ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಭಾರತದಲ್ಲೂ ಸಿಗಲಿದೆ ಇ- ಪಾಸ್‌ಪೋರ್ಟ್‌ ಸೌಲಭ್ಯ

ಪಾಸ್‌ಪೋರ್ಟ್‌ ಸೇವೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಸುಧಾರಿಸುವ ದೃಷ್ಟಿಯಿಂದ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಂ (ಪಿಎಸ್‌ಪಿ ವಿ2.0) ಪ್ರಾರಂಭಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಇ-ಪಾಸ್‌ಪೋರ್ಟ್‌ ಹೊರತರಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜೈ ಶಂಕರ್‌ ಹೇಳಿದ್ದಾರೆ.
E-Passport  Image

ಪಾಸ್‌ಪೋರ್ಟ್‌ ಬಳಕೆದಾರರ ಗೌಪ್ಯತೆ ಕಾಪಾಡಲು ಮತ್ತು ಸುಲಭವಾಗಿ ಪ್ರಯಾಣ ಮಾಡಲು ವಿದೇಶಾಂಗ ವ್ಯವಹಾರ ಸಚಿವಾಲಯ ಇ- ಪಾಸ್‌ಪೋರ್ಟ್‌ ಪರಿಚಯಿಸಲಿದೆ. 

ಕಳೆದ ವರ್ಷ ಇ- ಪಾಸ್‌ಪೋರ್ಟ್‌ ಬಗ್ಗೆ ಚರ್ಚೆ ನಡೆಸಿದ ವಿದೇಶಾಂಗ ಸಚಿವ ಜೈಶಂಕರ್, ಈ ವರ್ಷದ ಅಂತ್ಯದೊಳಗೆ ಇ- ಪಾಸ್‌ಪೋರ್ಟ್‌ ಹೊರತರಲು ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಭಾರತ ಸರ್ಕಾರವು ನಾಗರಿಕರ ಅನುಭವ ಮತ್ತು ಸಾರ್ವಜನಿಕರ ವಿತರಣೆ ಸುಧಾರಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.  

ಪಾಸ್‌ಪೋರ್ಟ್‌ ಸೇವೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಸುಧಾರಿಸುವ ದೃಷ್ಟಿಯಿಂದ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಂ (ಪಿಎಸ್‌ಪಿ ವಿ2.0) ಅನ್ನು ಪ್ರಾರಂಭಿಸಲಾಗಿದೆ. ಇದು ಪಿಎಸ್‌ಪಿ ವಿ1.0ನ ನವೀಕರಿಸಿದ ಅವೃತ್ತಿ. ಎಲ್ಲ ಮಧ್ಯಸ್ಥಗಾರರ ನಡುವೆ ಡಿಜಿಟಲ್ ಪರಿಸರ ಪರಿಚಯಿಸಲು ಮತ್ತು ನಾಗರಿಕರಿಗೆ ನೀಡುವ ಸೇವೆ ಸುಧಾರಿಸಲು ಇ- ಪಾಸ್‌ಪೋರ್ಟ್‌ ಸೇವೆಯನ್ನು ಶುರು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

Image
E-Passport  Image

ಈ ಸೇವೆಯು ನೂತನ ಡಿಜಿಟಲ್ ಪರಿಕಲ್ಪನೆಯಲ್ಲ, ಈಗಾಗಲೇ ಈ ಸೇವೆಯನ್ನು 100ಕ್ಕೂ ಹೆಚ್ಚು ದೇಶಗಳು ನೀಡುತ್ತಿವೆ. ಐರ್ಲೆಂಡ್, ಜಿಂಬಾಬ್ವೆ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಮುಂತಾದ ದೇಶಗಳು ಇ-ಪಾಸ್‌ಪೋರ್ಟ್‌ಗಳನ್ನು ಹೊರತಂದಿವೆ ಎಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಇ- ಪಾಸ್‌ಪೋರ್ಟ್‌ ನಿಖರವಾಗಿ ಏನು? ಅದು ಪ್ರಯಾಣವನ್ನು ಹೇಗೆ ಸುಲಭ ಮತ್ತು ಸುರಕ್ಷಿತವಾಗಿಸುತ್ತದೆ? ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿಪ್ ಆಧಾರಿತ ಇ- ಪಾಸ್‌ಪೋರ್ಟ್‌ಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಇ- ಪಾಸ್‌ಪೋರ್ಟ್‌?

