ಒಂದು ನಿಮಿಷದ ಓದು | ಚೈನೀಸ್ ಪೋನ್ ತಯಾರಕರಾದ ವಿವೋ ಸಂಸ್ಥೆ ಮೇಲೆ ಇಡಿ ದಾಳಿ

Vivo Image

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ವಿವೋ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, 44 ಸ್ಥಳಗಳಲ್ಲಿ ಶೋಧ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿ ವಿವೋ ಸಂಸ್ಥೆಯಿಂದ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವರದಿ ತಿಳಿಸಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ವಿವೋ, ಒಪ್ಪೋ, ಶಿಯೋಮಿ ಮತ್ತು ಒನ್‌ಪ್ಲಸ್‌ ಸೇರಿದಂತೆ 20ಕ್ಕೂ ಹೆಚ್ಚು ಚೀನಾದ ಸಂಸ್ಥೆಯ ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. 

ವಿವೋ ಕಂಪನಿಯು ನಷ್ಟವನ್ನು ತೋರಿಸುವ ಮೂಲಕ ನೂರಾರು ಕೋಟಿ ತೆರಿಗೆ ಹಣ ವಂಚನೆ ಮಾಡಿದೆ. ಇದಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯಕ್ಕೆ ಗುಪ್ತಚರ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ಹುಡುಕಾಟ ನಡೆಸಲಾಯಿತು. ವಿವೋ ಸಂಸ್ಥೆಯು ಇರುವ ಆದಾಯಕ್ಕಿಂತ ಕಡಿಮೆ ಆದಾಯವನ್ನು ತೋರಿಸಲಾಗಿದೆ ಎಂದು ಮಾಧ್ಯಮಗಳು ಹೇಳಿವೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘಿಸಿದ ಆರೋಪದ ಮೇಲೆ ಇಡಿ ಭಾರತದ ಶಿಯೋಮಿ ಸಂಸ್ಥೆಯ ಮುಖ್ಯಸ್ಥ ಮನು ಜೈನ್ ಅವರನ್ನು ಪ್ರಶ್ನಿಸಿದೆ. ಈ ಪ್ರಕರಣದೊಂದಿಗೆ ₹5,000 ಕೋಟಿ ಮೌಲ್ಯದ ಶಿಯೋಮಿ ಬ್ಯಾಂಕ್ ಖಾತೆಗಳನ್ನು ಇಡಿ ತನಿಖೆ ನಡೆಸುತ್ತಿದೆ. ಆದರೆ ಕರ್ನಾಟಕ ಹೈಕೋರ್ಟ್ ಇದನ್ನು ಸ್ಥಗಿತಗೊಳಿಸಿತು. ಆದಾಗ್ಯೂ ಇಡಿ ತನ್ನ ಅಧಿಕಾರಿಗಳ ಮೇಲೆ ಒತ್ತಡ ಹೇರಿದೆ ಎಂದು ಶಿಯೋಮಿ ಸಂಸ್ಥೆ ಆರೋಪಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್