ನಿಮಗಿದು ಗೊತ್ತೇ? ಚಂದ್ರನ ಗುರುತ್ವಾಕರ್ಷಣೆ ಪ್ರವೇಶಿಸಿದ ಮೇಲೆ ಬಾಹ್ಯಾಕಾಶ ನೌಕೆ ಭೂಸಂಪರ್ಕ ಕಡಿದುಕೊಳ್ಳುವುದೇಕೆ?

Do you know? A spacecraft entering the Moon's gravitational field loses contact with Earth
  • ಭೂಮಿಯೊಂದಿಗೆ ಸಂಪರ್ಕ ಸಾಧಿಸಿದ ಬಾಹ್ಯಾಕಾಶ ನೌಕೆ
  • ಚಂದ್ರನ ನೆಲ ಮುತ್ತಿಕ್ಕಲಿರುವ ಮಹಿಳಾ ಗಗನಯಾತ್ರಿ

ನಾಸಾದ ಆರ್ಟೆಮಿಸ್-I ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಚಂದ್ರನ ನೆಲ ತಲುಪಿದ್ದು, ಭೂಮಿಯ ಅತ್ಯಧ್ಭುತ ಚಿತ್ರಗಳನ್ನು ಸೆರೆಹಿಡಿದಿದೆ. ಓರಾಯನ್ ಕ್ಯಾಪ್ಸುಲ್ ಚಂದ್ರನ ಮೇಲ್ಮೈಯಿಂದ 130 ಕಿಮೀ (80 ಮೈಲುಗಳು) ಮೇಲಕ್ಕೆ ಚಲಿಸಿದ್ದು, ಈಗ ದೊಡ್ಡ ಕಕ್ಷೆಯನ್ನು ಪ್ರವೇಶಿಸಲು ಪ್ರಾರಂಭಿಸುತ್ತದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಚಂದ್ರನ ಗುರುತ್ವಾಕರ್ಷಣೆ ಪ್ರದೇಶ ಪ್ರವೇಶಿಸಿದ 34 ನಿಮಿಷಗಳ ಕಾಲ, ಬಾಹ್ಯಾಕಾಶ ನೌಕೆಯು ಭೂಮಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ಅಂತಿಮವಾಗಿ ಚಂದ್ರನ ದೂರದ ಭಾಗದಲ್ಲಿ ಯಶಸ್ವಿಯಾಗಿ ಇಳಿದ ನೌಕೆ, ಭೂಮಿಯೊಂದಿಗೆ ಸಂಪರ್ಕ ಸಾಧಿಸಿತು ಎಂದು ನಾಸಾ ತಿಳಿಸಿದೆ.

ಓರಾಯನ್ ಕ್ಯಾಪ್ಸುಲ್‌ ಸದ್ಯ ಚಂದ್ರನಿಂದ 328 ಮೈಲುಗಳಷ್ಟು ಎತ್ತರದಲ್ಲಿದ್ದು, ಗಂಟೆಗೆ ಸುಮಾರು 5,023 ಮೈಲು ವೇಗದಲ್ಲಿ ಸುತ್ತುತ್ತಿದೆ. ನಿರೀಕ್ಷೆಗೂ ಮೀರಿ ಓರಾಯನ್ ನೌಕೆ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ ಎಂದು ನಾಸಾ ಹೇಳಿದೆ. ಈ ನೌಕೆ ಸುಮಾರು 2,30,000 ಮೈಲುಗಳ (3,70,149.12 ಕಿಮೀ) ದೂರದಿಂದ ಅತ್ಯಂತ ಚಿಕ್ಕದಾಗಿ ಕಾಣುವ ಭೂಮಿಯ ಚಿತ್ರಗಳನ್ನು ಸೆರೆಹಿಡಿದಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾದ ಫ್ಲೈಟ್ ಡೈರೆಕ್ಟರ್ ಝೆಬುಲಾನ್ ಸ್ಕೋವಿಲ್ಲೆ, "ನೀವು ಬಹಳ ಸಮಯದಿಂದ ಯೋಚಿಸುತ್ತಿರುವ ಮತ್ತು ಕನಸು ಕಾಣುತ್ತಿರುವ ದಿನಗಳಲ್ಲಿ ಇದು ಒಂದು" ಎಂದು ಹೇಳಿದ್ದಾರೆ.

