ನಕಲಿ ಗ್ರಾಹಕರ ಬಲೆಗೆ ಬಿದ್ದ ʻರೇಜರ್ ಪೇʼ

Razor Pay Image
  • ರೇಜರ್ ಪೇ ₹7.38 ಕೋಟಿ ನಷ್ಟ ಅನುಭವಿಸಿದೆ
  • ಮಾರ್ಚ್‌ 6ರಿಂದ 13ರವರೆಗೂ ನಡೆದ ಸಮೀಕ್ಷೆ

ನಕಲಿ ಖಾತೆಗಳಿಂದ 831 ವಹಿವಾಟು ನಡೆದಿರುವುದಾಗಿ ಪಾವತಿ ವ್ಯವಸ್ಥೆಯಾಗಿರುವ ರೇಜರ್ ಪೇ ಆಂತರಿಕ ಸಮೀಕ್ಷೆಯ ವರದಿಯಿಂದ ಬಹಿರಂಗಗೊಂಡಿದೆ.  

“ಹ್ಯಾಕರ್‌ಗಳ ಸಹಾಯದಿಂದ ʻರೇಜರ್ ಪೇ ಸಾಫ್ಟ್‌ವೇರ್‌ ಹ್ಯಾಕ್ ಮಾಡಿ ನಕಲಿ ಖಾತೆಗಳನ್ನು ತೆರೆದು ವಹಿವಾಟು ನಡೆಸಲಾಗಿದೆ. ಹೀಗಾಗಿ ರೇಜರ್ ಪೇಗೆ ಒಟ್ಟು ₹7.38 ಕೋಟಿ ನಷ್ಟವಾಗಿದೆ. ಸೈಬರ್ ಕ್ರೈಮ್ ಸೆಲ್‌ಗೆ ಮೇ 16ರಂದು ದೂರು ದಾಖಲಿಸಿದ್ದೇವೆ” ಎಂದು ರೇಜರ್ ಪೇ ಸಂಸ್ಥೆಯ ಕಾನೂನು ವಿಭಾಗದ ಮುಖ್ಯಸ್ಥ ಅಭಿಷೇಕ್ ಅಭಿನವ್ ತಿಳಿಸಿದ್ದಾರೆ. 

ತನಿಖೆ ನಂತರ ತಿಳಿದು ಬಂದ ವಿವರ

ಸಂಸ್ಥೆಯಲ್ಲಿ ಗೊಂದಲ ಉಂಟು ಮಾಡುವ ಮತ್ತು ಹಣ ದೋಚುವ ಪ್ರಯತ್ನ ಇದಾಗಿದ್ದು, ಹ್ಯಾಕರ್‌ಗಳನ್ನು ಬಳಸಿ ನಡೆಸಿದ ಆನ್‌ಲೈನ್ ದರೋಡೆಯಲ್ಲಿ 831 ವಹಿವಾಟು ರಶೀದಿಗಳು ವಿಫಲವಾಗಿವೆ. ಆದರೆ‌, ಇದರಿಂದಾಗಿದ್ದ ಅಷ್ಟು ವಹಿವಾಟುಗಳು ಅನುಮೋದನೆ ಪಡೆದಿವೆ. ಇದರ ಪರಿಣಾಮವಾಗಿ ಸಂಸ್ಥೆಗೆ ₹7.38 ಕೋಟಿ ರೂ ನಷ್ಟವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ರೇಜರ್ ಪೇ ಜೊತೆಗೆ ವ್ಯಾಪಾರ ವಹಿವಾಟು ಮಾಡುತ್ತಿರುವ ವ್ಯಾಪಾರಿಗಳಿಗೆ ಸಂಸ್ಥೆ ಮರಳಿ ಹಣ ಹಂಚಿಕೆ ಮಾಡಿದೆ.

“ವಂಚನೆ ವಹಿವಾಟಿನ ವಿವರ, ದಿನಾಂಕ, ಸಮಯ ಮತ್ತು ಐಪಿ ವಿಳಾಸದೊಂದಿಗೆ ಎಲ್ಲ ಸಂಪೂರ್ಣ ಮಾಹಿತಿ ವಿವರಗಳನ್ನು ವಿಚಾರಣೆಗಾಗಿ ನಮಗೆ ಒದಗಿಸಿದ್ದಾರೆ. ತನಿಖೆ ಕಾರ್ಯರೂಪದಲ್ಲಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರೇಜರ್ ಪೇ ಡೇಟಾ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪೂರ್ವಭಾವಿಯಾಗಿ ಕ್ರಮ ಕೈಗೊಂಡಿದ್ದೇವೆ. ಕಂಪನಿಯು ಈಗಾಗಲೇ ಮೊತ್ತದ ಅರ್ಧ ಭಾಗ ಮರಳಿ ಪಡೆದಿದೆ ಮತ್ತು ಉಳಿದ ಪ್ರಕ್ರಿಯೆಗಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್