ಜೋಕರ್ ಸ್ಪೈವೇರ್ ಹರಡುವ ನಾಲ್ಕು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದ ಗೂಗಲ್ ಸಂಸ್ಥೆ

Joker Image
  • ಜೋಕರ್‌ ಸ್ಪೈವೇರ್‌ನಿಂದ ಬ್ಯಾಂಕ್ ಖಾತೆ ಮತ್ತು ದಾಖಲೆ ಕದಿಯುವ ಪ್ರಯತ್ನ
  • ಈಗಾಗಲೇ ಜೋಕರ್ ದಾಳಿಯಿಂದಾಗಿ ಹಣ ಕಳೆದುಕೊಂಡಿರುವ ಗ್ರಾಹಕರು

ಗೂಗಲ್ ಪ್ಲೇಸ್ಟೋರ್‌ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಬಳಕೆದಾರರು ಡೌನ್‌ಲೋಡ್ ಮಾಡಿರುವ ನಾಲ್ಕು ಅಪ್ಲಿಕೇಶನ್‌ಗಳನ್ನು ಕಳೆದ ವಾರದಿಂದ ಗೂಗಲ್ ಸಂಸ್ಥೆ ನಿರ್ಬಂಧಿಸಿದೆ. ಈ ಅಪ್ಲಿಕೇಶನ್‌ಗಳಿಂದ ಮೊಬೈಲ್‌ಗೆ ʻಜೋಕರ್ʼ ಎಂಬ ವೈರಸ್ ಹರಡಿದೆ. ಈ ಸ್ಪೈವೇರ್ 2017ರಲ್ಲಿ ಪತ್ತೆಹಚ್ಚಲಾಗಿತ್ತು. ಹಲವು ವರ್ಷಗಳ ಬಳಿಕ ಮತ್ತೆ ಗೂಗಲ್ ಪ್ಲೇಸ್ಟೋರ್ ಮೂಲಕ ಹೊರಬಂದಿದೆ.

ಹರ್ಮಿಟ್, ಪೆಗಾಸಸ್‌ನಂತಹ ಸ್ಪೈವೇರ್‌ಗಳು ಸ್ಮಾರ್ಟ್‌ಪೋನ್‌ಗಳಿಗೆ ಹಾನಿಮಾಡುತ್ತಿವೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಹಣಕಾಸಿನಲ್ಲಿ ಬಾರಿ ವಂಚನೆ ನಡೆದಿದೆ ಎಂದು ಗೂಗಲ್ ಸಂಸ್ಥೆ ಹಲವು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಗೂಗಲ್ ಸಂಸ್ಥೆ ಈಗಾಗಲೇ ಬಳಕೆದಾರರಿಗೆ ಕೆಲವು ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಿಂದ ಅನ್ಇನ್‌ಸ್ಟಾಲ್‌ ಮಾಡುವಂತೆ ಎಚ್ಚರಿಸಿದೆ ಮತ್ತು ಇಂತಹ ಅಪ್ಲಿಕೇಶನ್‌ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ನಿಷೇಧಿಸಿದೆ.

ಜೋಕರ್ ಸ್ಪೈವೇರ್‌ನ ಫೀಚರ್‌ಗಳು

ಈ ಸ್ಪೈವೇರ್ ಬಳಕೆದಾರರ ಸ್ಮಾರ್ಟಪೋನ್‌ನಲ್ಲಿರುವ ಎಲ್ಲ ದಾಖಲೆಗಳು ಬ್ಯಾಂಕ್ ಖಾತೆ ಸೇರಿದಂತೆ ಹಲವು ಮಾಹಿತಿಯನ್ನು ಕದಿಯುವ ಪ್ರಯತ್ನ ಮಾಡಲಿದೆ. ಇದರಿಂದ ಹಲವು ಗ್ರಾಹಕರು ತಮ್ಮ ಹಣ ಕಳೆದುಕೊಂಡಿದ್ದಾರೆ ಎಂದು ಗೂಗಲ್ ತಿಳಿಸಿದೆ. 

