86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ʻಸಾಹಿತ್ಯ ಪರಿಷತ್ʼ ಆ್ಯಪ್

Sahitya Parishat App Image
  • 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ
  • ಈ ಅಪ್ಲಿಕೇಶನ್ ಪ್ರಪಂಚದ ಎಲ್ಲ ಕನ್ನಡ ಓದುಗರಿಗೂ ಸಿಗಲಿದೆ

ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಒಲವು ಹೆಚ್ಚಿಸಲು ʻಸಾಹಿತ್ಯ ಪರಿಷತ್ʼ ಆ್ಯಪ್‌ಗೆ ರಾಜ್ಯಸರ್ಕಾರ ಚಾಲನೆ ನೀಡಿದೆ. 

ಹಲವು ವಿಶೇಷ ಫೀಚರ್‌ಗಳನ್ನು ಹೊಂದಿರುವ ಈ ಆ್ಯಪ್, ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಕನ್ನಡ ಓದುಗರು ಆನ್‌ಲೈನ್‌ ಮೂಲಕ ಸಾಹಿತ್ಯ ಓದಲು ಈ ಅನುವು ಮಾಡಿಕೊಡಲಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಆ್ಯಪ್‌ಗೆ ಈಗಾಗಲೇ 600ಕ್ಕೂ ಅಧಿಕ ಬಳಕೆದಾರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ. 

ಪ್ರಸ್ತುತ ಇದಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮುಂದಿನ ಐದು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ನೋಂದಣಿಯನ್ನು ಈ ಆ್ಯಪ್ ಪಡೆಯುವ ನಿರೀಕ್ಷೆಯಿದೆ. ನೋಂದಣಿ ಆದವರಿಗೆ ಸಾಹಿತ್ಯ ಪರಿಷತ್‌ನ ಸದಸ್ಯರಾಗುವ ಶುಲ್ಕವನ್ನು ₹500ರಿಂದ ₹250ಕ್ಕೆ ಕಡಿತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆ್ಯಪ್‌ ನೋಂದಣಿಯಲ್ಲಿನ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಲವರು ವಿವರ ನೀಡಿದರು. ಇನ್ನು ಕೆಲವರು ವ್ಯಾಕರಣ ದೋಷಗಳನ್ನು ಎತ್ತಿ ತೋರಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಜೋಶಿ, "ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು" ಎಂದು ಹೇಳಿದರು.

Image
Sahitya Parishat App Image

''ಇದಕ್ಕೆ ಮೊದಲು ವಾರ್ಷಿಕ ಸದಸ್ಯತ್ವ ಪಡೆಯುವ ಆಸಕ್ತರು ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಬೇಕಾಗಿತ್ತು. ಆದರೆ ಈಗ ಮನೆಯಲ್ಲಿ ಕುಳಿತು ಮೊಬೈಲ್ ಆ್ಯಪ್‌ ಮೂಲಕವೂ ಮಾಡಬಹುದು. ನೋಂದಣಿಯಾದ ಕೂಡಲೇ ಸದಸ್ಯರಿಗೆ ಸಾಫ್ಟ್ ಪ್ರತಿ ಮತ್ತು ಸ್ಮಾರ್ಟ್ ಐಡಿ ಕಾರ್ಡ್, ನೋಂದಣಿಯಾದ 45 ದಿನಗಳೊಳಗೆ ಭೌತಿಕ ಕಾರ್ಡ್ ಅನ್ನು ಸದಸ್ಯರಿಗೆ ಕಳುಹಿಸಿಕೊಡಲಾಗುವುದು" ಎಂದು ಜೋಶಿ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ವಾರದ ಟೆಕ್ ನೋಟ | ಲೈವ್ ಶಾಪಿಂಗ್ ವೈಶಿಷ್ಟ್ಯ ಸ್ಥಗಿತಗೊಳಿಸಿದ ಫೇಸ್‌ಬುಕ್‌

ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ ಸದಸ್ಯತ್ವ ನವೀಕರಣಕ್ಕೂ ಅವಕಾಶ ಕಲ್ಪಿಸುತ್ತದೆ ಮತ್ತು ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಸಿಗಲಿದೆ ಹಾಗೂ ಈ ವರ್ಷ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನವೆಂಬರ್ 11ರಿಂದ 13ರವರೆಗೆ ನಡೆಯಲಿದೆ ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್