ನಿಮಗಿದು ಗೊತ್ತೆ | ಆಗಸದಲ್ಲಿ ಕಾಣುವ ಕಾಮನಬಿಲ್ಲು ದುಂಡಗಿದೆ!

Rainbow Image

ಆಕಾಶದಲ್ಲಿ ಕಾಣುವ ಕಾಮನಬಿಲ್ಲು ಎಲ್ಲರೂ ನೋಡಿಯೇ ಇರ್ತಾರೆ. ಆದರೆ ಹಲವರು ವರ್ಷಗಳಿಂದ ನೋಡಿ ತಿಳಿದುಕೊಂಡಂತೆ ಕಾಮನಬಿಲ್ಲು ಅರ್ಧಚಂದ್ರಾಕೃತಿಯಲ್ಲಿರದೆ, ದುಂಡಗಿದೆ ಎಂದರೆ ನೀವು ನಂಬುತ್ತೀರ?

ಹೌದು, ನೀವು ನಂಬಲೇ ಬೇಕು. ಯಾಕೆಂದರೆ, ಇಷ್ಟು ದಿನ ಬಿಲ್ಲಿನ ರೀತಿ ಕಾಣುತ್ತಿದ್ದು 'ಇಂದ್ರ ಧನುಷ್' ಎಂದು ಹೆಸರು ಪಡೆದಿದ್ದ ಕಾಮನಬಿಲ್ಲು ವಾಸ್ತವದಲ್ಲಿ ಸಂಪೂರ್ಣವಾಗಿ ವೃತ್ತಾಕಾರದಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗುತ್ತಿವೆ.

ಹಾಗಾದರೆ ನಮಗೆ ಅರ್ಧ ಕಮಾನು ಮಾತ್ರ ಏಕೆ ಕಾಣುತ್ತದೆ?

ಏಕೆಂದರೆ, ನಾವು ನೋಡುವ ರೀತಿ ಅಥವಾ ಸ್ಥಳ ಸರಿಯಾದ ಎತ್ತರದಲ್ಲಿ ಇರುವುದಿಲ್ಲ ಮತ್ತು ನಾವು ನೆಲದ ಮಟ್ಟದಲ್ಲಿ ನಿಂತು ಕಾಮನಬಿಲ್ಲನ್ನು ನೋಡುವುರಿಂದ ನಮಗೆ ಅರ್ಧ ಕಾಮನಬಿಲ್ಲು ಮಾತ್ರ ಗೋಚರಿಸುತ್ತದೆ. ಉಳಿದ ಅರ್ಧ ಭಾಗವನ್ನು ನೋಡಲು ಸಾಧ್ಯವಾಗುವುದಿಲ್ಲ. ನಾವು ವೃತ್ತಾಕಾರದ ಕಾಮನಬಿಲ್ಲನ್ನು ಕಾಣಬೇಕಾದರೆ ಎತ್ತರವಾದ ಪ್ರದೇಶದಿಂದ ನೋಡಬೇಕು. ಅಂದರೆ ಎತ್ತರವಾದ ಕಟ್ಟಡ, ಬೆಟ್ಟಗಳ ಮೇಲಿಂದ, ಎತ್ತರದ ಸ್ಥಳಗಳಿಂದ ಪೂರ್ಣ ಪ್ರಮಾಣದ ವೃತ್ತಾಕಾರದ ಕಾಮನಬಿಲ್ಲನ್ನು ಕಾಣಬಹುದು.

ಇತ್ತೀಚೆಗೆ ಸ್ಕೈ ಡೈವಿಂಗ್‌ ಮಾಡಲು ಹೋದ ಪ್ರವಾಸಿಗರಿಗೆ ಪೂರ್ಣ ಕಾಮನಬಿಲ್ಲು ಕಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್