ಗೂಗಲ್ ಮೇಲ್ಸ್‌ಗಳು ಗೊಂದಲಮಯವೆ? ಫಿಲ್ಟರ್ ಮಾಡಲು ಇಲ್ಲಿದೆ ಸುಲಭ ಉಪಾಯ

Google Mail Filter
  • ಫಿಲ್ಟರ್ ಬಳಸಿ ಸ್ಪಾಮ್ ಸಂದೇಶಗಳನ್ನು ವಿಂಗಡಿಸಬಹುದು
  • ಈ ಫೀಚರ್‌ ಗೊಂದಲ ಕಡಿಮೆ ಮಾಡಲು ಸಹಾಯ ಮಾಡಲಿದೆ

ಗೂಗಲ್‌ನಲ್ಲಿ ಬರುವ ಅನಿರೀಕ್ಷಿತ ಮೇಲ್ಸ್‌ಗಳನ್ನು ಫಿಲ್ಟರ್ ಮಾಡಲು ಗೂಗಲ್ ಸಂಸ್ಥೆ ತನ್ನದೇ ಆದ ನೂತನ ಫೀಚರ್‌ ಪರಿಚಯಿಸಲು ಮುಂದಾಗಿದೆ. ಈ ವೈಶಿಷ್ಟ್ಯ ಬಳಸಿ ಬಳಕೆದಾರರು ಸ್ಪಾಮ್ ಸಂದೇಶಗಳನ್ನು ಫಿಲ್ಟರ್ ಮಾಡಬಹುದಾಗಿದೆ.

ಪ್ರಸ್ತುತ ಬಳಕೆದಾರರು, ದೊಡ್ಡ ಕಂಪನಿಗಳು ಯಾವುದೇ ಸಂದೇಶಗಳನ್ನು ರವಾನೆ ಮಾಡಲು ಮೇಲ್ಸ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಇತ್ತೀಚೆಗೆ ಕಂಪನಿಗಳು ನಕಲಿ ಸಂದೇಶಗಳನ್ನು ಕಳುಹಿಸುತ್ತಾರೆ, ಇದರಿಂದ ಗೂಗಲ್ ಮೇಲ್ಸ್ ಬಳಕೆದಾರರಿಗೆ ಯಾವುದು ಮುಖ್ಯವಾದ ಮೇಲ್ಸ್ ಎಂದು ತಿಳಿಯಲು ಬಾರಿ ಗೊಂದಲವಾಗಬಹುದು. ಆದರಿಂದ ಈ ನೂತನ ಫೀಚರ್‌ನ್ನು ಗೂಗಲ್ ಹೊರತಂಡಿದೆ. 

ಏನಿದು ಗೂಗಲ್ ಮೇಲ್ಸ್ ಫಿಲ್ಟರ್?

ಪ್ರತಿದಿನ ಬಳಕೆದಾರರ ಮೊಬೈಲ್‌ಗೆ ಅನಿರೀಕ್ಷಿತ ಸಂದೇಶಗಳು ಬರಲು ಪ್ರಾರಂಭಿಸಿದ್ದರೆ, ಅವುಗಳನ್ನು ಪ್ರತ್ಯೇಕವಾಗಿ ಸ್ಪಾಮ್ ಮೇಲ್ಸ್‌ಗಳೆಂದು ಎಂದು ಪರಿಗಣಿಸಲಾಗುತ್ತದೆ. ಇದನ್ನು ತಡೆಯಲು ಬಳಸುವ ಯಂತ್ರವೇ ಗೂಗಲ್ ಫಿಲ್ಟರ್.

ಇದರಿಂದ ಬಳಕೆದಾರರು ಸ್ಪಾಮ್ ಸಂದೇಶಗಳು ಸೇರಿದಂತೆ ಉಳಿದ ಎಲ್ಲ ಮೇಲ್ಸ್‌ಗಳನ್ನು ವಿಂಗಡನೆ ಮಾಡಬಹುದು. ಹೀಗೆ ಮಾಡುವುದರಿಂದ ಬಳಕೆದಾರರಿಗೆ ಸುಲಭವಾಗಿ ತಮಗೆ ಬೇಕಾದ ಮೇಲ್ಸ್‌ಗಳನ್ನು ಮಾತ್ರ ತೆರೆಯಲು ಅನುವು ಮಾಡಿಕೊಡುತ್ತದೆ ಮತ್ತು ಸ್ಪಾಮ್ ಮೇಲ್ಸ್‌ಗಳಿಂದ ಉಳಿದ ಮೇಲ್ಸ್‌ಗಳನ್ನು ದೂರವಿಡಲು ಸಹಾಯ ಮಾಡಲಿದೆ. 