ಇ- ಪಾಸ್‌ಪೋರ್ಟ್‌ ಸಾಮಾನ್ಯವಾಗಿ ಭೌತಿಕ ಪಾಸ್‌ಪೋರ್ಟ್‌ನಂತೆಯೆ ಕೆಲಸ ಮಾಡುತ್ತದೆ. ಇದು ಡ್ರೈವಿಂಗ್ ಲೈಸೆನ್ಸ್‌ಗೆ ಸ್ವಲ್ಪಮಟ್ಟಿಗೆ ಹೋಲುವ ಸಣ್ಣ ಎಲೆಕ್ಟ್ರಾನಿಕ್ ಚಿಪ್‌ನೊಂದಿಗೆ ಬರಲಿದೆ. ಇ- ಪಾಸ್‌ಪೋರ್ಟ್‌ನಲ್ಲಿರುವ ಈ ಚಿಪ್ ಎಲ್ಲ ನಿರ್ವಾಹಕರ ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ನಿರ್ವಾಹಕರ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರ ವಿಷಯಗಳನ್ನು ಸಂಗ್ರಹಿಸುತ್ತದೆ.

ಇ- ಪಾಸ್‌ಪೋರ್ಟ್‌ಗಳು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಚಿಪ್‌ ಬಳಸುತ್ತವೆ ಮತ್ತು ಹಿಂಬದಿಯ ಕವರ್‌ನಲ್ಲಿ ಆಂಟೆನಾ ಅಳವಡಿಸಲಾಗಿದೆ. ಈ ಚಿಪ್, ಅಧಿಕಾರಿಗಳು ಪ್ರಯಾಣಿಕರ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ನಕಲಿ ಪಾಸ್‌ಪೋರ್ಟ್‌ಗಳ ಚಲಾವಣೆಯನ್ನು ಕಡಿಮೆ ಮಾಡುವುದು ಮತ್ತು ಸುರಕ್ಷತೆ ಹೆಚ್ಚಿಸುವುದು ಹಾಗೂ ನಕಲಿ ಡೇಟಾ ಟ್ಯಾಪಿಂಗ್‌ನ್ನು ಕಡಿಮೆ ಮಾಡುವುದು ಇ- ಪಾಸ್‌ಪೋರ್ಟ್‌ನ ಮುಖ್ಯ ಉದ್ದೇಶವಾಗಿದೆ. 

ಇ- ಪಾಸ್‌ಪೋರ್ಟ್‌ಗಳ ತಯಾರಕರು ಯಾರು?

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಇ- ಪಾಸ್‌ಪೋರ್ಟ್‌ಗಳ ತಯಾರಕರು. ಭಾರತ ಸರ್ಕಾರವು ಈಗಾಗಲೇ ದೃಢಪಡಿಸಿದಂತೆ ಈ ವರ್ಷದ ಅಂತ್ಯದ ವೇಳೆಗೆ ಇ- ಪಾಸ್‌ಪೋರ್ಟ್‌ ಸೇವೆ ಹೊರತರಲಿದೆ. ವರದಿಗಳ ಪ್ರಕಾರ, ಟಿಸಿಎಸ್ ನೂತನ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಯೋಜನೆಯ ಎಲ್ಲಾ ಉಪಕರಣಗಳ ಅವಶ್ಯಕತೆಗಳನ್ನು ಪೂರೈಸಲು ಹೊಸ ಡೇಟಾ ಸೆಂಟರ್‌ ಅನ್ನು ಕೂಡ ವಿದೇಶಾಂಗ ಸಚಿವಾಲಯ ಸ್ಥಾಪಿಸಿದೆ.

