ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಗೂಗಲ್ ಡೂಡಲ್‌ ಕೊಡುಗೆ

Google for India Image
  • ಈ ಬಾರಿ 75ನೇ ಸ್ವಾತಂತ್ರೋತ್ಸವ ಆಚರಿಸಲಿರುವ ಭಾರತ
  • ಗೂಗಲ್‌ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ₹ 2 ಲಕ್ಷ ಬಹುಮಾನ

2022ರ ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75ರ ಸಂಭ್ರಮ. ಈ ದಿನದ ಅಂಗವಾಗಿ ಮೊದಲ ಬಾರಿಗೆ ಗೂಗಲ್ ಸರ್ಚ್‌ ಬೋರ್ಡ್‌ನಲ್ಲಿ ಡೂಡಲ್ ನಿರ್ಮಾಣ ಮಾಡಲಿದೆ ಎಂದು ತಿಳಿಸಿದೆ. 

ಇದೊಂದು ವಿಶೇಷ ಡೂಡಲ್ ಆಗಿದೆ, ಇದರ ಜೊತೆಗೆ ಗೂಗಲ್ ಭಾರತದ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ಸ್ವಾತಂತ್ರ್ಯ ದಿನವನ್ನು ಗೌರವಿಸಲು ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಆಚರಣೆಗೆ ʻಇಂಡಿಯಾ ಕಿ ಉಡಾನ್ʼ ಎಂದು ಹೆಸರಿಡಲಾಗಿದೆ. ಇದು ಗೂಗಲ್ ಕಲೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಇದರ ಸಂಪೂರ್ಣ ಮಾಹಿತಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ. 

ಡೂಡಲ್‌ನ ಸಂಗ್ರಹದಲ್ಲಿ ಏನಿರಲಿದೆ?

ಈ ಡೂಡಲ್ ಸಂಗ್ರಹದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕಕ್ಕೆ ಸಂಬಂಧಿಸಿದ ಡೂಡಲ್ ನಿರ್ಮಾಣ ಮಾಡುವ ಜೊತೆಗೆ ಭಾರತದ ಐತಿಹಾಸಿಕ ಚಿತ್ರಗಳು ಮತ್ತು ಅದಕ್ಕೆ ಗೌರವ ಸಲ್ಲಿಸುತ್ತದೆ. ಕಳೆದ 75 ವರ್ಷಗಳ ಅಪ್ರತಿಮ ಕ್ಷಣಗಳನ್ನು ಕೂಡ ಒಳಗೊಂಡಿದೆ.

Image
Google for India Image

ಭಾರತದ ಕಲೆ ಮತ್ತು ಸಾಂಸ್ಕೃತಿಕ ಸಚಿವಾಲಯದ ಸಹಾಕಾರದೊಂದಿಗೆ ಗೂಗಲ್ ಸಂಸ್ಥೆ ಸರ್ಕಾರದ ವರ್ಷವಿಡೀ 'ಆಝಾದಿ ಕಾ ಅಮೃತ್ ಮಹೋತ್ಸವ'ವನ್ನು ಬೆಂಬಲಿಸಲು 1947ರಿಂದ ಭಾರತೀಯರ ಕೊಡುಗೆಗಳು ಮತ್ತು ಭಾರತದ ವಿಕಾಸವನ್ನು ಪ್ರದರ್ಶಿಸುವ ಜೊತೆಗೆ ಮಾಹಿತಿಯುಕ್ತ ಆನ್‌ಲೈನ್‌ ವಿಷಯವನ್ನು ತಲುಪುವತ್ತ ಗಮನಹರಿಸಲಿದೆ. 

ʻಮುಂದಿನ 25 ವರ್ಷದಲ್ಲಿ ಭಾರತ ಹೇಗಿರಲಿದೆ?ʼ ಎಂಬ ಸ್ಪರ್ಧೆಯನ್ನು ಸಹ ʻಗೂಗಲ್ ಫಾರ್ ಡೂಡಲ್ʼ ಅಡಿಯಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾರಂಭಿಸಲಿದೆ ಎಂದು ಗೂಗಲ್ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | 348 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಈ ಸ್ಪರ್ಧೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆರಂಭಿಸಲಿದೆ. ಇದರಲ್ಲಿ ಭಾರತದಾದ್ಯಂತ ವಿವಿಧ ಸಂಸ್ಥೆಗಳ ಪ್ರದರ್ಶನಗಳ ಜೊತೆಗೆ 10 ಪ್ರತಿಭಾವಂತ ಕಲಾವಿದರು ರಚಿಸಿದ 120ಕ್ಕೂ ಹೆಚ್ಚು ಚಿತ್ರಗಳು ಮತ್ತು 21 ಕಥೆಗಳನ್ನು ಅನ್ವೇಷಿಸಲು ಅನುಮತಿಸಲಿದೆ. ಅಷ್ಟೇ ಅಲ್ಲದೆ ಮಹಿಳೆ, ಸಾಹಿತ್ಯ, ಕಲೆ ಮತ್ತು ಪ್ರವಾಸ ಸೇರಿದಂತೆ ಹಲವು ವಿಭಾಗವನ್ನು ಈ ಕಾರ್ಯಕ್ರಮದಲ್ಲಿ ಒಳಗೊಂಡಿದೆ.

ಭಾರತದಲ್ಲಿ ಗೂಗಲ್‌ನ ಹತ್ತು ವರ್ಷದ ಸಂಭ್ರಮದ ಅಂಗವಾಗಿ ಗೂಗಲ್ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ನೂರಕ್ಕೂ ಹೆಚ್ಚು ಪಾಲುದಾರರೊಂದಿಗೆ ಭಾರತದ ಪ್ರತಿ ರಾಜ್ಯದ ಕಲೆ, ಚಿತ್ರಕಲೆ, ಸಾಹಿತ್ಯ ಮತ್ತು ಪ್ರಸಿದ್ಧ ತಾಣಗಳನ್ನು ಗೌರವಿಸುವ ಹಾಗೂ ಗುರುತಿಸುವ ಕೆಲಸವನ್ನು ಮಾಡಲಿದೆ. ಇದರ ಜೊತೆಗೆ ಈ ಡೂಡಲ್ ನಡೆಸುವ ಸ್ಪರ್ಧೆಯ ವಿಜೇತರಿಗೆ 2₹ ಲಕ್ಷ ಬಹುಮಾನ ನೀಡಲಿದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್