ನಿಮಗಿದು ಗೊತ್ತೇ? ಭೂಮಿಯು ಇದ್ದಕ್ಕಿದ್ದಂತೆ ವೇಗವಾಗಿ ತಿರುಗುವುದೇಕೆ?

Earth Rotating Speed
  • 24 ಗಂಟೆಗಿಂತ ಕಡಿಮೆ ವೇಗದಲ್ಲಿ ತಿರುಗಿದ ಭೂಮಿ
  • ಜೂನ್ 29, 2022ರಿಂದ ಅತಿವೇಗವಾಗಿ ತಿರುಗುತ್ತಿದೆ

ಭೂಮಿ ತನ್ನ ಅಕ್ಷದ ಮೇಲೆ ತಿರುಗಲು ಸುಮಾರು 24 ಗಂಟೆ ತೆಗೆದುಕೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಜೂನ್ 29, 2022ರಿಂದ ಭೂಮಿ ಅತಿ ವೇಗವಾಗಿ ತಿರುಗಲು ಆರಂಭಿಸಿದೆ.

1960ರಲ್ಲಿ ಭೂಮಿ ತಿರುಗುತ್ತಿದ್ದ ವೇಗಕ್ಕೆ ಹೋಲಿಸಿದಲ್ಲಿ ಈಗ ಹೆಚ್ಚು ವೇಗವಾಗಿ ಸುತ್ತುತ್ತಿದೆ. 24 ಗಂಟೆಗಳ ಸಾಮಾನ್ಯ ತಿರುಗುವಿಕೆಯ ಲೆಕ್ಕವನ್ನು ಹಿಡಿದು ನೋಡಿದಲ್ಲಿ 1.59 ಮಿಲಿಸೆಕೆಂಡುಗಳಷ್ಟು ದಿನ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಭೂಮಿಯ ತಿರುಗುವಿಕೆ ಮತ್ತು ದಾಖಲು ಸೇವಾ ವ್ಯವಸ್ಥೆ ಸಂಸ್ಥೆ ತಮ್ಮ ಅಧಿಕೃತ ವರದಿಯಲ್ಲಿ ತಿಳಿಸಿದೆ.

2020 ಜುಲೈ 19ರಂದು ಕೂಡ ಭೂಮಿ ಅತೀ ಕಡಿಮೆ ದಿನವನ್ನು ಕಂಡಿತ್ತು. ಅದು ಆ ವರ್ಷದ ಅತ್ಯಂತ ವೇಗವಾಗಿ ಕಳೆದ ದಿನವೆಂದು ತಜ್ಞರು ದಾಖಲಿಸಿದ್ದಾರೆ. 2021ರಲ್ಲೂ ಇಂತಹ ಹೆಚ್ಚು ವೇಗದಲ್ಲಿ ಕಳೆದ ದಿನವನ್ನು ಗುರುತಿಸಲಾಗಿದೆ. ಈ ವರ್ಷ ಭೂಮಿ ವೇಗವಾಗಿ ತಿರುಗುವಲ್ಲಿ ಹೊಸ ದಾಖಲೆ ಬರೆದಿದೆ. ಹಿಂದಿನ ಎಲ್ಲಾ ವೇಗದ ತಿರುಗುವಿಕೆಯನ್ನು ಮೀರಿದೆ ಎಂದು ವರದಿ ಹೇಳಿದೆ. 

ಭೂಮಿ ವೇಗವಾಗಿ ತಿರುಗಲು ಕಾರಣವೇನು?

ಪ್ರಸ್ತುತ ಭೂಮಿ ವೇಗವಾಗಿ ತಿರುಗಲು ಅಂದಾಜಿಸಲಾದ ಕಾರಣಗಳು ಹೀಗಿವೆ, 

  • ಹಿಮನದಿಗಳ ಕರಗುವಿಕೆಯಿಂದ ಧ್ರುವಗಳ ತೂಕ ಕುಸಿದಿರುವುದರಿಂದ ವೇಗವಾಗಿ ತಿರುಗಿರಬಹುದು.
  • ಗ್ರಹದ ಒಳಭಾಗದಲ್ಲಿ ಕರಗಿದ ಭೂಅಂತರಾಳ ಕಾಲಾನಂತರದಲ್ಲಿ ಚಲಿಸುತ್ತಿರುವುದರಿಂದ ಹೀಗಾಗುತ್ತಿದೆ.
  • ಷಾಂಡ್ಲರ್ ಕಂಪನದ ಕಾರಣವೆಂದೂ ಊಹಿಸಲಾಗಿದೆ. ಮೇಲ್ಮೈಯಲ್ಲಿ ಭೂಮಿಯ ಭೌಗೋಳಿಕ ಧ್ರುವಗಳ ಸಣ್ಣ ವಿಚಲನದಿಂದ ಹೀಗೆ ಆಗುತ್ತಿರಬಹುದು ಎನ್ನಲಾಗಿದೆ. 

ಈ ಸುದ್ದಿ ಓದಿದ್ದೀರಾ? ನಿಮಗಿದು ಗೊತ್ತೆ | ಬಾಹ್ಯಾಕಾಶ ನಿಲ್ದಾಣದ ತ್ಯಾಜ್ಯ ವಿಲೇವಾರಿಯೂ ಒಂದು ಸಮಸ್ಯೆ! ಪರಿಹಾರ ಹುಡುಕಿದ ನಾಸಾ

ವೇಗದ ತಿರುಗುವಿಕೆಯ ಪರಿಣಾಮವೇನು?

  • ಜಿಪಿಎಸ್ ಉಪಗ್ರಹಗಳಲ್ಲಿ ಬಳಸಲಾಗುವ ಪರಮಾಣು ಗಡಿಯಾರಗಳ ಮೇಲೆ ಭೂಮಿಯ ತಿರುಗುವಿಕೆ ಪ್ರಮುಖ ಪರಿಣಾಮಗಳನ್ನು ಉಂಟುಮಾಡಬಹುದು. ಅವು ಭೂಮಿಯ ವೇಗದ ತಿರುಗುವಿಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ.
  • ಅದರ ಹೊರತಾಗಿ, ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಸಂವಹನ ವ್ಯವಸ್ಥೆಗಳು ನೆಟ್ವರ್ಕ್ ಟೈಮ್ ಪ್ರೋಟೋಕಾಲ್ (ಎನ್‌ಟಿಪಿ) ಸರ್ವರ್‌ಗಳೊಂದಿಗೆ ಸಿಂಕ್ ಆಗಿರುವುದರಿಂದ ಅನುಪಯುಕ್ತವಾಗುತ್ತವೆ.
ನಿಮಗೆ ಏನು ಅನ್ನಿಸ್ತು?
0 ವೋಟ್