ಜುಲೈ 30ರಿಂದ ಪಂಚ ಭಾಷೆಯಲ್ಲಿ ಉಚಿತ ಫ್ಯಾಕ್ಟ್ ಚೆಕ್ ಶಿಬಿರ ಶುರು ಮಾಡಲು ಮುಂದಾದ ಗೂಗಲ್

Google Image
  • ಭಾರತದಲ್ಲಿ ಸುಮಾರು 40,000 ವಿದ್ಯಾರ್ಥಿಗಳಿಗೆ 10 ಭಾಷೆಗಳಲ್ಲಿ ತರಬೇತಿ ನೀಡಿದೆ
  • ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, 2022 

ಗೂಗಲ್ ಭಾರತದಲ್ಲಿ ಫ್ಯಾಕ್ಟ್ ಚೆಕ್ ನ್ಯೂಸ್ ಟ್ರೈನಿಂಗ್ ತರಬೇತಿ ನೆಟ್‌ವರ್ಕ್‌ನ್ನು ಐದು ಭಾಷೆಗಳಿಗೆ ವಿಸ್ತರಿಸಿದೆ. ಈಗ ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಒಳಗೊಂಡಿದೆ.

ʻಡೇಟಾ ಲೀಡ್ಸ್ʼ ಸಹಭಾಗಿತ್ವದಲ್ಲಿ ಈ ಶಿಬಿರ ಶುರು ಮಾಡಲಾಗಿದ್ದು, ಗೂಗಲ್ ಸರ್ಚ್ ಇಂಜಿನ್ ಮತ್ತು ದೊಡ್ಡ ತಂತ್ರಜ್ಞಾನ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನ್ಯೂಸ್‌ರೂಮ್‌ಗಳು, ಪತ್ರಕರ್ತರು ತಪ್ಪು ಮಾಹಿತಿ, ನಕಲಿ ದಾಖಲೆಗಳನ್ನು ನೀಡುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಈ ಶಿಬಿರ ಆರಂಭಿಸಲಾಗಿದೆ ಮತ್ತು ಇದರಲ್ಲಿ ನೂರಕ್ಕೂ ಹೆಚ್ಚು ತರಬೇತಿದಾರರು ತರಬೇತಿಯನ್ನು ನೀಡಲಿದ್ದಾರೆ ಎಂದು ಗೂಗಲ್ ತಿಳಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳು ಮೂರು ದಿನಗಳ ಸಂಪೂರ್ಣ ತರಬೇತಿ ಪಡೆದು ಮತ್ತು 'ಟ್ರೈನ್ ದಿ ಟ್ರೇನರ್' ಅಂದರೆ ಇಂದಿನ ತರಬೇತಿದಾರರು ಮುಂದಿನ ದಿನಗಳಲ್ಲಿ ಇನ್ನು ಹಲವು ಜನರಿಗೆ ತರಬೇತಿ ನೀಡಲ್ಲಿದ್ದಾರೆ ಎಂಬ ಭರವಸೆಯನ್ನು ಗೂಗಲ್‌ ನೀಡಿದೆ. ನೂತನ ಪಂಚ ಭಾಷೆಗಳು, ಡೇಟಾ ನಿರ್ವಾಹಕರು ಹಾಗೂ ವಿಜ್ಞಾನ ಪತ್ರಿಕೋದ್ಯಮದ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಗೂಗಲ್ ಹೇಳಿದೆ. ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, 2022. 

ಈ ಸುದ್ದಿ ಓದಿದ್ದೀರಾ?  ಒಂದು ನಿಮಿಷದ ಓದು | ಚೈನೀಸ್ ಪೋನ್ ತಯಾರಕರಾದ ವಿವೋ ಸಂಸ್ಥೆ ಮೇಲೆ ಇಡಿ ದಾಳಿ

"ಜಾಗತಿಕ ಪರಿಶೀಲನಾ ತಜ್ಞರು, ಭಾರತೀಯ ಫ್ಯಾಕ್‌ ಚೆಕ್‌ ಸಂಸ್ಥೆ ಮತ್ತು ವಿಜ್ಞಾನ ಪತ್ರಕರ್ತರ ಸಂಘ ಸೇರಿ ಈ ಫ್ಯಾಕ್ಟ್‌ ಚೆಕ್‌ ಶಿಬಿರ ನಡೆಸಲಿದ್ದಾರೆ ಇದಕ್ಕೆ ಅಮಿಟಿ ವಿಶ್ವವಿದ್ಯಾಲಯ, ಜಾಗರಾನ್ ಲೇಕ್ಸಿಟಿ ವಿಶ್ವವಿದ್ಯಾಲಯ ಮತ್ತು ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯೊಂದಿಗೆ ಸಮಾಲೋಚಿಸಿ ನಿರ್ಮಿಸಲಾದ ಪಠ್ಯಕ್ರಮವನ್ನು ತರಬೇತಿಗೆ ಬಳಸಲಾಗುವುದು" ಎಂದು ಗೂಗಲ್ ಸಂಸ್ಥೆ ವರದಿ ಮಾಡಿದೆ.

2018ರಲ್ಲಿ ಶುರುವಾದ ಈ ಅಕಾಡೆಮಿ ಭಾರತದಲ್ಲಿ ಸುಮಾರು 40,000 ವರದಿಗಾರರು, ಸಂಪಾದಕರು, ಮಾಧ್ಯಮ ವಿದ್ಯಾರ್ಥಿಗಳು ಮತ್ತು ಮಾಧ್ಯಮ ಶಿಕ್ಷಕರಿಗೆ ಸುಮಾರು 10 ಭಾಷೆಗಳಲ್ಲಿ ತರಬೇತಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಗೂಗಲ್ ನ್ಯೂಸ್ ಇನಿಶಿಯೇಟಿವ್ ಇಂಡಿಯಾಗೆ ಲಾಗ್‌ಇನ್‌ ಹಾಗಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್