ಗೂಗಲ್ ಟಿವಿ ಶೀಘ್ರದಲ್ಲೇ ಆಂಡ್ರಾಯ್ಡ್ ಪ್ಲೇಸ್ಟೋರ್‌ನಲ್ಲಿ ಲಭ್ಯ

Google TV
  • ಪ್ಲೇಸ್ಟೋರ್‌ನಿಂದ ಚಲನಚಿತ್ರ ಮತ್ತು ಟಿವಿ ವಿಭಾಗವನ್ನು ತಗೆದುಹಾಕಲಾಗಿದೆ
  • ಗೂಗಲ್ ಟಿವಿ ಹೈಲೆಟ್ ಮತ್ತು ಫೀಡ್ ಎಂಬ ಎರಡು ವೈಶಿಷ್ಟ್ಯಗಳನ್ನು ಒಳಗೊಂಡಿದೆ

ಆಂಡ್ರಾಯ್ಡ್  ಪ್ಲೇಸ್ಟೋರ್‌ನಲ್ಲಿ ಈಗಾಗಲೇ ಚಲನಚಿತ್ರ ಮತ್ತು ಟಿವಿ ವಿಭಾಗವಿದ್ದು, ಅದರ ಬದಲಿಗೆ ಗೂಗಲ್ ಟಿವಿ ತರಲು ಗೂಗಲ್ ಸಂಸ್ಥೆ ಮುಂದಾಗಿದೆ.

ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್  ಪ್ಲೇಸ್ಟೋರ್‌ನಲ್ಲಿರುವ ಚಲನಚಿತ್ರ ಮತ್ತು ಟಿವಿ ವಿಭಾಗ ತಗೆದುಹಾಕಲಿದ್ದೇವೆ ಎಂದು ಮಾರ್ಚ್‌ನಲ್ಲಿ ಗೂಗಲ್ ಸಂಸ್ಥೆ ಘೋಷಿಸಿತ್ತು. ಅದೇ ರೀತಿ ಗೂಗಲ್ ಟಿವಿಗೆ ಚಾಲನೆ ನೀಡಿದ ಗೂಗಲ್, ಬಳಕೆದಾರರು ಇನ್ನು ಮುಂದೆ  ಪ್ಲೇಸ್ಟೋರ್‌ನಲ್ಲಿ ಚಲನಚಿತ್ರಗಳನ್ನು ಹುಡುಕಲು ಮತ್ತು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಗೂಗಲ್ ಟಿವಿಯಲ್ಲೇ ಲಭ್ಯವಿದ್ದು, ಹೈಲೆಟ್ ಮತ್ತು ಫೀಡ್ ಎಂಬ ಎರಡು ನೂತನ ವೈಶಿಷ್ಟ್ಯಗಳನ್ನು ಒಳಗೊಂದಿದೆ.

ಏನಿದು ಗೂಗಲ್ ಟಿವಿ?

ಗೂಗಲ್ ಟಿವಿ ಅಪ್ಲಿಕೇಶನ್‌ನಲ್ಲಿ ಚಲನಚಿತ್ರಗಳು ಮತ್ತು ನಿಮ್ಮ  ನೆಚ್ಚಿನ ಕಾರ್ಯಕ್ರಮಗಳನ್ನು ಖರೀದಿಸಬಹುದು ಮತ್ತು ಬಾಡಿಗೆಗೆ ಪಡೆಯಬಹುದು. ಅಷ್ಟೇ ಅಲ್ಲದೆ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ಈ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು. ಗೂಗಲ್ ಟಿವಿ ನಿಮಗೆ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ ತೆರೆದು ಅಲ್ಲಿ ಗೂಗಲ್ ಟಿವಿ ಅಪ್ಲಿಕೇಶನ್‌ನ್ನು ಡೌನ್ಲೋಡ್ ಮಾಡಬಹುದು.

ಈ ಸುದ್ದಿ ಓದಿದ್ದೀರಾ? ಮಿಸ್ ಕಾಲ್ ನೀಡಿ ಫಾಸ್ಟ್‌ಟ್ಯಾಗ್ ಖಾತೆಯ ಬಾಕಿ ಮೊತ್ತ ಪರಿಶೀಲಿಸಿ

ಗೂಗಲ್ ಟಿವಿಯನ್ನು ಖರೀದಿಸುವುದು ಹೇಗೆ?

ನೀವು ಈಗಾಗಲೇ ಖರೀದಿಸಿದ ಹಳೆಯ ಚಂದಾದಾರರಾಗಿದ್ದಲ್ಲಿ ಗೂಗಲ್ ಪ್ಲೇಸ್ಟೋರ್‌ನೊಂದಿಗೆ ಮುಂದುವರಿಯಬಹುದು. ಆದರೆ ಮುಂದಿನ ದಿನಗಳಲ್ಲಿ ನೀವು ಹೊಸ ಚಂದಾದಾರರಾಗ ಬೇಕಿದ್ದಲ್ಲಿ ನಿಮ್ಮ ಪ್ಲೇ ಕ್ರೇಡಿಟ್ ಅಥವಾ ಗಿಫ್ಟ್ ಕಾರ್ಡ್ ಬಳಸಿ ಖರೀದಿಸಬಹುದು.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಚಲನಚಿತ್ರ ಮತ್ತು ಟಿವಿ ವಿಭಾಗವನ್ನು ತೆಗೆದ ಬಳಿಕ ಈಗ ಬರೀ ಪುಸ್ತಕ, ಆಟ ಮತ್ತು ಅಪ್ಲಿಕೇಶನ್‌ಗಳನ್ನು ಮಾತ್ರ ಕಾಣಬಹುದು. ಆದರೆ, ನಾಲ್ಕನೇ ಆಯ್ಕೆಯಾಗಿ ಆಫರ್‌ಗಳು ಮತ್ತು ಪ್ಲೇ ಪಾಸ್‌ ಹೊಂದಿರುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಇಮೇಲ್‌ಗಳನ್ನು ದುರುಪಯೋಗ ಮಾಡಿಕೊಂಡಿರುವುದಿದೆ, ಆದ್ದರಿಂದ ಅಂತಹ ಅಪ್ಲಿಕೇಶನ್‌ಗಳನ್ನು ಪತ್ತೆಹಚ್ಚಿ ಗೂಗಲ್ ಪ್ಲೇಸ್ಟೋರ್‌ನಿಂದ ನಿಷೇಧಿಸಲಾಗುವುದು ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್