ಈ ವರ್ಷದ ಅಂತ್ಯದೊಳಗೆ ಇ- ಪಾಸ್‌ಪೋರ್ಟ್‌ ಕಾರ್ಯರೂಪಕ್ಕೆ ಬರಲಿದೆ
ಈ ವರ್ಷದ ಅಂತ್ಯದೊಳಗೆ ಇ- ಪಾಸ್‌ಪೋರ್ಟ್‌ ಕಾರ್ಯಚರಣೆಯಾಗಲಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಜೈಶಂಕರ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಲಾರಿ ಚಾಲಕರ ಜೀವನ ಸುಧಾರಿಸಲು ಬೇಕಿದೆ ತಂತ್ರಜ್ಞಾನ

ಪ್ರಸ್ತುತ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ ಹೊಂದಿರುವವರು ನವೀಕರಿಸುವ ಅಗತ್ಯವಿದೆಯೇ?

ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ. ಇ- ಪಾಸ್‌ಪೋರ್ಟ್‌ಗಾಗಿ ಅರ್ಜಿ ಪ್ರಕ್ರಿಯೆಯು ಭೌತಿಕ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸೇವೆಯು ಅಧಿಕೃತವಾಗಿ ದೇಶದಲ್ಲಿ ಲಭ್ಯವಾದ ನಂತರ ಹೊಸ ಅರ್ಜಿದಾರರು ತಕ್ಷಣವೇ ಇ- ಪಾಸ್‌ಪೋರ್ಟ್‌ಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.

ಇ-ಪಾಸ್‌ಪೋರ್ಟ್‌ ನೋಡಲು ಹೇಗಿರುತ್ತವೆ?

ಭಾರತದಲ್ಲಿ ಇ- ಪಾಸ್‌ಪೋರ್ಟ್‌ಗಳು ಇತರ ದೇಶಗಳಂತೆಯೇ ಸಾಮಾನ್ಯ ಪಾಸ್‌ಪೋರ್ಟ್‌ನಂತೆ ಕಾಣುತ್ತವೆ, ಅದರಲ್ಲಿ ಚಿಪ್‌ನ್ನು ಅಳವಡಿಸಲಾಗುತ್ತದೆ ಆದ್ದರಿಂದ, ನೀವು ಯಾವುದೇ ರೀತಿಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣ ಮಾಡುವಾಗ ಭೌತಿಕ ಪಾಸ್‌ಪೋರ್ಟ್‌ ಕೂಡ ಒಯ್ಯಬೇಕಾಗುತ್ತದೆ.

"ಇದು ಪ್ರಮಾಣೀಕೃತ ಮತ್ತು ಉದಾರೀಕರಣ ಪ್ರಕ್ರಿಯೆಗಳ ಮೂಲಕ ಸುಗಮ ಆಡಳಿತವನ್ನು ಅಂತ್ಯದಿಂದ ಕೊನೆಯವರೆಗೆ ಖಚಿತಪಡಿಸುತ್ತದೆ, ಕೃತಕ ಬುದ್ಧಿಮತ್ತೆ, ಚಾಟ್-ಬಾಟ್, ಬಿಗ್-ಡೇಟಾ ಬಳಕೆ, ಅಡ್ವಾನ್ಸ್ ಅನಾಲಿಟಿಕ್ಸ್ ಮುಂತಾದ ಇತ್ತೀಚಿನ ತಂತ್ರಜ್ಞಾನಗಳ ಬಳಕೆ ಮಾಡಲಾಗಿದೆ. ಭಾರತೀಯ ನಾಗರಿಕರಿಗೆ ಇದು ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಡೇಟಾ ಸುರಕ್ಷತೆಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ” ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್