪ್ರಾರಂಭವಾಗಿದ್ದು ಹೇಗೆ?
ಜಪಾನ್‌ನಲ್ಲಿ 1970ರ ದಶಕದ ಅಂತ್ಯದಲ್ಲಿ 1ಜಿ ಯನ್ನು ಪ್ರಾರಂಭಿಸಲಾಯಿತು. 1ಜಿ ಮೊಬೈಲ್ ದೂರವಾಣಿ ತಂತ್ರಜ್ಞಾನದ ಮೊದಲ ಧ್ವನಿ ಕರೆಗಳನ್ನು ಮಾತ್ರ ನೀಡುವ ಸಾಮರ್ಥ್ಯದ ಜೊತೆಗೆ ಕಡಿಮೆ ಗುಣಮಟ್ಟ ಮತ್ತು ಯಾವುದೇ ರೋಮಿಂಗ್ ಕರೆಗಳನ್ನು ಹೊಂದಿರಲಿಲ್ಲ.

Image
      1ಜಿ ತಂತ್ರಜ್ಞಾನ

ಆದರೆ, 1990ರಲ್ಲಿ 2ಜಿ ಬಂದ ಮೇಲೆ ಸಂಪೂರ್ಣ ಡಿಜಿಟಲ್ ಆಗಿ ಮಾರ್ಪಟ್ಟವು. ನಂತರ ʻಜಿ.ಎಸ್.ಎಮ್ʼ (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್) ಪರಿಚಯಿಸಿದ ಮೇಲೆ ರೋಮಿಂಗ್ ಕರೆಗಳು ಮತ್ತು ಡೇಟಾ ಸೇವೆಗಳನ್ನು 5೦ ಕೆ.ಬಿ.ಪಿ.ಎಸ್‌ನಲ್ಲಿ ಆರಂಭಿಸಲಾಯಿತು. ʻಎಸ್.ಎಂ.ಎಸ್ʼ ಮತ್ತು ʻಎಂ.ಎಂ.ಎಸ್ʼ ಮಾಡುವ ಜೊತೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸಬಹುದಾಗಿತ್ತು. ಅಷ್ಟೇ ಅಲ್ಲದೆ, ಭಾರತದ ಪ್ರತಿ ಮೂಲೆಗೂ ತಲುಪಿ ಹೆಚ್ಚು ಹೆಸರುವಾಸಿಯಾಗಿತ್ತು. ಅಂದಿನ ರಿಲಯನ್ಸ್ ಟೆಲಿಕಾಂ ಸಂಸ್ಥೆ ʼ2ಜಿ ಮುಕ್ತ ಭಾರತʼ ಎಂಬ ಗುರಿಯೊಂದಿಗೆ “300 ದಶಲಕ್ಷ ಚಂದಾದಾರರನ್ನು 3ಜಿ ತರುವ ಮೂಲಕ 2ಜಿಯಿಂದ ಮುಕ್ತಗೊಳಿಸಿತು”.

2001ರಲ್ಲಿ 3ಜಿ ಕ್ರಾಂತಿ
ಬಹಳ ದಶಕಗಳ ಬಳಿಕ 3ಜಿ ಪರಿಚಯಿಸಿದ ʻರಿಲಯನ್ಸ್' ಟೆಲಿಕಾಂ ವಲಯದಲ್ಲಿ ಭಾರೀ ಸದ್ದು ಮಾಡಿತು. ನಂತರದ ದಿನಗಳಲ್ಲಿ ʼ3ಜಿʼಯು ಮೊದಲಿಗಿಂತ ನಾಲ್ಕು ಪಟ್ಟು ಮೊಬೈಲ್ ಇಂಟರ್ನೆಟ್ ಅನುಕೂಲ ಮಾಡಿಕೊಟ್ಟಿತು.

