ಡಿಜಿಟಲ್ ಮನೆ ಮಾರಾಟಕ್ಕಿದೆ; ಖರೀದಿಸಿದವರು ಕರೋಡ್‌ಪತಿ

Metaverse Real Estate
  • ಮೆಟಾವರ್ಸ್ ಎಂಬ ಕಾಲ್ಪನಿಕ ಜಾಗಕ್ಕೆ ಬೇಡಿಕೆ
  • ಜನವರಿಯಲ್ಲಿ ₹8.5 ಕೋಟಿಯಷ್ಟು ವಹಿವಾಟು

ಪ್ರತಿಯೊಬ್ಬರಿಗೂ ಮನೆ ಕಟ್ಟಿಸುವ ಆಸೆ ಇರುವುದು ಸಹಜ. ಆದರೆ, ಈಗಿನ ಪೀಳಿಗೆಯ ಜನರಿಗೆ ಮೆಟಾವರ್ಸ್‌ನಲ್ಲಿ ಮನೆ ಕಟ್ಟಿಸಬೇಕು, ಅಲ್ಲಿ ಜಾಗ ಖರೀದಿಸಬೇಕು ಎಂಬುದು ಕನಸಾಗಿದೆ. 

ಯಾರೂ ಊಹಿಸದ ಪರಿಕಲ್ಪನೆಯ ಸಾಮ್ರಾಜ್ಯವನ್ನು ಮೆಟಾವರ್ಸ್ ನಿರ್ಮಾಣ ಮಾಡಿದೆ. ಅವು ಡಿಜಿಟಲ್ ರಿಯಲ್ ಎಸ್ಟೇಟ್‌ಗಳಾಗಿ ಮಾರಾಟವಾಗಲಿವೆ. ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಮೆಟಾವರ್ಸ್‌ನಲ್ಲಿರುವ ಜಾಗಗಳನ್ನು ಖರೀದಿಸಿ ಅದರಲ್ಲಿ ಕೋಟ್ಯಂತರ ಹಣ ಹೂಡಿದ್ದಾರೆ, ಇತ್ತೀಚೆಗೆ ಅಮೆರಿಕದ ಹೆಸರಾಂತ ಪಾಪ್ ಸಂಗೀತಗಾರ ಸ್ನೂಪ್ ಡಾಗ್ ಅವರು ಮೆಟಾವರ್ಸ್‌ನಲ್ಲಿ ಖರೀಸಿದ ಜಾಗದ ಒಂದು ಭಾಗವನ್ನು ಮಾರಾಟಕ್ಕಿಟ್ಟಿದ್ದಾರೆ. ಆ ಜಾಗದ ಬೆಲೆ ₹3.45 ಕೋಟಿ. ವಾಸ್ತವದಲ್ಲಿ ಅದು ಜಾಗವೇ ಇಲ್ಲ, ಮೆಟಾವರ್ಸ್ ಎಂಬುದು ಒಂದು ಕಾಲ್ಪನಿಕ ಜಾಗ ಅಷ್ಟೇ. ಆದರೆ ಆ ಜಾಗದ ಬೆಲೆಯೂ ಗಗನಕ್ಕೇರಿದೆ. ಅಂದಾಜಿನ ಪ್ರಕಾರ, ಕಳೆದ ಜನವರಿಯಲ್ಲಿ ಶುರುವಾದ ಮೆಟಾವರ್ಸ್ ಎಸ್ಟೇಟ್‌ಗಳು ಒಂದೇ ತಿಂಗಳಿನಲ್ಲಿ ₹8.5 ಕೋಟಿಯಷ್ಟು ವಹಿವಾಟು ಮಾಡಿವೆ. 

ಏನಿದು ಡಿಜಿಟಲ್ ಎಸ್ಟೇಟ್?

