ಮಿಸ್ ಕಾಲ್ ನೀಡಿ ಫಾಸ್ಟ್‌ಟ್ಯಾಗ್ ಖಾತೆಯ ಬಾಕಿ ಮೊತ್ತ ಪರಿಶೀಲಿಸಿ

Fastag Image
  • ಡಿಜಿಟಲ್ ಭಾರತದಡಿ ಘೋಷಿಸಲಾದ ಫಾಸ್ಟ್‌ಟ್ಯಾಗ್
  • ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ

ಡಿಜಿಟಲ್ ಭಾರತದ ಅಡಿಯಲ್ಲಿ ನಿರ್ಮಾಣವಾದ ಫಾಸ್ಟ್‌ಟ್ಯಾಗ್ ಅತೀ ಮುಖ್ಯ ಮತ್ತು ವಾಹನಗಳಿಗೆ ಕಡ್ಡಾಯ ಕೂಡ. ಪ್ರಯಾಣ ಆರಂಭಿಸುವ ಮೊದಲು ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಹಣ ಇದೆಯಾ ಎಂದು ಒಮ್ಮೆ ಪರಿಶೀಲಿಸಿ.

ಫಾಸ್ಟ್‌ಟ್ಯಾಗ್ ಎಂದರೇನು?

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಬಳಸಿ ತಯಾರಿಸಿದ ಸಾಧನವೇ ಫಾಸ್ಟ್‌ಟ್ಯಾಗ್, ಮೊದಲು ನಿಮ್ಮ ವಾಹನಕ್ಕೆ ಫಾಸ್ಟ್‌ಟ್ಯಾಗ್ ಅಳವಡಿಸಿ ನಿಮ್ಮ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಿ. ನಂತರ ಅವರು ನೀಡುವ ಫಾಸ್ಟ್‌ಟ್ಯಾಗ್ ಸ್ಟಿಕರನ್ನು ವಾಹನದ ಮೇಲೆ ಅಂಟಿಸಿ ಹೀಗೆ ಮಾಡುವುದರಿಂದ ನಿಮ್ಮ ವಾಹನಗಳು ಹೆದ್ದಾರಿಗೆ ಪ್ರವೇಶಿಸಿದಾಗ ಟೋಲ್‌ಗಳಲ್ಲಿ ಚಾಲನೆ ಮಾಡಲು ಅನುಮತಿ ಮಾಡಿಕೊಡುತ್ತಾರೆ ಮತ್ತು ಇದನ್ನು ಕಡ್ಡಾಯವಾಗಿ ವಾಹನಗಳಿಗೆ ಬಳಸಬೇಕು ಎಂದು ಸಾರ್ವಜನಿಕರಿಗೆ ಭಾರತ ಸಾರಿಗೆ ಸಚಿವಾಲಯ ಘೋಷಿಸಿದೆ.

ಇದು ಕಾರ್ಯನಿರ್ವಹಿಸುವುದು ಹೇಗೆ?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ʻಎಲೆಕ್ಟ್ರಾನಿಕ್‌ ಟೋಲ್ ಕಲೆಕ್ಷನ್‌ನ್ನುʼ ವಾಹನ ದಾಟಿದ ತಕ್ಷಣ ನಿಮ್ಮ ಡಿಜಿಟಲ್ ವಾಲೆಟ್ ಖಾತೆಯಿಂದ ಹಣ ನೇರವಾಗಿ ಕಡಿತಗೊಳ್ಳುತ್ತದೆ. 

ಫಾಸ್ಟ್‌ಟ್ಯಾಗ್ ಖಾತೆಯ ಬಾಕಿ ಮೊತ್ತ ಪರಿಶೀಲಿಸುವುದು ಹೇಗೆ?

