ಜಾಗತಿಕ ತಂತ್ರಜ್ಞಾನಕ್ಕೆ ಭಾರಿ ಹೊಡೆತ; ನೌಕರರ ಪಾಲಿನ ಸುವರ್ಣ ಕಾಲ ಅಂತ್ಯ

Unemployment Image
  • ವಿಶ್ವಾದ್ಯಂತ ಕೆಲ ಸಂಸ್ಥೆಗಳು ನೇಮಕಾತಿಗೆ ವಿರಾಮ ನೀಡಿದ್ದಾರೆ
  • ಟೆಸ್ಲಾ ಕಂಪನಿ ನೌಕರರ ಸಂಬಳದಲ್ಲಿ ಶೇ. 10ರಷ್ಟು ಕಡಿತಗೊಳಿಸಿದೆ

ಕಾರ್ಮಿಕರಿಗೆ ಒಳ್ಳೆಯ ಅವಕಾಶ ಕೊಡುತ್ತಿದ್ದ ತಂತ್ರಜ್ಞಾನ ಕಂಪನಿಗಳು ಕಳೆದ ವರ್ಷದಿಂದ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿರುವುದು ಜಾಗತಿಕ ವಿದ್ಯಮಾನವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಮಿಕರ ಪಾಲಿಗಿದ್ದ ಸುವರ್ಣಾವಕಾಶಗಳು ಮುಗಿದಿವೆ ಎಂದು ಉದ್ಯೋಗ ಮಾರುಕಟ್ಟೆಯ ವಿವರಗಳು ಸೂಚಿಸುತ್ತಿವೆ.

ಸಿಲಿಕಾನ್ ವ್ಯಾಲಿಯಿಂದ ಆಸ್ಟಿನ್‌ವರೆಗೆ ದಶಕಗಳ ಕಾಲ ಲಾಭದಲ್ಲಿದ್ದ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿವೆ. ಈ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಕಂಪನಿಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಉದ್ಯೋಗದಲ್ಲಿನ ನೇಮಕಾತಿಗಳು ಕೂಡ ಮಂದಗತಿಯಲ್ಲಿ ಸಾಗುತ್ತಿವೆ. ಈ ಪ್ರಕ್ರಿಯೆ ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸುವ ಉದ್ಯಮದ ಸಾಮರ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಅಮೆರಿಕದಂತಹ ದೇಶಗಳ ಆರ್ಥಿಕ ಬೆಳವಣಿಗೆ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಯಿದೆ.

ಯುರೋಪ್‌ನಲ್ಲಿ ಯುದ್ಧದ ವಾತಾವರಣ ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿದರ ಹೆಚ್ಚಿದೆ. ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ- ವಹಿವಾಟುಗಳು ಸ್ಥಗಿತಗೊಂಡಿದ್ದ ಕಾರಣ ಜಾಗತಿಕವಾಗಿ ಹಣದುಬ್ಬರ ಹೆಚ್ಚಾಗಿತ್ತು. ಇದೀಗ ವಿವಿಧ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿದ್ದು, ನೂತನ ವಹಿವಾಟುಗಳು ನಡೆಯುತ್ತಿವೆ.

ಮೇ 23ರಂದು ಸ್ನ್ಯಾಪ್ ಚಾಟ್ ಸಂಸ್ಥೆ ತನ್ನ ಆರ್ಥಿಕತೆಯ ವರದಿ ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ಸಂಸ್ಥೆಯು ನಷ್ಟ ಅನುಭವಿಸಿದ್ದು ಸ್ಪಷ್ಟವಾಗಿತ್ತು. ಹಾಗಾಗಿಯೇ ನೌಕರರ ನೇಮಕಾತಿ ನಿಧಾನಗೊಳಿಸಲಾಗುತ್ತಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿತ್ತು. 

ವಿಶ್ವಾದ್ಯಂತ ಕೆಲ ಸಂಸ್ಥೆಗಳಲ್ಲಿ ಉದ್ಯೋಗಗಳು ಖಾಲಿ ಇವೆ. ಆದರೆ, ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಕಾರಣ ನೇಮಕಾತಿಗೆ ವಿರಾಮ ನೀಡಲಾಗಿದೆ. ಇತ್ತೀಚೆಗಷ್ಟೇ ಟೆಸ್ಲಾ ಕಂಪನಿ ಕೂಡ ವಿದ್ಯುತ್ ವಾಹನ (Electronic Vehicle) ತಯಾರಕರ ಸಂಬಳದಲ್ಲಿ ಶೇ. 10ರಷ್ಟನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

ಕೋವಿಡ್ ಸಮಯದಲ್ಲಿ ಜನರಿಗೆ ಅತಿ ವೇಗವಾಗಿ ಸೇವೆಗಳನ್ನು ಒದಗಿಸಲು ಅಮೆಜಾನ್ ಕಂಪನಿಯು ಹೊಸ ಕೆಲಸಗಾರರನ್ನು ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ನೌಕರರನ್ನು ತೆಗೆದುಕೊಳ್ಳುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆಜಾನ್ ವ್ಯಾಪಾರವೂ ಕುಸಿಯುತ್ತಿದೆ.

