ಎಂಟು ಯೂಟ್ಯೂಬ್ ಖಾತೆಯನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

Youtube banned Image
  •  85 ಲಕ್ಷ ಬಳಕೆದಾರರನ್ನು ಹೊಂದಿದ ಯೂಟ್ಯೂಬ್ ಖಾತೆ ನಿರ್ಬಂಧ
  • ನ್ಯೂಸ್ ಚಾನೆಲ್‌ ಲೋಗೊ ಬಳಸಿ ತಪ್ಪು ದಾರಿಗೆಳೆಯುವ ಪ್ರಯತ್ನ

ದೇಶದಲ್ಲಿ ನಡೆಯುತ್ತಿರುವ ಹಲವು ವಿವಾದಗಳಿಗೆ ಸಂಬಂಧಿಸಿದಂತೆ ಕೆಲವು ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಯೂಟ್ಯೂಬ್ ಖಾತೆಗಳನ್ನು ನಿಷೇಧಿಸಿದೆ.

ಮಾಹಿತಿ ಸಚಿವಾಲಯ ತುರ್ತು ಅಧಿಕಾರ ಬಳಸುವ ಮೂಲಕ ಐಟಿ ಕಾಯ್ದೆ 2021ರ ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳನ್ನು ತಡೆಯಲು ಕೆಲವು ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಖಾತೆಯನ್ನು ನಿರ್ಬಂಧಿಸಿದೆ.  

ನಿಷೇಧಿತ ಜಾಲತಾಣಗಳ ಪೈಕಿ ಒಂದು ಫೇಸ್‌ಬುಕ್‌ ಖಾತೆ, ಎರಡು ಫೇಸ್‌ಬುಕ್‌ ಪೋಸ್ಟ್ ಮತ್ತು ಒಟ್ಟು 114 ಕೋಟಿ ವೀಕ್ಷಕರ ಜತೆಗೆ 85 ಲಕ್ಷ ಬಳಕೆದಾರರನ್ನು ಹೊಂದಿದ ಯೂಟ್ಯೂಬ್ ಚಾನೆಲ್ ಕೂಡ ಒಳಗೊಂಡಿದೆ. ಅಷ್ಟೇ ಅಲ್ಲದೆ, ಮಾಹಿತಿ ಪ್ರಕಾರ ಒಂದೆರಡು ಖಾತೆಗಳು ಪಾಕಿಸ್ತಾನ್‌ನಿಂದ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಲಾಗಿದೆ. 

ಯೂಟ್ಯೂಬ್ ಖಾತೆಯಲ್ಲಿ ಗಣೇಶ ಹಬ್ಬ ಆಚರಣೆಯನ್ನು ತಡೆಯುವುದು, ಧರ್ಮ ಯುದ್ಧಕ್ಕೆ ಕರೆ ನೀಡುವ ಹಲವು ರಾಷ್ಟ್ರ ವಿರೋಧಿ ಕೆಲಸಗಳನ್ನು ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ಭಾರತದಲ್ಲಿ ಕೆಲವು ನಕಲಿ ಯೂಟ್ಯೂಬ್ ಚಾನೆಲ್‌ಗಳು, ಸಂವೇದನಾಶೀಲ ಥಂಬ್‌ನೇಲ್‌ಗಳು, ಸುದ್ದಿ ನಿರೂಪಕರ ಚಿತ್ರಗಳು ಮತ್ತು ಕೆಲವು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊಗಳನ್ನು ಬಳಸಿ ವೀಕ್ಷಕರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ಈ ಯೂಟ್ಯೂಬ್ ಖಾತೆಗಳು ಮಾಡುತ್ತಿವೆ ಎಂದು ಹೇಳಲಾಗಿದೆ. 

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಅತೀ ಕಡಿಮೆ ದರದಲ್ಲಿ ಒಪ್ಪೋ ಸ್ಮಾರ್ಟ್‌ ಟಿವಿ ಬಿಡುಗಡೆ?

ಕಳೆದ ತಿಂಗಳು ಜುಲೈನಲ್ಲಿ, ಮಾಹಿತಿ ಸಚಿವಾಲಯವು 2021-22ರ ಅವಧಿಯಲ್ಲಿ 94 ಯೂಟ್ಯೂಬ್ ಚಾನೆಲ್‌ಗಳು, 19 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 747 ʻಯೂನಿಫಾರ್ಮ್ ರಿಸೋರ್ಸ್ ಲೊಕೇಟರ್‌ಗಳನ್ನು (ಯುಆರ್‌ಎಲ್) ನಕಲಿ ಸುದ್ದಿಗಳನ್ನು ಹರಡುವುದಕ್ಕಾಗಿ ನಿರ್ಬಂಧಿಸಿತ್ತು ಎಂದು ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app