ಭಾರತದಲ್ಲಿ ಐಫೋನ್ ಒಳಗೊಂಡಂತೆ ಎಲ್ಲ ಸ್ಮಾರ್ಟ್‌ಪೋನ್‌ಗಳಿಗೂ ಒಂದೇ ಚಾರ್ಜರ್ 

Type - C Charger Image
  • ಭಾರತದಲ್ಲಿ ಈ ನೀತಿ 2024ರಿಂದ ಕಾರ್ಯಚರಣೆಯಾಗಲು ಆರಂಭ
  • ಎಲ್ಲ ಸ್ಮಾರ್ಟ್‌ಫೋನ್‌ಗಳಿಗೂ ಟೈಪ್ - ಸಿ ಕಡ್ಡಾಯ: ಕೇಂದ್ರ ಸೂಚನೆ

ಯೂರೋಪ್ ಮಾದರಿಯನ್ನು ಅಳವಡಿಸಲು ಮುಂದಾದ ಭಾರತ, ಇನ್ನು ಮುಂದೆ ಸಿಗಲಿರುವ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೂ ಟೈಪ್ - ಸಿ ಚಾರ್ಜರ್ ಕಡ್ಡಾಯ ಎಂದು ಎಲ್ಲ ದೊಡ್ಡ ಟೆಕ್ ಕಂಪನಿಗಳಿಗೆ ಗುರುವಾರ (ಆಗಸ್ಟ್‌ 11) ಕೇಂದ್ರ ಸೂಚನೆ ಹೊರಡಿಸಿದೆ.  

ಈ ಮಾದರಿಯನ್ನು ಈಗಾಗಲೇ ಯೂರೊಪ್ ದೇಶದಲ್ಲಿ ಜಾರಿ ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಕೂಡ ಆಗಸ್ಟ್ 17 ರಂದು ಇದಕ್ಕೆ ಸಂಬಂಧಿಸಿದ ಸಾಧ್ಯತೆಗಳನ್ನು ಚರ್ಚಿಸಲು ಕೇಂದ್ರ ಸರ್ಕಾರ ಸಭೆಯನ್ನು ಕರೆದಿದೆ. ಭಾರತದಲ್ಲಿ ಬಹು ಚಾರ್ಜರ್‌ಗಳ ಬಳಕೆಯನ್ನು ಕೊನೆಗೊಳಿಸುವ ಮತ್ತು ಇ-ತ್ಯಾಜ್ಯವನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದರ ಬಗ್ಗೆ ಎಲ್ಲ ಸ್ಮಾರ್ಟ್‌ಫೋನ್‌ ಕಂಪನಿಗಳ ಮುಖ್ಯಸ್ಥರ ಜತೆ ಚರ್ಚೆ ಮಾಡಲಾಗುವುದು ಎಂದು ಮಾಹಿತಿ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

"ಕಂಪನಿಗಳು ಯುರೋಪ್ ಮತ್ತು ಅಮೆರಿಕದಲ್ಲಿ ಸೇವೆ ಸಲ್ಲಿಸಬಹುದಾದರೆ, ಭಾರತದಲ್ಲಿ ಅದನ್ನು ಏಕೆ ಮಾಡಬಾರದು? ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಸಾಮಾನ್ಯ ಚಾರ್ಜರ್ ಅನ್ನು ಹೊಂದಿರಬೇಕು" ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. 

ಪ್ರಸ್ತುತ, ಐಓಎಸ್, ಆಂಡ್ರಾಯ್ಡ್ ಮತ್ತು ಟ್ಯಾಬ್ಲೆಟ್ ಸ್ಮಾರ್ಟ್‌ಫೋನ್‌ಗಳಿಗೆ ಅದರದೇ ಆದ ಚಾರ್ಜರ್ ಆಳವಡಿಸಲಾಗಿದೆ, ಹಾಗೇನಾದರೂ ಮುಂದಿನ ದಿನಗಳಲ್ಲಿ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೂ ಒಂದೇ ಚಾರ್ಜರ್ ಮಾಡುವುದರಿಂದ ಬಳಕೆದಾರರು ಪ್ರತ್ಯೇಕ ಚಾರ್ಜರ್ ಖರೀದಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ವರದಿ ಹೇಳಿದೆ. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಸಿಗುವ ಎರಡು ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು 

ಆದಾಗ್ಯೂ, ಯುಎಸ್‌ಬಿ - ಸಿ ಹೊಂದಿರುವ ಐಫೋನ್‌ಗಳಲ್ಲಿ ಆಪಲ್ ಈಗಾಗಲೇ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಆದರೆ ಮುಂದಿನ ವರ್ಷದಲ್ಲಿ ಬರಲಿರುವ ಐಫೋನ್‌ 15ನಲ್ಲಿ ʻಲೈಟನಿಂಗ್ ಪೋರ್ಟ್ʼ ಅಳವಡಿಸಲಾಗುವುದು ಎಂದು ಆಪಲ್ ಕಂಪನಿ ತಿಳಿಸಿದೆ. ಭಾರತದಲ್ಲಿ ಈ ನೀತಿ 2024ರಿಂದ ಕಾರ್ಯ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್