ಆರ್ಟೆಮಿಸ್-I‌ ಯಶಸ್ಸಿನ ಬಳಿಕ ನಾಸಾ ಮುಂದಿನ ಹಂತದಲ್ಲಿ ಗಗನಯಾತ್ರಿಗಳನ್ನು ಚಂದ್ರನ ನೆಲಕ್ಕೆ ಕಳುಹಿಸಲಿದೆ ಎಂಬುದು ವಿಶೇಷ

ಸರಿಸುಮಾರು ಅರ್ಧ ಶತಮಾನಗಳ ಬಳಿಕ ನಾಸಾ ಚಂದ್ರನ ನೆಲ ತಲುಪುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರ ಮೊದಲ ಭಾಗವಾಗಿ ಮಾನವರಹಿತ ಆರ್ಟೆಮಿಸ್- I ಯೋಜನೆಯನ್ನು ನಾಸಾ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

ಈ ಸುದ್ದಿ ಓದಿದ್ದೀರಾ? ಬಾಹ್ಯಾಕಾಶ ವಿಸ್ಮಯ | ಚಂದ್ರನ ಬಳಿ ತಲುಪಿದ ನಾಸಾದ ಬಾಹ್ಯಾಕಾಶ ನೌಕೆ

ಆರ್ಟೆಮಿಸ್- II, 2024ರಲ್ಲಿ ಚಂದ್ರನ ಸುತ್ತ ಮೊಟ್ಟ ಮೊದಲ ಮಾನವ ಪ್ರವಾಸವನ್ನು ಕೈಗೊಳ್ಳಲಿದೆ ಎಂದೂ ನಾಸಾ ಮಾಹಿತಿ ನೀಡಿದೆ. ಈ ಯೋಜನೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಗಗನಯಾತ್ರಿ ಚಂದ್ರನ ನೆಲವನ್ನು ಮುತ್ತಿಕ್ಕಲಿರುವುದು ವಿಶೇಷವಾಗಿದೆ.
 
ಕಳೆದ ವಾರದ ಉಡಾವಣೆಯು ಮಾನವ ಬಾಹ್ಯಾಕಾಶ ಹಾರಾಟಕ್ಕೆ ಐತಿಹಾಸಿಕ ದಿನ ಎಂದು ಓರಾಯನ್ ಪ್ರೋಗ್ರಾಂ ಮ್ಯಾನೇಜರ್ ಹೊವಾರ್ಡ್ ಹು ಹೇಳಿದ್ದಾರೆ. "ಇದು ಕೇವಲ ಅಮೆರಿಕಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ದೀರ್ಘಾವಧಿಯ ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ನಾವು ತೆಗೆದುಕೊಳ್ಳುತ್ತಿರುವ ಮೊದಲ ಹೆಜ್ಜೆ" ಎಂದು ಹೊವಾರ್ಡ್‌ ಹು ತಿಳಿಸಿದ್ದಾರೆ.

ನಾಸಾಗೆ ಇದು ಐತಿಹಾಸಿಕ ದಿನ ಎಂದು ನಾನು ಭಾವಿಸುತ್ತೇನೆ, ಆದರೆ ಮಾನವ ಬಾಹ್ಯಾಕಾಶ ಹಾರಾಟ ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆ ಇಷ್ಟಪಡುವ ಎಲ್ಲ ಜನರಿಗೆ ಇದು ಐತಿಹಾಸಿಕ ದಿನ ಎಂದು ಹೊವಾರ್ಡ್‌ ಹು ಮಾರ್ಮಿಕವಾಗಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180