ಈ ಸುದ್ದಿ ಓದಿದ್ದೀರಾ? ವಾರದ ಟೆಕ್ ನೋಟ | ಭಾರತದ ರೈಲ್ವೆ ನಿಲ್ದಾಣದಲ್ಲಿ ಇ-ಚಾರ್ಜಿಂಗ್ ವ್ಯವಸ್ಥೆ

ಫೇಸ್‌ಬುಕ್ ಮತ್ತು ಮೆಟಾ ಕಂಪನಿಗಳು ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಿವೆ. ಮೆಟಾ ಕಂಪನಿಯು ಸದ್ಯಕ್ಕೆ ಯಾವುದೇ ನೇಮಕಾತಿ ಮಾಡುತ್ತಿಲ್ಲ ಎಂದು ಹೇಳಿದ ಬಳಿಕ ನಿರುದ್ಯೋಗಿಗಳು #ಮೆಟಾಪ್ಲೇಆಫ್ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಅಸಮಾಧಾನ ಹೊರಹಾಕಿದ್ದರು. ಈ ಹ್ಯಾಷ್‌ಟ್ಯಾಗ್ ಲಿಂಕ್ಡ್ಇನ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಟ್ವಿಟರ್‌ ಅನ್ನು ಎಲಾನ್ ಮಸ್ಕ್ ಸ್ವಾಧೀನಪಡಿಸಿದ ಮೇಲೆ ಹಲವು ಬದಲಾವಣೆಗಳನ್ನು ತರುವ ಜೊತೆಗೆ ನೇಮಕಾತಿ ಪ್ರಕ್ರಿಯೆಗಳನ್ನೂ ನಿಲ್ಲಿಸಿದ್ದಾರೆ. 

ಲೇ ಆಫ್ಸ್ ಸಂಸ್ಥೆ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ  1,26,000ಕ್ಕೂ ಹೆಚ್ಚು ತಂತ್ರಜ್ಞಾನ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ ಕಂಪನಿ ಸ್ಟ್ರೀಮಿಂಗ್ ಷೇರುಗಳು 2021ರ ನವೆಂಬರ್‌ನಲ್ಲಿ ಶೇ. 71ರಷ್ಟು ಕುಸಿದಿದೆ. ಹೀಗಾಗಿ ಕಂಪನಿಯು 150ಕ್ಕೂ ಅಧಿಕ ನೌಕರರನ್ನು ವಜಾಗೊಳಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಬ್ಲೂಮ್ ಬರ್ಗ್ ಟೆಕ್ನಾಲಜಿ ಟೆಲಿವಿಷನ್ ಸಂದರ್ಶನದಲ್ಲಿ ಉಬರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ದಾರಾ ಖೋಸ್ರೋಶಾಹಿ, “2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟೆಕ್ ಉದ್ಯಮವು ಭಾರಿ ಹೊಡೆತ ಅನುಭವಿಸಿತು. ಇದರಿಂದ ಮೆಟಾ, ಟ್ವಿಟರ್ ಮತ್ತು ಉಬರ್‌ನಂತಹ ಕಂಪನಿಗಳು ಭಾರಿ ನಷ್ಟ ಅನುಭವಿಸಿದವು. ಆದರೆ, ಟೆಕ್ ಉತ್ಪನ್ನಗಳು ಎಷ್ಟು ಮುಖ್ಯ ಎಂದು ಜನರಿಗೆ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ತಿಳಿದಿದೆ. ಈತ್ತಿಚಿನ ದಿನಗಳಲ್ಲಿ ಕೋವಿಡ್ ವೈರಸ್ ಅಬ್ಬರ ಕಡಿಮೆಯಾಗಿದ್ದು, ತಂತ್ರಜ್ಞಾನ ಕ್ಷೇತ್ರವು ಕೊಂಚ ಚೇತರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದು ಹೇಳಿದ್ದಾರೆ.

1999ರಿಂದ ಕ್ಯಾಲಿಫೋರ್ನಿಯಾದಲ್ಲಿ ನಿರುದ್ಯೋಗ ಪ್ರಮಾಣ ಶೇ. 2ರಷ್ಟು ಇತ್ತು. ಆದರೆ, ಕೋವಿಡ್ ಕಾಣಿಸಿಕೊಂಡ ಮೇಲೆ ನಿರುದ್ಯೋಗ ಪ್ರಮಾಣ ಶೇ. 5.9ರಷ್ಟು ಏರಿದೆ ಎಂದು ಕ್ಯಾಲಿಫೋರ್ನಿಯಾದ ಆರ್ಥಿಕ ತಜ್ಞರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್