ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಈಗ ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ ಅಳವಡಿಕೆ

Facebook Messenger Image
  • ಈ ಫೀಚರ್‌ ಮೆಸೆಂಜರ್ ಬೀಟಾ ಆವೃತ್ತಿಯವರಿಗೆ ಮಾತ್ರ ಲಭ್ಯವಿದೆ
  • ಚಾಟ್ ಬ್ಯಾಕಪ್ ಎನ್‌ಕ್ರಿಪ್ಟ್‌ ಮಾಡಲು ಬಳಕೆದಾರರಿಗೆ ನೆರವಾಗಲಿದೆ

ವಾಟ್ಸ್ಆ್ಯಪ್ ಆಯ್ತು ಇದೀಗ ಮೆಸೆಂಜರ್‌ನಲ್ಲಿ ಕೂಡ ಭದ್ರತೆ ಕಾಪಾಡಲು ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ ಅಳವಡಿಸಲು ಫೇಸ್‌ಬುಕ್‌ ಚಿಂತನೆ. ಆದರೆ ಈ ವೈಶಿಷ್ಟ್ಯವನ್ನು ಶೀಘ್ರದಲ್ಲಿ ಎಲ್ಲ ಬಳಕೆದಾರರಿಗೆ ಕಾರ್ಯಾನಿರ್ವಹಿಸಲು ಅನುಮತಿಸಲಾಗುವುದು,  ಸಕ್ರಿಯಗೊಳಿಸುವ ಆಸಕ್ತರು ಮಾತ್ರ ಅದನ್ನು ಅಳವಡಿಸಬಹುದಾಗಿದೆ. 

ಇದನ್ನು ಪರಿಚಯಿಸುವ ಮುಖ್ಯ ಉದ್ದೇಶ ಭದ್ರತೆ. ವಾಟ್ಸ್ಆ್ಯಪ್ ಬಳಿಕ ಫೇಸ್‌ಬುಕ್‌ ಬಳಕೆಯಲ್ಲಿ ಕೂಡ ಭದ್ರತೆ ಇಲ್ಲದೆ ಬಳಕೆದಾರರ ಮಾಹಿತಿ ದುರುಪಯೋಗ ಆಗುತ್ತಿರುವುದನ್ನು ಗಮನಿಸಿರುವ ಫೇಸ್‌ಬುಕ್‌, ಇದೀಗ ಈ ಫೀಚರ್‌ಗೆ ಚಾಲನೆ ನೀಡಲು ತೀರ್ಮಾನಿಸಿದೆ. ಸದ್ಯಕ್ಕೆ ಈ ಮೆಸೆಂಜರ್ ಬೀಟಾ ಆವೃತ್ತಿಯವರಿಗೆ ಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಸಿಗುವ ಎರಡು ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು

ಏನಿದು ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ?

AV Eye Hospital ad

ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ ಎನ್ನುವುದು ಸಂದೇಶದ ವಿಷಯಗಳನ್ನು ಎನ್‌ಕ್ರಿಪ್ಟ್‌ ಮಾಡುವ ಸೇವೆಯಾಗಿದ್ದು, ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಅದನ್ನು ಡೀಕ್ರಿಪ್ಟ್ ಮಾಡಬಹುದು, ಸಂದೇಶದ ವಿಷಯಗಳನ್ನು ಲೂಪ್‌ನ ಹೊರಗಿನ ಬಳಕೆದಾರರಿಗೆ ಸಿಗದ ಹಾಗೆ ಭದ್ರತೆಯಿಂದ ಕಾಪಾಡಲಾಗುತ್ತದೆ. ಬಳಸುವ ವೇದಿಕೆಯಲ್ಲಿ ಸಹ ʻಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ʼ ಮಾಡಿದ ಸಂದೇಶಗಳ ವಿಷಯಗಳನ್ನು ಮರುಪಡೆಯಲು ಸಾಧ್ಯವಾಗುವುದಿಲ್ಲ.

ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಬಳಕೆದಾರರ ಚಾಟ್ ಹಿಸ್ಟರಿ ಬ್ಯಾಕಪ್ ಅನ್ನು ಎನ್‌ಕ್ರಿಪ್ಟ್‌ ಮಾಡಲು ಬಳಕೆದಾರರಿಗೆ ಸಹಾಯ ಮಾಡುವ 'ಸುರಕ್ಷಿತ ಸಂಗ್ರಹಣೆ' ಎಂಬ ಹೊಸ ವೈಶಿಷ್ಟ್ಯವನ್ನು ಫೇಸ್‌ಬುಕ್‌ ಪ್ರಕಟಿಸಿದೆ. ಪ್ರಸ್ತುತ ಅಭಿವೃದ್ಧಿಯಲ್ಲಿರುವ ಕೆಲವು ವೈಶಿಷ್ಟ್ಯಗಳು ಸಂದೇಶಗಳನ್ನು ಕಳುಹಿಸದಿರುವ ಸಾಮರ್ಥ್ಯ ಮತ್ತು ಸಾಧನಗಳಾದ್ಯಂತ ಅಳಿಸಲಾದ ಸಂದೇಶಗಳನ್ನು ಸಿಂಕ್ ಮಾಡುವ ಸಾಮರ್ಥ್ಯವನ್ನು ಇದು ಒಳಗೊಂಡಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app