ಇಸ್ರೊದ ʻಆಝಾದಿʼ ಉಪಗ್ರಹದಲ್ಲಿ ತಾಂತ್ರಿಕ ದೋಷ | ಉಡಾವಣೆ ಮುಂದೂಡಿಕೆ

AzadiSAT satellite Image
  • ಟರ್ಮಿನಲ್ ಹಂತದಲ್ಲಿ ಕೆಲವು ಡೇಟಾ ನಷ್ಟ ಸಂಭವಿಸಿ ಸಮಸ್ಯೆ
  • 750 ವಿದ್ಯಾರ್ಥಿಗಳು ತಯಾರಿಸಿದ್ದ 'ಆಝಾದಿ' ಉಪಗ್ರಹ 

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರು ತಯಾರಿಸಿದ್ದ ಎಸ್‌ಎಸ್‌ಎಲ್‌ವಿ-ಡಿ1 ಉಪಗ್ರಹವನ್ನು ಭಾನುವಾರ (ಆಗಸ್ಟ್‌ 7) ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ  (ಇಸ್ರೊ) ತಿಳಿಸಿದೆ. 

"ದೇಶದ ಹಲವು ರಾಜ್ಯಗಳಿಂದ ಆಸಕ್ತ 750 ಶಾಲಾ ಮಕ್ಕಳನ್ನು ಆರಿಸಿ ಕರೆತಂದು ಅವರಿಗೆ ತರಬೇತಿ ನೀಡಿ ತಯಾರು ಮಾಡಲಾದ ಆಝಾದಿ ಉಪಗ್ರಹವನ್ನು ಇಂದು ಬೆಳಿಗ್ಗೆ ಆಂಧ್ರಪ್ರದೇಶದ ಶೀಹರಿಕೋಟಾದಲ್ಲಿ ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಉಡಾವಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ" ಎಂದು ಇಸ್ರೊ ಟ್ವೀಟ್ ಮಾಡಿದೆ. 

ಉಡಾವಣೆಯಲ್ಲಿ ಕಂಡು ಬಂದ ಸಮಸ್ಯೆ ಏನು?

"ಉಪಗ್ರಹದಲ್ಲಿ ಎಲ್ಲ ತರಹದ ಮುನ್ನೆಚ್ಚರಿಕೆ ಮತ್ತು ಪರೀಕ್ಷೆಯನ್ನು ಮಾಡಲಾಗಿದ್ದು, ಮೊದಲ ಹಂತದ ಕಾರ್ಯ ಕೂಡ ಮುಗಿದಿತ್ತು. ಆದರೆ "ಎಸ್ಎಸ್ಎಲ್‌ವಿ - ಡಿ1 ಎಲ್ಲ ಹಂತಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಆದರೆ ಕಾರ್ಯಾಚರಣೆಯ ಟರ್ಮಿನಲ್ ಹಂತದಲ್ಲಿ, ಕೆಲವು ಡೇಟಾ ನಷ್ಟ ಉಂಟಾಗಿದೆ. ಸ್ಥಿರ ಕಕ್ಷೆಯನ್ನು ಸೇರಲು ಸಂಬಂಧಿಸಿದ ಕಾರ್ಯಾಚರಣೆಯನ್ನು ಅಂತಿಮಗೊಳಿಸಲು ನಾವು ಅದರ ದತ್ತಾಂಶವನ್ನು ವಿಶ್ಲೇಷಿಸುತ್ತಿದ್ದೇವೆ" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ವಿಡಿಯೋ ಸಂದೇಶದ ಮೂಲಕ ತಿಳಿಸಿದರು.

"ಉಪಗ್ರಹ ಎಸ್ಎಸ್ಎಲ್‌ವಿ ಉಡಾವಣೆಯಲ್ಲಿ ನಮ್ಮ ಶಾಲೆಯಿಂದ ಕೂಡ ಭಾಗವಹಿಸಿದ್ದೇವೆ. ನಮಗೆ ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅದಕ್ಕಾಗಿ ನಾವು ನಿಜವಾಗಿಯೂ ಶ್ರಮಿಸಿದ್ದೇವೆ. ಇಂದು ನಾವು ಆಜಾದಿ ಉಪಗ್ರಹದ ಉಡಾವಣೆಗೆ ಸಾಕ್ಷಿಯಾಗುತ್ತೇವೆ ಎಂದು ಸಂತಸದಿಂದ ಇದ್ದೆವು, ಆದರೆ ಡೇಟಾ ನಷ್ಟ ಕಾರಣದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ" ಎಂದು ತೆಲಂಗಾಣದ ವಿದ್ಯಾರ್ಥಿನಿ ಶ್ರೇಯಾ ಹೇಳಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್