1. ಉಚಿತ ಮಿಸ್ ಕಾಲ್

ಈ ಸೇವೆ 24/7 ಹಗಲು ರಾತ್ರಿ ಉಚಿತವಾಗಿರುತ್ತದೆ. ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ  “ಮೈ ಫಾಸ್ಟ್‌ಟ್ಯಾಗ್” ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿ. ನಂತರ ಅದಕ್ಕೆ ಲಾಗಿನ್‌ ಆಗಿ ಅದರಲ್ಲಿ ಕೇಳುವ ಎಲ್ಲ ಮಾಹಿತಿಗಳನ್ನು ದಾಖಲಿಸಿ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಮತ್ತು ಎನ್‌ಎಚ್‌ಎಐ ಪ್ರೀಪೇಡ್ ವಾಲೆಟ್‌ಗೂ ಲಿಂಕ್ ಮಾಡಿ, ಹಾಗೇನಾದರೂ ನಿಮ್ಮ ಖಾತೆಯ ಬಾಕಿ ಮೊತ್ತವನ್ನು ಪರಿಶೀಲಿಸ ಬೇಕಿದ್ದಲ್ಲಿ +91-8884333331 ಈ ನಂಬರ್‌ಗೆ ಮಿಸ್ ಕಾಲ್ ಕೊಡಿ. ತಕ್ಷಣವೇ ಮೊಬೈಲ್ ಸಂಖ್ಯೆಗೆ ನಿಮ್ಮ ಉಳಿದ ಮೊತ್ತವನ್ನು ಸಂದೇಶ ಮೂಲಕ ಕಳುಹಿಸಿಕೊಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ವಾಟ್ಸಪ್ ಹೈಜಾಕ್ ಆಗಬಹುದು ಎಚ್ಚರ! ಇಲ್ಲಿದೆ ಉತ್ತಮ ಸಲಹೆ


2. ಬ್ಯಾಂಕ್ ಅಪ್ಲಿಕೇಶನ್‌ನಲ್ಲಿ ಫಾಸ್ಟ್‌ಟ್ಯಾಗ್ ಮೊತ್ತ ಪರಿಶೀಲಿಸಿ

ಮೊಬೈಲ್ ಬಳಕೆದಾರರು ತಮ್ಮ ಬ್ಯಾಂಕ್ ಅಪ್ಲಿಕೇಶನ್‌ಗೆ ಪ್ರವೇಶಿಸಿ, ಮುಖಪುಟದಲ್ಲಿ ಕಾಣುವ ʻಫಾಸ್ಟ್‌ಟ್ಯಾಗ್ ಪೊರ್ಟಲ್ʼ ಆಯ್ಕೆ ಮೇಲೆ ಕ್ಲಿಕ್ ಮಾಡಿ ಯುಪಿಐ ಲಿಂಕ್ ಆಗಿದ್ಯಾ ಎಂದು ಒಮ್ಮೆ ಪರಿಶೀಲಿಸಿ ನಂತರ ಅದಕ್ಕೆ ಲಾಗಿನ್ ಆಗಿ ಫಾಸ್ಟ್‌ಟ್ಯಾಗ್ ಮೊತ್ತವನ್ನು ಎನ್‌ಎಚ್‌ಎಐ ವಾಲೆಟ್ ಮೂಲಕ ಚೆಕ್ ಮಾಡಬಹುದು.

3. ಪೇಟಿಎಂ ಮೂಲಕ ಕೂಡ ಪರಿಶೀಲಿಸಬಹುದು

ಪೇಟಿಎಂ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿ ನಂತರ ಅದಕ್ಕೆ ಲಾಗಿನ್‌ ಆಗಿ. ಅಲ್ಲಿ ಕಾಣುವ ಬ್ಯಾಲೆನ್ಸ್ ಮತ್ತು ಹಿಸ್ಟರಿ ಆಯ್ಕೆಗೆ ಹೋಗಿ. ಕೆಳಗೆ ಕಾಣುವ ಮೂರು ಗುರುತಿನ ಗೆರೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಅಲ್ಲೇ ಕಾಣುವ ʻಮೈ ರಿಚಾರ್ಜ್ ಮತ್ತು ಬಿಲ್ಸ್ʼ ಮೇಲೆ ಕ್ಲಿಕ್ ಮಾಡಿ. ʻಟ್ರಾನ್ಸಿಟ್ʼ ಆಯ್ಕೆಗೆ ಹೊದರೆ ಅಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಕಾಣಿಸುತ್ತದೆ ಅಲ್ಲಿಗೆ ಹೋಗಿ ನಿಮ್ಮ ಖಾತೆಯ ಬಾಕಿ ಮೊತ್ತವನ್ನು ಕಾಣಬಹುದು.

ಹೀಗೆ ಮೂರು ವಿಧಾನದಲ್ಲಿ ನೀವು ಯಾವುದನ್ನು ಬೇಕಿದ್ದರೂ ಬಳಸಿ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯ ಬಾಕಿ ಮೊತ್ತ ಪರಿಶೀಲಿಸಬಹುದು.

ನಿಮಗೆ ಏನು ಅನ್ನಿಸ್ತು?
4 ವೋಟ್