Image

ಆ ಯುಗಕ್ಕೆ ಇ-ಮೇಲ್ಸ್, ನ್ಯಾವಿಗೇಷನಲ್ ನಕ್ಷೆಗಳು, ವೀಡಿಯೊ ಕಾಲಿಂಗ್, ವೆಬ್ ಬ್ರೌಸರ್ ಸೇರಿದಂತೆ ಹಲವು ಫೀಚರ್‌ಗಳನ್ನು ಪರಿಚಯಿಸಿತು. ಅದೇ ಸಮಯದಲ್ಲಿ ʻಸ್ಟೀವ್ ಜಾಬ್ಸ್ʼ 2008ರಲ್ಲಿ ಐಫೋನ್‌ಗೆ ಚಾಲನೆ ನೀಡಿ ದಶಕಗಳ ಕಾಲ ಬಾರಿ ಸದ್ದು ಮಾಡಿದ್ದರು.

ಈ ಸುದ್ದಿ ಓದಿದ್ದಿರಾ?  ಯಾವುದೇ ವೆಬ್‌ಸೈಟ್‌ಗೆ ಪ್ರವೇಶಿಸುವ ಮುನ್ನ ಇರಲಿ ಎಚ್ಚರ!

4ಜಿ ಪ್ರಪಂಚ ಶುರುವಾಗಿದ್ದು ಹೀಗೆ!
ಉತ್ತಮ ವೇಗ, ಸಾಮರ್ಥ್ಯ ಹಾಗೂ ಗುಣಮಟ್ಟ ನೀಡುವ ಮೂಲಕ 2010ರಲ್ಲಿ ಶುರುವಾದ 4ಜಿ, ವಿಶ್ವದಾದ್ಯಂತ 3ಜಿಗಿಂತ ಏಳು ಪಟ್ಟು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಇಲ್ಲಿಯವರೆಗೂ ಇದ್ದ ಎಲ್ಲ ಸಮಸ್ಯೆಗಳಿಗೂ ತ್ವರಿತ ಪ್ರತಿಕ್ರಿಯೆ ನೀಡಿತು.

ಮುಂದಿನ ದಿನಗಳಲ್ಲಿ ಬರಲಿದೆ 5ಜಿ 
ಮೊಬೈಲ್ ತಂತ್ರಜ್ಞಾನಕ್ಕೆ ಹೊಸ ತಿರುವು ನೀಡಲಿರುವ 5ಜಿ ಈಗಷ್ಟೇ ದೇಶದಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬರಲಿರುವ ʼ5ಜಿʼ ಒಂದು ಮಿಲಿ ಸೆಕೆಂಡ್‌ನಷ್ಟು ವೇಗವಾಗಿರುತ್ತದೆ. ಕಡಿಮೆ ವಿದ್ಯುತ್ ಅಗತ್ಯವನ್ನು ಹೊಂದಿರುತ್ತದೆ ಎಂದು ಮದ್ರಾಸ್ ತಂತ್ರಜ್ಞಾನ ಸಂಸ್ಥೆ ವರದಿ ಮಾಡಿದೆ.

ಇಂಟರ್ನೆಟ್ ವೇಗ, ಸ್ವಯಂ ಚಾಲಿತ ಕಾರುಗಳು ಮತ್ತು ರೊಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಹೊಂದಿರುತ್ತದೆ. ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ 5ಜಿ ಬರಲಿವೆ. ಭಾರತದಲ್ಲಿ 5ಜಿ ಟೆಸ್ಟ್‌ಬೆಡ್‌ 220 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿದೇಶದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. 

ಇನ್ನೊಂದು ದಶಕದಲ್ಲಿ 6ಜಿ ನಿರೀಕ್ಷೆ
ಸದ್ಯಕ್ಕೆ ನಿರೀಕ್ಷೆಯಲ್ಲಿರುವ 6ಜಿ ಮುಂದಿನ ಒಂದು ದಶಕದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಆದರೆ 6ಜಿ ಬರೀ ಮೊಬೈಲ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ ಮುಂದಿನ ಪೀಳಿಗೆಗೆ ಯಾವುದೇ ವಿಳಂಬವಿಲ್ಲದೆ ಇಂಟರ್ನೆಟ್ ಕಾರ್ಯಾಚರಣೆ ಮಾಡಲಿದೆ ಹಾಗೂ ಅತಿ ವೇಗದ ತಂತ್ರಜ್ಞಾನದ ಜೊತೆಗೆ ತಲ್ಲೀನಗೊಳಿಸುವ ವಿಸ್ತೃತ ರಿಯಾಲಿಟಿ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
11 ವೋಟ್