ನವೆಂಬರ್‌ನಲ್ಲಿ ಹ್ಯಾಂಗ್ಔಟ್ಸ್ ಅಪ್ಲಿಕೇಶನ್ ಸ್ಥಗಿತಗೊಳಿಸಲು ಗೂಗಲ್ ಚಿಂತನೆ

Google Hangouts Image
  • ನವೆಂಬರ್‌ನಿಂದ ಜಿ-ಮೇಲ್ ಚಾಟ್ ಬಳಸುವಂತೆ ಗೂಗಲ್ ಸಲಹೆ 
  • ವೆಬ್‌ನಲ್ಲಿ ಹ್ಯಾಂಗ್ಔಟ್ಸ್ ಈ ವರ್ಷದ ಅಂತ್ಯದವರೆಗೆ ಲಭ್ಯವಿರಲಿದೆ

ಗೂಗಲ್ ಹ್ಯಾಂಗ್ಔಟ್ಸ್ ಬಳಕೆದಾರರಿಗೆ ಚಾಟ್ ಜಿ-ಮೇಲ್ ಅಥವಾ ಚಾಟ್ ಅಪ್ಲಿಕೇಶನ್‌ಗೆ ಬದಲಾಯಿಸಲು ಎಚ್ಚರಿಕೆಗಳನ್ನು ಕಳುಹಿಸುವ ಮೂಲಕ ನವೆಂಬರ್‌ನಲ್ಲಿ ಹ್ಯಾಂಗ್ಔಟ್ಸ್‌ನ್ನು ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. 

ಕ್ರೋಮ್‌ನಲ್ಲಿ ಹ್ಯಾಂಗ್ಔಟ್ಸ್ ಬಳಸುವ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿರುವ ಜಿ-ಮೇಲ್ ಚಾಟ್ ಬಳಸುವಂತೆ ಗೂಗಲ್ ಸಲಹೆ ನೀಡಿದೆ.  

ಈ ವರ್ಷದ ನವೆಂಬರ್‌ನಲ್ಲಿ ಹ್ಯಾಂಗ್ಔಟ್ಸ್ ನಿವೃತ್ತಿಯಾಗಲಿದೆ, ಅದಕ್ಕೂ ಮೊದಲು ಬಳಕೆದಾರರು ತಮ್ಮ ಎಲ್ಲಾ ಡೇಟಾವನ್ನು ಡೌನ್ಲೋಡ್ ಮಾಡಬೇಕೆಂದು ಗೂಗಲ್‌ ನೋಟಿಫಿಕೇಶನ್ ಕಳಿಸುವ ಮೂಲಕ ಎಚ್ಚರಿಸಿದೆ. ಸಂಭಾಷಣೆಗಳನ್ನು ಸ್ವಯಂಚಾಲಿತವಾಗಿ ಹ್ಯಾಂಗ್ಔಟ್ಸ್‌ನಿಂದ ಚಾಟ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?  ರೈತ ಸಂಘಟನೆ, ವಿಪಕ್ಷ ನಾಯಕರ ಖಾತೆ ನಿರ್ಬಂಧಕ್ಕೆ ಟ್ವಿಟರ್‌ಗೆ ಕೇಂದ್ರದ ಮನವಿ

ಇದಾಗ್ಯೂ, ಹ್ಯಾಂಗ್ಔಟ್ಸ್ ಡೇಟಾದ ನಕಲನ್ನು ಇರಿಸಿಕೊಳ್ಳಲು ಬಯಸುವವರಿಗೆ ನವೆಂಬರ್‌ನಲ್ಲಿ ಹ್ಯಾಂಗ್ಔಟ್ಸ್ ಲಭ್ಯವಿರುವುದಿಲ್ಲ. ಇದಕ್ಕೂ ಮೊದಲೇ ತಮ್ಮ ಡೇಟಾ ಡೌನ್ಲೋಡ್ ಮಾಡಿ ಗೂಗಲ್ ಟೇಕ್ಔಟ್‌ಗೆ ವರ್ಗಾಯಿಸಲು ಬಳಕೆದಾರರನ್ನು ಗೂಗಲ್‌ ಕೋರಿದೆ. 

ವೆಬ್‌ನಲ್ಲಿ ಹ್ಯಾಂಗ್ಔಟ್ಸ್ ಈ ವರ್ಷದ ಅಂತ್ಯದವರೆಗೆ ಲಭ್ಯವಿರುತ್ತದೆ ಎಂದು ಗೂಗಲ್ ಬಹಿರಂಗಪಡಿಸಿದೆ. ವೆಬ್‌ನಲ್ಲಿ ಹ್ಯಾಂಗ್ಔಟ್ಸ್ ಸ್ಥಗಿತಗೊಳಿಸುವ ಮೊದಲು ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಲಾಗುತ್ತದೆ ಎಂದು ಗೂಗಲ್ ತಮ್ಮ  ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ವರದಿ ಮಾಡಿದೆ.

Image
Google Hangouts Image

ಹ್ಯಾಂಗ್ಔಟ್ಸ್‌ನ ಆವೃತ್ತಿ ಗೂಗಲ್ ಚಾಟ್ ಆಗಿದೆ. ಇದರಲ್ಲಿ ಶೀಟ್‌ಗಳು, ಸ್ಲೈಡ್, ವಿಷಯ-ಆಧಾರಿತ ಸಹಯೋಗಕ್ಕಾಗಿ ಮೀಸಲಾದ ಸ್ಥಳ ಸೇರಿದಂತೆ ಚಾಟ್ ಗ್ರೂಪ್‌ಗಳು ಮತ್ತು ಟೀಮ್ ಆಲೋಚನೆಗಳನ್ನು ಹಂಚಿಕೊಳ್ಳಲು, ಡಾಕ್ಯುಮೆಂಟ್‌ಗಳಲ್ಲಿ ಕೆಲಸ ಮಾಡಲು ಹಾಗೂ ಫೈಲ್‌ಗಳನ್ನು ಕಾರ್ಯನಿರ್ವಹಿಸಲು, ಒಂದೇ ಸ್ಥಳದಿಂದ ಅನುಮತಿಸಲಿದೆ ಎಂದು ಗೂಗಲ್ ತಿಳಿಸಿದೆ. 

“ಮುಂದಿನ ದಿನಗಳಲ್ಲಿ ಗೂಗಲ್ ಚಾಟ್ ಹೆಚ್ಚು ಹೆಸರು ಮಾಡಲಿದೆ. ಶೀಘ್ರದಲ್ಲಿ ನೀವು ಚಾಟ್‌ನ್ನು ಬಳಸಲು ಅನುಮತಿ ಸಿಗಲಿದೆ. ಅಷ್ಟೇ ಅಲ್ಲದೆ ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಗೂಗಲ್ ನೋಟ್ಸ್, ಗೂಗಲ್ ಕಾಲಿಂಗ್‌ನಂತಹ ವೈಶಿಷ್ಟ್ಯಗಳನ್ನು ಕೂಡ ಅನುಭವಿಸಬಹುದು. ಆದರಿಂದ ಬಳಕೆದಾರರು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು" ಎಂದು ಗೂಗಲ್ ಸಂಸ್ಥೆ ಹೇಳಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್