ಜಾಗತಿಕವಾಗಿ ಗೂಗಲ್ ಸರ್ಚ್ ಎಂಜಿನ್‌ ಕೆಲಕಾಲ ಸ್ಥಗಿತ; ಬಳಕೆದಾರರಿಂದ ಆಕ್ರೋಶ 

Google Image
  • ಯೂಟ್ಯೂಬ್‌ನಲ್ಲಿ ಕೂಡ ಈ ಸಮಸ್ಯೆ ಕಂಡುಬಂದಿದೆ
  • ಸುಮಾರು ಬೆಳಿಗ್ಗೆ 10 ಗಂಟೆಗೆ ಸಮಸ್ಯೆ ಬಗೆಹರಿದಿದೆ

ಪ್ರಪಂಚದ ಅತೀ ದೊಡ್ಡ ಸರ್ಚ್ ಎಂಜಿನ್ ಆದ ಗೂಗಲ್‌ನಲ್ಲಿ ಹಠಾತ್‌ ಕಾರ್ಯಾಚರಣೆಯಲ್ಲಿ ದೋಷ ಕಂಡುಬಂಡಿದೆ, ಈ ಬಗ್ಗೆ 40000 ಸಾವಿರಕ್ಕೂ ಅಧಿಕ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ವರದಿ ಮಾಡಿದ್ದಾರೆ.

ತಾಂತ್ರಿಕ ದೋಷವನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್‌ ಡೌನ್‌ಡೆಕ್ಟರ್‌ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ ಮತ್ತು ವೆಬ್‌ಸೈಟ್‌ ತನ್ನ ವೇದಿಕೆಯಲ್ಲಿ ಬಳಕೆದಾರರು ಸಲ್ಲಿಸಿದ ದೋಷಗಳನ್ನು ಒಳಗೊಂಡಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿ ಸಂಗ್ರಹಿಸಿ ಸ್ಥಗಿತಗಳನ್ನು ಟ್ರ್ಯಾಕ್ ಮಾಡುತ್ತಿದೆ.

ದೋಷಕ್ಕೆ ಸಂಬಂಧಿಸಿ ಗೂಗಲ್ ಸಂದೇಶವೇನು?

"ಸರ್ವರ್ ದೋಷ 500 ಎಂಬ  ದೋಷವನ್ನು ಬಳಕೆದಾರರು ಎದುರಿಸುತ್ತಿದ್ದಾರೆ ಮತ್ತು ಬಳಕೆದಾರರ ವಿನಂತಿ ಪೂರ್ಣಗೊಳಿಸಲು ಗೂಗಲ್‌ನಿಂದ ಸಾಧ್ಯವಾಗಲಿಲ್ಲ. ಸಮಸ್ಯೆ ಹೀಗೆ ಮುಂದುವರಿದರೆ, ದಯವಿಟ್ಟು ಸಮಸ್ಯೆಯನ್ನು ವರದಿ ಮಾಡಿ ಮತ್ತು ಅದಕ್ಕೆ ಕಾರಣವಾದ ಪ್ರಶ್ನೆಯನ್ನು ಗೂಗಲ್ ಸಹಾಯವಾಣಿಗೆ ನಮೂದಿಸಿ. ನಮಗೆ ತಿಳಿದಿರುವುದು ಇಷ್ಟೇ" ಎಂದು ಗೂಗಲ್ ಪುಟದಲ್ಲಿ ಬರೆಯಲಾಗಿದೆ.

Image
Google Image

'ದೋಷ 500' ಸಾಮಾನ್ಯವಾಗಿ ಸರ್ವರ್‌ ಸಮಸ್ಯೆಯನ್ನು ಸೂಚಿಸುತ್ತದೆ. ಹೆಚ್ಚಿನ ಬಳಕೆದಾರರು ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ತಮ್ಮ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆಸಿದ ಬಳಕೆದಾರರು, ಗೂಗಲ್ ಡ್ರೈವ್, ಗೂಗಲ್ ಫೋಟೋ, ಗೂಗಲ್ ಸರ್ಚ್ ಮತ್ತು ಯೂಟ್ಯೂಬ್‌ನಲ್ಲಿ ಕೂಡ ಈ ಸಮಸ್ಯೆ ಕಂಡುಬಂದಿದೆ ಎಂದು ವಿವರ ಹಂಚಿಕೊಂಡಿದ್ದಾರೆ. 

ಎಷ್ಟು ದೇಶಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ?

ಡೌನ್‌ಡೆಕ್ಟರ್‌ ವರದಿಯ ಪ್ರಕಾರ ಚೀನಾ, ಜಪಾನ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಕೀನ್ಯಾ, ಇಸ್ರೇಲ್, ದಕ್ಷಿಣ ಅಮೆರಿಕದ ಭಾಗಗಳು, ಯುರೋಪ್ ಮತ್ತು ಭಾರತ ಸೇರಿದಂತೆ 40ಕ್ಕೂ ಅಧಿಕ ದೇಶಗಳಲ್ಲಿ ಈ ಸಮಸ್ಯೆ ಕಂಡುಬಂದಿರುವುದಾಗಿ ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ? ಸಂದೇಶಗಳನ್ನು ಅಳಿಸಲು ಇನ್ನು ಹೆಚ್ಚು ಸಮಯ ಬೇಕಿದೆ: ವಾಟ್ಸ್ಆ್ಯಪ್ 

ಗೂಗಲ್‌ನಲ್ಲಿ 500 ಸರ್ವರ್ ದೋಷವನ್ನು ಈಗಾಗಲೇ ದೃಢಿಪಡಿಸಲಾಗಿದೆ. ಸಾಫ್ಟ್‌ವೇರ್‌ ನವೀಕರಿಸುತ್ತಿರುವ ಕಾರಣದಿಂದ ಹೀಗೆ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಇದನ್ನು ಸರಿ ಮಾಡಲು ಗೂಗಲ್ ಪ್ರಯತ್ನಿಸುತ್ತಿದೆ ಎಂದು ಗೂಗಲ್ ಸಂಸ್ಥೆಯ ಅಧಿಕಾರಿಯೊಬ್ಬರು ಬ್ಲೂಮ್‌ಬರ್‌ಗ್‌ ಸುದ್ದಿ ಸಂಸ್ಥೆಗೆ ವರದಿ ಮಾಡಿದ್ದಾರೆ. 

ಗೂಗಲ್ ಸರ್ಚ್ ಎಂಜಿನ್‌ನಲ್ಲಿ ದೋಷಗಳು ಅಪರೂಪ. ಆದರೆ, ಸಾವಿರಾರು ಬಳಕೆದಾರರು ನ್ಯೂಯಾರ್ಕ್ ಸಮಯ ರಾತ್ರಿ ಸುಮಾರು 9 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 6.30) ಸಮಸ್ಯೆಗಳನ್ನು ಎದುರಿಸಿರುವುದಾಗಿ ಹೇಳಿದ್ದಾರೆ. ಸುಮಾರು ಬೆಳಿಗ್ಗೆ 10 ಗಂಟೆಗೆ ಸಮಸ್ಯೆ ಬಗೆಹರಿದಿದೆ ಎಂದು ಬಳಕೆದಾರರು ಟ್ವಿಟರ್ ಮೂಲಕ ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್