Image
Google Mail Filter

ಗೂಗಲ್ ಫಿಲ್ಟರ್‌ಗೆ ಅನುವು ಮಾಡಲು ಇಲ್ಲಿದೆ ಹಲವು ವಿಧಾನ 

ಬಳಕೆದಾರರು ಹಲವು ರೀತಿಯಲ್ಲಿ ಗೂಗಲ್ ಫಿಲ್ಟರ್‌ ಅನ್ನು ಬಳಸಬಹುದು. ಆದರೆ ಫಿಲ್ಟರ್‌ ಅನ್ನು ರಚಿಸುವುದು ಉತ್ತಮ. 

  • ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಮೇಲ್ಸ್‌ಗೆ ಲಾಗ್ಇನ್ ಆಗಿ 
  • ಮೇಲ್ಸ್‌ನಲ್ಲಿ ಕಾಣುವ ʻಶೋ ಸರ್ಚ್ʼ ಆಯ್ಕೆಯ ಮೇಲೆ ಕ್ಲಿಕ್ ಮಾಡಿ 
  • ನೀವು ಹುಡುಕುತ್ತಿದ ಮೇಲ್ಸ್ ಹೆಸರನ್ನು ಸರ್ಚ್ ಬಾರ್‌ನಲ್ಲಿ ಹುಡುಕಿ
  • ನಂತರ ಅಲ್ಲೇ ಕಾಣಿಸುವ ʻಆಕ್ಷನ್ʼ ಮೇಲೆ ಕ್ಲಿಕ್ ಮಾಡಿ 
  • ಈಗ ಫಿಲ್ಟರ್ ರಚಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಗೂಗಲ್ ಫಿಲ್ಟರ್‌ನ್ನು ಅನುಮತಿಸಿ

ಈ ಸುದ್ದಿ ಓದಿದ್ದೀರಾ? ವಾಟ್ಸ್ಆ್ಯಪ್‌ನಲ್ಲಿ ನೂತನ ಫೀಚರ್ ಲಭ್ಯ; ಗ್ರೂಪ್ ನಿರ್ವಾಹಕರಿಗೆ ಸಿಹಿ ಸುದ್ದಿ

ಹೀಗೆ ಮಾಡುವುದರಿಂದ ನಿಮ್ಮ ಗೂಗಲ್ ಫಿಲ್ಟರ್ ಕಾರ್ಯನಿರ್ವಹಿಸಲು ಶುರು ಮಾಡಲಿದೆ. ಇನ್ನೊಂದು ರೀತಿಯಲ್ಲಿ ಮಾಡುವುದಾದರೆ ಅಲ್ಲೇ ಕಾಣುವ ʻಗೇರ್ ಐಕಾನ್ʼ ಆಯ್ಕೆ ಮಾಡಿ, ನಂತರ ಸೆಟ್ಟಿಂಗ್ಸ್‌ಗೆ ಹೋಗಿ ʻಫಿಲ್ಟರ್ ಆಂಡ್ ಬ್ಲಾಕ್ ಅಡ್ರಸೆಸ್ʼ ಮೇಲೆ ಕ್ಲಿಕ್ ಮಾಡಿದ ಬಳಿಕ ಫಿಲ್ಟರ್ ರಚಿಸಿ ಎಂಬ ಆಯ್ಕೆಯನ್ನು ಆರಿಸುವ ಮೂಲಕವೂ ಬಳಕೆದಾರರು ವಿಂಡೋಸ್‌ಲ್ಲಿ ಗೂಗಲ್ ಫಿಲ್ಟರ್‌ ಬಳಸಬಹುದಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್