ಇದೊಂದು ಕಾಲ್ಪನಿಕ ಜಾಗ, ಇಲ್ಲಿ ನೀವು ಮನೆ, ಮ್ಯೂಸಿಯಂ ಕಟ್ಟಿಸಬಹುದು. ಹೀಗೆ ಅನೇಕ ಕಟ್ಟಡಗಳನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ನಿರ್ಮಿಸಬಹುದು. ಇದಕ್ಕಾಗಿಯೇ ಹಲವಾರು ಡಿಜಿಟಲ್ ರಿಯಲ್ ಎಸ್ಟೇಟ್ ಕಂಪನಿಗಳು ಆರಂಭವಾಗಿವೆ. ಸ್ಯಾಂಡ್‌ಬಾಕ್ಸ್‌ ಮತ್ತು ಕ್ರಿಪ್ಟೋವಾಕ್ಸೆಲ್ಸ್ ಎಂಬ ಎರಡು ಡಿಜಿಟಲ್ ಎಸ್ಟೇಟ್ ವಹಿವಾಟು ಮಾಡುವ ಪ್ರಮುಖ ಕಂಪನಿಗಳಾಗಿವೆ.

ಇವರು ₹2.68 ಕೋಟಿಯಷ್ಟು ಪಿಕ್ಸೆಲ್ ಜಾಗವನ್ನು ಮೆಟಾವರ್ಸ್‌ನಲ್ಲಿ ಹೊಂದಿದ್ದಾರೆ. ಯಾರಾದರೂ ಡಿಜಿಟಲ್ ಜಾಗ ಖರೀದಿಸುವ ಆಸಕ್ತಿ ಹೊಂದಿದ್ದರೆ, ಈ ಕಂಪನಿಗಳಿಗೆ ಹಣ ಕೊಟ್ಟು ಎನ್ಎಫ್‌ಟಿ ಖರೀದಿ ಮಾಡಿಕೊಳ್ಳಬೇಕು. ನಂತರ ಇಷ್ಟವಾದ ಜಾಗ ಖರೀದಿಸಬಹುದು. ಆದರೆ ಎಲ್ಲಿ ಖರೀದಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಜಾಗತಿಕ ತಂತ್ರಜ್ಞಾನಕ್ಕೆ ಭಾರಿ ಹೊಡೆತ; ನೌಕರರ ಪಾಲಿನ ಸುವರ್ಣ ಕಾಲ ಅಂತ್ಯ

ಡಿಜಿಟಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಹಣ ಎಷ್ಟು ಬೇಕು?

ನೀವು ಕ್ರಿಪ್ಟೋವಾಕ್ಸೆಲ್ಸ್ ಕಂಪನಿಯ ಸದಸ್ಯರಾಗಿದ್ದರೆ ಅಥವಾ ಅದರಲ್ಲಿ ಹೂಡಿಕೆ ಮಾಡಿದರೆ ಮೆಟಾವರ್ಸ್‌ನಲ್ಲಿ ಓಪನ್‌ಸೀ ಮೂಲಕ ಜಾಗ ಖರೀದಿಸಬಹುದು ಇದರ ಮೊತ್ತ ₹6 ಲಕ್ಷದಿಂದ ಶುರುವಾಗಲಿದೆ. ಆದರೆ ಇತ್ತೀಚಿನ ದಿನದಲ್ಲಿ ಡಿಜಿಟಲ್ ಮನೆ ಮತ್ತು ಎಸ್ಟೇಟ್ ಖರೀದಿ ಮಾಡುವವರ ಸಂಖ್ಯೆ ಕೂಡ ನಿಧಾನವಾಗಿ ಹೆಚ್ಚುತ್ತಿದೆ.

ಡಿಸೆಂಟ್ರಲ್ಯಾಂಡ್ ಮೂಲಕ ಮೆಟಾದಲ್ಲಿ ನಮ್ಮ ಇಷ್ಟವಾದ ಮನೆ ಸ್ಥಾಪಿಸಬಹುದು, ಹೀಗಾಗಿ, ವರ್ಚುವಲ್‌ನಲ್ಲಿ ಒಂದು ಮಾಲ್‌ಗೆ, ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೆಚ್ಚು ಮೌಲ್ಯವಿದೆ. ಮುಂದಿನ ದಿನಗಳಲ್ಲಿ ಮೆಟಾವರ್ಸ್‌ ಮೌಲ್ಯ ಇನ್ನಷ್ಟು ಹೆಚ್ಚಲಿದೆ ಎಂದು ಮೆಟಾ ಸಂಸ್ಥೆ ಅಂದಾಜಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್