ಜೋಕರ್ ವೈರಸ್ ಮೊಬೈಲ್‌ ಮೇಲೆ ನಿಯಂತ್ರಣ ಸಾಧಿಸಿ ಬಳಕೆದಾರರಿಗೆ ತಿಳಿಯದಂತೆ ಅನಾಮಿಕ ಸಂದೇಶಗಳನ್ನು ಕಳುಹಿಸುವುದು ಮತ್ತು ಧ್ವನಿ ಸಂಗ್ರಹ ಮಾಡುವ ಕೆಲಸವನ್ನೂ ಮಾಡಲಿದೆ ಎಂದು ಟೆಕ್ ತಜ್ಞರು ಮಾಹಿತಿ ನೀಡಿದ್ದಾರೆ.  

ಜೋಕರ್ ಸ್ಪೈವೇರ್ ಮೊಬೈಲ್‌ಗೆ ವೈರಸ್‌ ಎಂಬೇಡ್ ಮಾಡಲಿದೆ ಮತ್ತು ಗೂಗಲ್ ಪ್ಲೇಸ್ಟೋರ್‌ನಲ್ಲಿ ಒಂದು ಲಕ್ಷ ಮಂದಿ ಈ ಸ್ಪೈವೇರ್ ಅಪ್ಲಿಕೇಶನ್‌ಗಳನ್ನು ತಿಳಿಯದೆ ಬಳಸುತ್ತಿದ್ದಾರೆ. ಸ್ಮಾರ್ಟ್ ಎಸ್ಎಂಎಸ್ ಸಂದೇಶಗಳು, ಬ್ಲಡ್ ಪ್ರೆಷರ್ ಮಾನಿಟರ್, ವಾಯ್ಸ್ ಲಾಂಗ್ವೇಜ್ ಮತ್ತು ಕ್ವಿಕ್ ಎಸ್ಎಂಎಸ್‌ಗಳು ಜೋಕರ್ ಸ್ಪೈವೇರ್‌ ಹರಡುವ ಪ್ರಮುಖ ಅಪ್ಲಿಕೇಶನ್‌ಗಳಾಗಿವೆ ಎಂದು ಪ್ರಡಿಯೊ ಸಂಸ್ಥೆ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಉಲ್ಲೇಖಿಸಿದೆ. 

ಈ ಸುದ್ದಿ ಓದಿದ್ದೀರಾ? ಸ್ಮಾರ್ಟ್‌ಪೋನ್‌ಗಳನ್ನು ಗುರಿಯಾಗಿಸುತ್ತಿವೆಯೇ ಹರ್ಮಿಟ್ ಸ್ಪೈವೇರ್; ಭದ್ರತೆ ಹೇಗೆ?

ಸ್ಮಾರ್ಟ್ ಎಸ್ಎಂಎಸ್ ಸಂದೇಶಗಳು ಮತ್ತು ಬ್ಲಡ್ ಪ್ರೆಶರ್ ಮಾನಿಟರ್ ಇವೆರಡು ಅಪ್ಲಿಕೇಶನ್‌ಗಳಲ್ಲಿ ತುಂಬ ಅಪಾಯಕಾರಿ ಫೀಚರ್‌ಗಳನ್ನು ಅಳವಡಿಸಲಾಗಿದೆ. ಒಮ್ಮೆ ಈ ಅಪ್ಲಿಕೇಶನ್‌ಗಳನ್ನು ಅಳವಡಿಸಿದರೆ ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ಮತ್ತು ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ಗಳನ್ನು ಕದಿಯುವ ಸಾಮರ್ಥ್ಯ ಹೊಂದಿದೆ ಎಂದು ಪ್ರಡಿಯೊ ಸಂಸ್ಥೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಇಂತಹ ವೈರಸ್‌ಗಳನ್ನು ತಡೆಯಲು ಅನಾಮಿಕ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಎಚ್ಚರವಹಿಸಿ.

ನಿಮಗೆ ಏನು ಅನ್ನಿಸ್ತು?
0 ವೋಟ್