ಭಾರತದ ಡಿಜಿಟಲ್ ಪಾವತಿ ವಲಯದಲ್ಲಿ ಆರ್ಥಿಕ ವಂಚನೆ ಶೇ.42ರಷ್ಟು ಏರಿಕೆ: ಸಮೀಕ್ಷಾ ವರದಿ

Financial Fruad Image
  • ಭಾರತದ ಡಿಜಿಟಲ್ ಪಾವತಿ ವಲಯದಲ್ಲಿ ಅತೀ ಹೆಚ್ಚು ಆರ್ಥಿಕ ವಂಚನೆಯಾಗಲಿದೆ
  • ಶೇ.8ರಷ್ಟು ಎಟಿಎಂ ಕಾರ್ಡ್‌ನಿಂದ ವಂಚನೆ ಮತ್ತು ಶೇ.6ರಷ್ಟು ವಿಮೆ ವಂಚನೆಯಾಗಿದೆ

ಭಾರತದ ಡಿಜಿಟಲ್ ಪಾವತಿ ವಲಯದಲ್ಲಿ ಅತೀ ಹೆಚ್ಚು ಆರ್ಥಿಕ ವಂಚನೆಯಾಗುತ್ತಿದೆ. ಭಾರತದಲ್ಲಿ ಡಿಜಿಟಲ್ ಪಾವತಿ ಬಳಸುವವರ ಸಂಖ್ಯೆ ಪ್ರತಿ ದಿನ ಗರಿಷ್ಠಮಟ್ಟ ಏರುತ್ತಿದೆ, ಮತ್ತು ಅರ್ಥಿಕ ವಲಯದಲ್ಲಿ ಕೂಡ ಭಾರೀ ವಂಚನೆಯಾಗುವುದು ಕಂಡುಬಂದಿದೆ ಎಂದು ʻಲೋಕಲ್‌ ಸರ್ಕಲ್ಸ್‌ʼ ಸಂಸ್ಥೆ ನೀಡಿದ ವರದಿ ಹೇಳಿದೆ.

"ಆನ್‌ಲೈನ್‌ ವಹಿವಾಟುವಿನಲ್ಲಿ ಆರ್ಥಿಕ ವಂಚನೆಯಾಗುತ್ತಿರುವುದು ಹೆಚ್ಚು ಪ್ರಚಲಿತವಾಗಿದೆ. ಆನ್‌ಲೈನ್‌ ವಂಚನೆಯಲ್ಲಿ ಪ್ರಕರಣಗಳಲ್ಲಿ ಬಂಧಿತರಾಗಿರುವವರ ಪೈಕಿ ಶೇ. 42ರಷ್ಟು ಆರೋಪಿಗಳು ಭಾರತೀಯರಾಗಿದ್ದಾರೆ. ವಂಚನೆಗೊಳಗಾದವರಲ್ಲಿ ಶೇ.74ರಷ್ಟು ಜನರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ" ಎಂದು ವರದಿ ತಿಳಿಸಿದೆ. 

 ʻಲೋಕಲ್‌ ಸರ್ಕಲ್ಸ್‌ʼ ನಡೆಸಿದ ಸಮೀಕ್ಷೆಯಲ್ಲಿ 11,065 ಪ್ರತಿಕ್ರಿಯೆಗಳು ದಾಖಲಾಗಿವೆ. ಅದರಲ್ಲಿ ಕಳೆದ ಮೂರು ವರ್ಷದಿಂದ ಆದ ವಂಚನೆಗಳ ಪೈಕಿ, ಹೆಚ್ಚಿನವು ಕುಟುಂಬದ ಸದಸ್ಯರಿಂದಲೇ ವಂಚಿಸ್ಪಟ್ಟಿವೆ.

ಲೋಕಲ್ ಸರ್ಕಲ್ ಸಂಸ್ಥೆಯು ನಾಗರಿಕರು ವಂಚನೆಗೊಳಗಾಗಲು ಎಷ್ಟು ದುರ್ಬಲರಾಗಿದ್ದಾರೆ ಎಂದು ಪರೀಕ್ಷಿಸಲು ಈ ಸಮೀಕ್ಷೆಯನ್ನು ನಡೆಸಿದೆ. "ಸಮೀಕ್ಷೆಯಲ್ಲಿ ತಿಳಿದ ವಿಷಯವೇನೆಂದರೆ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಡಿಜಿಟಲ್ ಅಪ್ಲಿಕೇಶನ್‌ಗಳಲ್ಲಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ" ಎಂದು ಸಂಸ್ಥೆ ತಿಳಿಸಿದೆ. ಅಷ್ಟೇ ಅಲ್ಲದೆ, ವಂಚಕರಿಂದ ಪುನಃ ಹಣ ಪಡೆಯುವ ಪ್ರಯತ್ನ ಕೂಡ ಮಾಡಿದಲಾಗಿದೆ. ಆದರೆ, ಯಾವುದೇ ಪ್ರಯತ್ನ ಫಲಿಸಿಲ್ಲವೆಂದು ಸಮೀಕ್ಷಾ ವರದಿ ಹೇಳಿದೆ.  

