ವಿದ್ಯುತ್ ಬಿಲ್ ಹಗರಣ | ವಾಟ್ಸ್ಆ್ಯಪ್‌ನಲ್ಲಿ ಬಳಕೆದಾರರಿಗೆ ಯಾಮಾರಿಸಿ ಹಣ ದೋಚಿದ ವಂಚಕರು

Scam whatsapp Scam
  • ಒಂದೇ ಬಾರಿಗೆ ಹಲವು ಗ್ರಾಹಕರನ್ನು ಗುರಿ ಮಾಡಿದ ವಂಚಕರು
  • ವಂಚನೆ ಕುರಿತು ಸೈಬರ್ ಕ್ರೈಮ್ ಸೆಲ್‌ಗೆ ಕರೆ ಮಾಡಲು ಪೊಲೀಸ್‌ ಮನವಿ

ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳ ಬಳಕೆದಾರರಿಗೆ ಮೋಸಗಾರರು ನಕಲಿ ವಿದ್ಯುತ್ ಬಿಲ್ ಸಂದೇಶಗಳನ್ನು ಕಳುಹಿಸಿ ವಂಚಿಸಿದ ಕುರಿತು ಸಾಲು ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. 

ಮೋಸ ಮಾಡುವ ವಂಚಕರಿಗೆ ವಿದ್ಯುತ್ ಬಿಲ್ ಪಾವತಿದಾರರು ಗುರಿಯಾಗುತ್ತಿದ್ದಾರೆ. ಗ್ರಾಹಕರಿಗೆ ನಿಮ್ಮ ವಿದ್ಯುತ್ ಬಿಲ್ ಬಾಕಿಯಿದೆ ಮತ್ತು ಪಾವತಿಸದ್ದಿದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಕರೆ ಮಾಡುವುದು ಅಥವಾ ವಾಟ್ಸ್ಆ್ಯಪ್‌ನಲ್ಲಿ ಸಂದೇಶಗಳನ್ನು ಕಳುಹಿಸಿ ಬಳಕೆದಾರರನ್ನು ಯಾಮಾರಿಸಿ ತಮ್ಮ ಖಾತೆಯಿಂದ ಲಕ್ಷಂತಾರ ರೂಪಾಯಿ ಹಣವನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸುವ ಮೂಲಕ ಗ್ರಾಹಕರ ಹಣವನ್ನು ಲೂಟಿ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬಳಕೆದಾರರು ತಮ್ಮ  ಟ್ವಿಟರ್ ಖಾತೆಯಲ್ಲಿ ಸಹ ಸೈಬರ್ ಪೊಲೀಸರ ಖಾತೆಯನ್ನು ಟ್ಯಾಗ್ ಮಾಡುವ ಮೂಲಕ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ, ಈ ಪ್ರಕರಣ ದೇಶದ ಹಲವು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಒಡಿಶಾದಲ್ಲಿ ಕಂಡುಬಂದಿದೆ. 

ನಕಲಿ ನಂಬರ್‌ನ್ನು ಬಳಕೆದಾರರಿಗೆ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ, ವಿದ್ಯುತ್ ಕಚೇರಿಗೆ ಕರೆ ಮಾಡಲು ಹೇಳಿದ ವಂಚಕರು ಕರೆ ಮಾಡಿದಾಕ್ಷಣ ಹಳೆಯ ಬಾಕಿ ಮೊತ್ತ ಕಟ್ಟುವಂತೆ ಒಟ್ಟಾಯಿಸಿ ಬಳಕೆದಾರರ ಖಾತೆಯಿಂದ ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ. ಈ ಪ್ರಕರಣವು ದೊಡ್ಡ ವಿದ್ಯುತ್ ಹಗರಣವಾಗಿದೆ. ಈವರೆಗೂ ಗ್ರಾಹಕರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ.

ಅಷ್ಟೇ ಅಲ್ಲದೆ, ವಂಚಕರು ಮೊದಲ ನೋಟದಲ್ಲೇ ಸಿಕ್ಕಿಬೀಳುವುದನ್ನು ತಪ್ಪಿಸಲು ಒಂದೇ ಬಾರಿಗೆ ಹಲವು ಗ್ರಾಹಕರನ್ನು ಗುರಿ ಮಾಡಿ ಮೊಬೈಲ್ ಸಂದೇಶ ಅಥವಾ ವಾಟ್ಸ್ಆ್ಯಪ್ ಸಂದೇಶದಲ್ಲಿ ಎಸ್ಎಂಎಸ್ ಹೆಡರ್‌ಗಳನ್ನು ಬಳಸಿಕೊಂಡು ನಕಲಿ ವಿದ್ಯುತ್ ಸಂದೇಶಗಳನ್ನು ಕಳುಹಿಸಿದ್ದು, ಈ ಪ್ರಕರಣ ಹೆಚ್ಚು ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಂಡುಬಂದಿದೆ.

"ಯಾವುದೇ ನಕಲಿ ಸಂದೇಶಗಳಿಗೆ ಗಮನ ಕೊಡಬೇಡಿ ಮತ್ತು ಹೀಗೆ ಅನಿರೀಕ್ಷಿತ ಸಂದೇಶಗಳು ಬಂದ ಕೂಡಲೇ ಪೊಲೀಸರಿಗೆ ದೂರು ನೀಡಿ" ಎಂದು ಮಹಾರಾಷ್ಟ್ರ ಸೈಬರ್ ತಿಳಿಸಿದೆ, ಇದಕ್ಕೆ ಸಂಬಂಧಿಸಿ ಉಳಿದ ರಾಜ್ಯಗಳ ವಿದ್ಯುತ್ ನಿಗಮ ಕೂಡ ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ವಿಡಿಯೋಗಳನ್ನು ರೀಲ್ಸ್‌ಗಳಾಗಿ ಪರಿವರ್ತಿಸಲು ಇನ್‌ಸ್ಟಾಗ್ರಾಮ್‌ ಮುಂದಾಗಿದೆ

ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟ್‌ಲ್‌ಗೆ ಲಾಗ್ಇನ್ ಆಗಿ ತಮಗಾದ ವಂಚನೆ ಕುರಿತು www.cybercrime.gov.in ಅಥವಾ 1930ರಲ್ಲಿ ಸೈಬರ್ ಕ್ರೈಮ್ ಸೆಲ್‌ಗೆ ಕರೆ ಮಾಡಲು ಮೀರಾ ಭಯಂದರ್ ವಸೈ ವಿರಾರ್ (ಎಂಬಿವಿವಿ) ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
2 ವೋಟ್