ವಾಟ್ಸಪ್‌ನಲ್ಲಿ ಈಗ ಡಿಜಿಲಾಕರ್ ಸೇವೆಗಳು ಲಭ್ಯ; ಬಳಸುವಾಗ ಎಚ್ಚರ

Whatsapp Feature Digilocker Image
  • ಡಿಜಿಲಾಕರನ್ನು ವಾಟ್ಸಪ್ ಮೂಲಕ ಕೂಡ ಬಳಸಬಹುದು
  • ಈಗಾಗಲೇ ನೂರು ದಶಲಕ್ಷ ಜನರು ನೋಂದಾಯಿಸಿದ್ದಾರೆ

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಜನರ ಪ್ರಮುಖ ದಾಖಲೆಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಡಿಜಿಲಾಕರ್‌ ಅನ್ನು ವಾಟ್ಸಪ್ ಮೂಲಕ ʻಮೈಗೊವ್ʼ ಸಹಾಯವಾಣಿ ಸಂಸ್ಥೆ ಪರಿಚಯಿಸಿದೆ.

ಮೈಗೊವ್ ಸಹಾಯವಾಣಿಯ ಮೂಲಕ ಈಗ ಜನಸಾಮಾನ್ಯರು ಡಿಜಿಲಾಕರ್ ಬಳಸಿ ವಾಟ್ಸಪ್‌ನಲ್ಲಿ ಅವರ ದಾಖಲೆಗಳಾದ ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಅನೇಕ ದಾಖಲೆಗಳನ್ನು ನೀಡಬಹುದು ಹಾಗೂ ಎಲ್ಲವೂ ಸುರಕ್ಷಿತವಾಗಿರುತ್ತದೆ ಎಂದು ಮೈಗೊವ್ ಸಂಸ್ಥೆ ಸೋಮವಾರ ವರದಿ ಮಾಡಿದೆ.

ಡಿಜಿಲಾಕರ್ ಎಂದರೆ ಏನು?

ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ತಯಾರಾದ ಮೊಬೈಲ್ ಅಪ್ಲಿಕೇಶನ್ ಇದಾಗಿದ್ದು, ಜನರ ಎಲ್ಲ ದಾಖಲೆಗಳನ್ನು ರಕ್ಷಿಸುವ ಕೆಲಸ ಮಾಡುವುದು ಅಪ್ಲಿಕೇಶನ್ ವೈಶಿಷ್ಟ್ಯವಾಗಿದೆ. ಡಿಜಿಲಾಕರ್‌ನಲ್ಲಿ ನೀಡುವ ಎಲ್ಲ ದಾಖಲೆಗಳನ್ನು 9ಎ ನಿಯಮದ ಪ್ರಕಾರ ಮಾಹಿತಿಗಳನ್ನು ಮಧ್ಯವರ್ತಿಗಳಿಂದ ಸಂರಕ್ಷಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ನಕಲಿ ಗ್ರಾಹಕರ ಬಲೆಗೆ ಬಿದ್ದ ʻರೇಜರ್ ಪೇʼ

“ಮೈಗೊವ್ ಮೂಲಕ ಜನರಿಗೆ ಸೇವೆ ನೀಡುವುದು ಒಂದು ಪ್ರಗತಿಯ ವಿಷಯ. ಜೊತೆಗೆ ವಾಟ್ಸಪ್‌ನಂತಹ ವೇದಿಕೆಯಿಂದ ಜನರ ಮಾಹಿತಿ ಪಡೆಯುವುದು ಸುಲಭವಾದ ದಾರಿ. ಸುಮಾರು ನೂರು ದಶಲಕ್ಷ ಜನರು ಈಗಾಗಲೇ ಡಿಜಿಲಾಕರ್‌ನಲ್ಲಿ ನೋಂದಾಯಿಸಿದ್ದಾರೆ ಮತ್ತು ಈವರೆಗೆ ಐದು ಕೋಟಿಗೂ ಅಧಿಕ ಮಂದಿ ತಮ್ಮ ದಾಖಲೆಗಳನ್ನು ನೀಡಿದ್ದಾರೆ. ವಾಟ್ಸಪ್‌ನಲ್ಲಿ ದಾಖಲೆಯ ಮಾಹಿತಿ ಪಡೆಯುವ ಮೂಲಕ ಲಕ್ಷಾಂತರ ಜನರನ್ನು ಡಿಜಿಟಲ್‌ಗೆ ಕರೆತಂದು ವಿಶ್ವಾಸಾರ್ಹವಾಗಿದ್ದೇವೆ” ಎಂದು ಮೈಗೊವ್ ಸಂಸ್ಥೆಯ ಸಿಇಒ ಅಭಿಷೇಕ್ ಸಿಂಗ್ ಹೇಳಿದ್ದಾರೆ. 

ಡಿಜಿಲಾಕರ್  ಸೇವೆಗಳನ್ನು ಪಡೆಯುವುದು ಹೇಗೆ?

ಮೊದಲಿಗೆ +91 9013151515 ನಂಬರ್‌ನ್ನು ನಿಮ್ಮ ಮೊಬೈಲ್‌ನಲ್ಲಿ ನೋಂದಾಯಿಸಿ ನಂತರ ವಾಟ್ಸಪ್‌ಗೆ ಪ್ರವೇಶಿಸಿ ಆ ನಂಬರ್‌ಗೆ ʻನಮಸ್ತೆʼ, ʻಡಿಜಿಲಾಕರ್ʼ ಅಥವಾ ʻಹಾಯ್ʼ ಎಂದು ಕಳುಹಿಸುವ ಮೂಲಕ ಚಾಟ್‌ಬಾಟ್‌ನ್ನು ಸಕ್ರಿಯಗೊಳಿಸಿ.
ನೀವು ಡಿಜಿಲಾಕರ್ ಖಾತೆ ಹೊಂದಿದ್ದೀರಾ ಎಂದು ಕೇಳಿದಾಗ ʻಹೌದುʼ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಚಾಟ್‌ಬಾಟ್‌ ಕೇಳುವ ನಿಮ್ಮ 12 ಅಂಕಿಯ ಆಧಾರ್ ಅಂಖ್ಯೆಯನ್ನು ಅಲ್ಲಿ ನಮೂದಿಸಿದ ಬಳಿಕ ವಾಟ್ಸಪ್ ಸೇವೆಗಳನ್ನು ನಿಮ್ಮ ಡಿಜಿಲಾಕರ್ ಖಾತೆಯ ಜೊತೆ ಲಿಂಕ್ ಮಾಡಿ ಮತ್ತು ದೃಢೀಕರಿಸಿ.

ಹೀಗೆ ಮಾಡುವ ಮೂಲಕ ನಿಮ್ಮ ಎಲ್ಲ ದಾಖಲೆಗಳನ್ನು ಚಾಟ್‌ಬಾಟ್‌ನಲ್ಲಿ ಸಲ್ಲಿಸಬಹುದು. ಆದರೆ, ಖಾಸಗಿ ಕಂಪನಿಗಳಿಗೆ ನಿಮ್ಮ ದಾಖಲೆಗಳನ್ನು ನೀಡುವುದು ಎಷ್ಟು ಸರಿ ಎಂದು ಒಮ್ಮೆ ಯೋಚಿಸಿ.

ನಿಮಗೆ ಏನು ಅನ್ನಿಸ್ತು?
1 ವೋಟ್