ಆದರೆ, ಸಂಸ್ಥೆ ಮಾಡಿದ ಸಮೀಕ್ಷೆಯಲ್ಲಿ 301 ಜಿಲ್ಲೆಯ 32,000 ಮಂದಿ ಭಾಗಿಯಾಗಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಶೇ.62ರಷ್ಟು ಪುರುಷರು ಮತ್ತು ಶೇ.38ರಷ್ಟು ಮಹಿಳೆಯರಾಗಿದ್ದಾರೆ. 

ಸಮೀಕ್ಷೆಯ ಎರಡನೇ ಭಾಗದಲ್ಲಿ ಕೇಳಲಾಗಿದ್ದ 'ಯಾವ ವಲಯದಲ್ಲಿ ಹೆಚ್ಚು ವಂಚನೆಯಾಗಿದೆ' ಎಂಬ ಪ್ರಶ್ನೆಗೆ ಸುಮಾರು 9,936 ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲಿ ಶೇ.29ರಷ್ಟು ಬ್ಯಾಂಕ್ ಖಾತೆಯಿಂದ ವಂಚನೆಯಾಗಿವೆ. ಶೇ.24ರಷ್ಟು ವಂಚನೆಗಳು ಇ-ಕಾಮರ್ಸ್ ವಲಯದಿಂದಾಗಿವೆ ಹಾಗೂ ಶೇ.21ರಷ್ಟು ಇತರ ಖಾತೆಗಳಿಂದ ವಂಚನೆಯಾಗಿದೆ ಎಂದು ತಿಳಿದುಬಂದಿದೆ. 

ಈ ಸುದ್ದಿ ಓದಿದ್ದೀರಾ?: ಸೋಶಿಯಲ್ ಮೀಡಿಯಾ ಸ್ಟಾರ್ | ಜಗಲಿಯಿಂದ ಜಗತ್ತಿನೆಡೆಗೆ ಡಾ. ಬ್ರೋ

ಯಾವ ಆರ್ಥಿಕ ವಲಯದಲ್ಲಿ ಎಷ್ಟು ವಂಚನೆಯಾಗಿದೆ?

ಸಮೀಕ್ಷೆಯ ಪ್ರಕಾರ ಶೇ.18ರಷ್ಟು ಕ್ರೆಡಿಟ್/ಡೆಬಿಟ್ ಕಾರ್ಡ್ ವಂಚನೆ, ಶೇ.12ರಷ್ಟು ಮೊಬೈಲ್ ಅಪ್ಲಿಕೇಶನ್‌ಗಳಿಂದ ವಂಚನೆಯಾಗಿದೆ. ಅಷ್ಟೇ ಅಲ್ಲದೆ, ಶೇ.8ರಷ್ಟು ಎಟಿಎಂ ಕಾರ್ಡ್‌ನಿಂದ ವಂಚನೆ ಮತ್ತು ಶೇ.6ರಷ್ಟು ವಿಮೆ ವಂಚನೆಯಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ. 

ಎಷ್ಟು ಗ್ರಾಹಕರು ಹಣ ಹಿಂಪಡೆದಿದ್ದಾರೆ?

ಲೋಕಲ್ ಸರ್ಕಲ್ ಸಂಸ್ಥೆ ಮಾಡಿದ ಸಮೀಕ್ಷೆಯ ಕೊನೆಯ ಪ್ರಶ್ನೆ ವಂಚನೆಯಾದ ಹಣವನ್ನು ಹಿಂಪಡೆಯಲಾಗಿದೆ ಎಂದಾಗಿತ್ತು. ಈ ಪ್ರಶ್ನೆಗೆ 10,995 ಗ್ರಾಹಕರಿಂದ ಪ್ರತಿಕ್ರಿಯೆ ಬಂದಿದೆ. ಅದರಲ್ಲಿ ಶೇ.10ರಷ್ಟು ಗ್ರಾಹಕರು ಡಿಜಿಟಲ್ ಅಪ್ಲಿಕೇಶನ್ ವೇದಿಕೆಗಳಲ್ಲಿ ದೂರು ಸಲ್ಲಿಸಿ ಹಣ ಮರಳಿ ಪಡೆದಿದ್ದಾರೆ. ಇನ್ನು ಉಳಿದ ಶೇ.7ರಷ್ಟು ಗ್ರಾಹಕರು ಅಧಿಕಾರಿಗಳಿಗೆ ದೂರು ಸಲ್ಲಿಸಿ ಹಣ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್